ವಿವಿಧ ಹುದ್ದೆಗಳಿಗೆ UPSC ನೇಮಕಾತಿ: ಅರ್ಜಿ ಹಾಕಿ

By Suvarna News  |  First Published Dec 28, 2020, 5:01 PM IST

ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿರುವ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಬಗ್ಗೆ ಇನ್ನಷ್ಟು ವಿವರ ಈ ಕೆಳಗಿನಂತಿದೆ.


ನವದೆಹಲಿ, (ಡಿ.28): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಒಟ್ಟು 29 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ಕೃಷಿ ಇಲಾಖೆ, ಸಂಸ್ಕೃತಿ ಸಚಿವಾಲಯದ ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಶಿಪ್ಪಿಂಗ್ ಸಚಿವಾಲಯಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. 

Latest Videos

undefined

 ಆಸ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ 15.1.2021ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುದ್ದೆ ವಿವರ
* ಜೂನಿಯರ್ ಸೈಂಟಿಫಿಕ್ ಆಫೀಸರ್ - 1
* ಡೈರೆಕ್ಟರ್ (ಕನ್ಸರ್ವೇಷನ್) - 1
* ಡೆಪ್ಯುಟಿ ಸೂಪರಿಂಟೆಂಡಿಂಗ್ ಆರ್ಕಿಯಾಲಾಜಿಕಲ್ ಇಂಜಿನಿಯರ್ - 3
* ಅಸಿಸ್ಟೆಂಟ್ ಕ್ಲಿನಿಕಲ್ ಎಂಬ್ರ್ಯೊಲಾಜಿಸ್ಟ್ (ಭ್ರೂಣಶಾಸಜ್ಞ)- 1
* ಡಯಾಲಿಸಿಸ್ ಮೆಡಿಕಲ್ ಆಫೀಸರ್ (ಡಿಎಂಒ) - 5
* ಸ್ಪೆಷಲಿಸ್ಟ್ ಗ್ರೇಡ್ 3 ಅಸಿಸ್ಟೆಂಟ್ ಪ್ರೊಸೆಸರ್​ (ಅನಾಟಮಿ, ಓಟೊ-ರೈನ್ಹೋ-ಲಾರಿಂಗೋಲಜಿ)- 13
* ಇಂಜಿನಿಯರ್ ಆಯಂಡ್ ಶಿಪ್ ಸರ್ವೇಯರ್-ಕಮ್- ಡೆಪ್ಯುಟಿ ಡೈರೆಕ್ಟರ್ ಜನರಲ್ (ಟೆಕ್ನಿಕಲ್) - 5

 ಈ ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ 19 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 6 ಸ್ಥಾನ, ಎಸ್ಸಿಗೆ- 1, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

ವಿದ್ಯಾರ್ಹತೆ: ಸಿವಿಲ್ ಇಂಜಿನಿಯರಿಂಗ್, ಮೆರೈನ್ ಇಂಜಿನಿಯರಿಂಗ್, ಮೆಡಿಸನ್, ಸರ್ಜರಿಯಲ್ಲಿ ಪದವಿ, ಮೈಕ್ರೋಬಯೋಲಜಿ/ ಸಾಯಿಲ್ ಸೈನ್ಸ್/ ಅಗ್ರಿಕಲ್ಚರ್ ಕೆಮಿಸ್ಟ್ರಿ/ ಪ್ಲಾಂಟ್ ಪ್ಯಾಥೋಲಜಿ/ ಹಾರ್ಟಿಕಲ್ಚರ್‍ನಲ್ಲಿ ಸ್ನಾತಕೋತ್ತರ ಪದವಿ, ಎಂಬಿಬಿಎಸ್‍ಪದವಿ ಪಡೆದಿರಬೇಕು. ಹುದ್ದೆಗೆ ಅನುಗುಣವಾಗಿ ವೃತ್ತಿ ಅನುಭವ ಅವಶ್ಯ.

ವಯೋಮಿತಿ: ಹುದ್ದೆಗೆ ಅನುಗುಣವಾಗಿ ಗರಿಷ್ಠ 33 ರಿಂದ 50 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ಹಾಗೂ ವರ್ಗಗಳ ಅನ್ವಯ 3 ರಿಂದ 5 ವರ್ಷ ವಯೋ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ: ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾದಲ್ಲಿ, ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಹಾಗೂ ವೃತ್ತಿ ಅನುಭವ ಆಧರಿಸಿ ಶಾರ್ಟ್ ಲಿಸ್ಟ್ ಸಿದ್ಧಪಡಿಸಲಾಗುವುದು. ನಂತರ ನೇಮಕಾತಿ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಅಥವಾ ಕೇವಲ ಸಂದರ್ಶನ ಮೂಲಕವೂ ಆಯ್ಕೆ ಮಾಡಬಹುದಾಗಿದೆ.

ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ, ಅಂಗವಿಲಕ, ಮಹಿಳಾ ಅಭ್ಯರ್ಥಿಗಳನ್ನು ಹೊರತು ಪಡಿಸಿ ಉಳಿದ ಅಭ್ಯರ್ಥಿಗಳಿಗೆ 25 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಈ ಬಗ್ಗೆ ಇನ್ನುಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!