UPSC Recruitment: ಪ್ರೊಫೆಸರ್, ಟ್ಯೂಟರ್ ಹುದ್ದೆಗಳ ನೇಮಕ್ಕೆ ಅರ್ಜಿ ಆಹ್ವಾನ

By Suvarna News  |  First Published Dec 1, 2021, 3:50 PM IST

ಕೇಂದ್ರ ಲೋಕಾ ಸೇವಾ ಆಯೋಗ (UPSC)ವು ಪ್ರಾಧ್ಯಾಪಕ ಮತ್ತು ಟ್ಯೂಟರ್ ಹುದ್ದೆಗಳ ನೇಮಕ ಪ್ರಕ್ರಿಯೆಯನ್ನು ಆರಂಭಿಸಿದೆ. ದೆಹಲಿ ಸೇರಿದಂತೆ ದೇಶದಲ್ಲಿ ಯಾವುದೇ  ಭಾಗದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯ ಆರಂಭವಾಗಿದ್ದು, ಡಿಸೆಂಬರ್ 16 ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿದೆ.


ಕೇಂದ್ರ ಲೋಕಸೇವಾ ಆಯೋಗ (Union Public Service Commission-UPSC) , ಖಾಲಿ ಇರುವ ವಿವಿಧ ಪ್ರೊಫೆಸರ್ ಹಾಗೂ ಟ್ಯೂಟರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ.  ಒಟ್ಟು 21 ಪ್ರಾಧ್ಯಾಪಕ (Professor) ಮತ್ತು ಬೋಧಕ (Tutor) ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ದೆಹಲಿ ಅಥವಾ ದೇಶದಲ್ಲಿ ಎಲ್ಲಿಯಾದರೂ ಪೂರ್ಣ ಸಮಯದ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಅರ್ಜಿ ಪ್ರಕ್ರಿಯೆಯು ನವೆಂಬರ್ 29ರಿಂದ ಶುರುವಾಗಿದ್ದು, ಡಿಸೆಂಬರ್ 16 ರವರೆಗೂ ಅರ್ಜಿ ಸಲ್ಲಿಕೆಗೆ ಕಾಲಾವಕಾಶವಿದೆ.  ಪ್ರೊಫೆಸರ್ (ಕಂಟ್ರೋಲ್ ಸಿಸ್ಟಮ್), ಅಸೋಸಿಯೇಟ್ ಪ್ರೊಫೆಸರ್ (ಕಂಪ್ಯೂಟರ್ ಸೈನ್ಸ್), ಅಸೋಸಿಯೇಟ್ ಪ್ರೊಫೆಸರ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್), ಅಸೋಸಿಯೇಟ್ ಪ್ರೊಫೆಸರ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್), ಅಸೋಸಿಯೇಟ್ ಪ್ರೊಫೆಸರ್ (ಮೆಕ್ಯಾನಿಕಲ್ ಇಂಜಿನಿಯರಿಂಗ್), ಟ್ಯುಟಲೂರ್ ಇಂಜಿನಿಯರಿಂಗ್, ಟ್ಯುಟಲೂರ್ ಎಂಜಿನಿಯರಿಂಗ್ ಪ್ರೊಫೆಸರ್ ಸೇರಿ ಒಟ್ಟು 21 ಹುದ್ದೆಗಳನ್ನ ಈ ನೇಮಕಾತಿಯಲ್ಲಿ ಭರ್ತಿ ಮಾಡಿಕೊಳ್ಳಲಾಗುವುದು.  ಸಹಪ್ರಾಧ್ಯಾಪಕ ಮತ್ತು ಟ್ಯೂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್‌.ಡಿ ಮತ್ತು ಬಿ.ಎಸ್ಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್ ಮಾಡಿ.

ಸಹಪ್ರಾಧ್ಯಾಪಕ ಮತ್ತು ಟ್ಯೂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳ ವಯೋಮಿತಿಯು ಗರಿಷ್ಟ 50 ವರ್ಷದ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು.  ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇಮಕಾತಿ ಪರೀಕ್ಷೆ (ಆರ್‌ಟಿ)/ಸಂದರ್ಶನ ಮತ್ತು ದಾಖಲೆ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.  ಸಹಪ್ರಾಧ್ಯಾಪಕ ಮತ್ತು ಟ್ಯೂಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.  

Tap to resize

Latest Videos

Railway Jobs: ಆಗ್ನೇಯ ರೇಲ್ವೆಯಲ್ಲಿ 520 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಕೆ ಆರಂಭ 

ಪ್ರೊಫೆಸರ್ (Control System)- 1 ಹುದ್ದೆ, ಅಸೋಸಿಯೇಟ್ ಪ್ರೊಫೆಸರ್ (Computer Science)- 1 ಹುದ್ದೆ, ಅಸೋಸಿಯೇಟ್ ಪ್ರೊಫೆಸರ್ (Electrical Engineering)- 1 ಹುದ್ದೆ, ಅಸೋಸಿಯೇಟ್ ಪ್ರೊಫೆಸರ್ (Electronics & Communication Engineering)- 1 ಹುದ್ದೆ, ಅಸೋಸಿಯೇಟ್ ಪ್ರೊಫೆಸರ್ (Mechanical Engineering)-2 ಹುದ್ದೆ, ಅಸೋಸಿಯೇಟ್ ಪ್ರೊಫೆಸರ್ (Metallurgy/ Production Engineering)- 1 ಹುದ್ದೆ ಹಾಗೂ ಬೋಧಕ (Tutor)- 14 ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲಾಗುತ್ತದೆ. 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಮೊತ್ತ 25/-ರೂ (ಜನ್/ಒಬಿಸಿ/ಇಡಬ್ಲ್ಯೂಎಸ್ ಪುರುಷ ಅಭ್ಯರ್ಥಿಗಳು) ಅನ್ನು ಎಸ್‌ಬಿಐನ ಯಾವುದೇ ಶಾಖೆಯಲ್ಲಿ ನಗದು ಅಥವಾ ಎಸ್‌ಬಿಐನ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಿ ಪಾವತಿಸಬಹುದು. ಅದಲ್ಲದೇ ಯುಪಿಎಸ್ಸಿ ಉಪ ನಿರ್ದೇಶಕರ ನೇಮಕಾತಿ ಅಧಿಸೂಚನೆ 2021 ರಲ್ಲಿ ಹೇಳಿರುವಂತೆ SC/ST/PwBD/ಮಹಿಳಾ ಅಭ್ಯರ್ಥಿಗಳು ಶುಲ್ಕ ವಿನಾಯಿತಿ ನೀಡಲಾಗುವುದು. ಯುಪಿಎಸ್‌ಸಿ ನೇಮಕಾತಿಯ ಸಹಪ್ರಾಧ್ಯಾಪಕ ಮತ್ತು ಟ್ಯೂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://www.upsconline.nic.in/ora/VacancyNoticePub.php ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಡಿಸೆಂಬರ್ 16 ರೊಳಗೆ ಅರ್ಜಿ ಸಲ್ಲಿಸಬಹುದು.

IAF AFCAT Exam: ವಾಯು ಪಡೆಯ 317 ಹುದ್ದೆಗಳಿಗೆ ನೇಮಕಾತಿ!

ಕೊನೆಯ ದಿನಾಂಕಕ್ಕೂ ಮುನ್ನ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವುದು ಉತ್ತಮ. ಇದಲ್ಲದೆ, ಅಭ್ಯರ್ಥಿಗಳು ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರತಿಯನ್ನು ಇಟ್ಟುಕೊಳ್ಳಬೇಕು. ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ, ಶಾರ್ಟ್‌ಲಿಸ್ಟ್ ಆಗುವ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಅರ್ಜಿ ನಮೂನೆಯಲ್ಲಿ ಸಲ್ಲಿಸಿದ ಮಾಹಿತಿಯ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಮಾಡಿ ನೇರ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳು ಅಗತ್ಯ ದಾಖಲೆಗಳು ಅಥವಾ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.

click me!