ಜೂನ್ 27 ರಂದು ನಿಗದಿಯಾಗಿದ್ದ UPSC ಪ್ರಿಲಿಮ್ಸ್ ಮುಂದಕ್ಕೆ, ಹೊಸ ಡೇಟ್ ಫಿಕ್ಸ್

By Suvarna News  |  First Published May 13, 2021, 3:28 PM IST

* ಯುಪಿಎಸ್ ಇ ನಡೆಸುವ ನಾಗರೀಕ ಸೇವೆ (ಪ್ರಿಲಿಮ್ಸ್) ಪರೀಕ್ಷೆ ಮುಂದೂಡಿಕೆ
* ಕೊರೋನಾ ಕಾರಣಕ್ಕೆ ಪರೀಕ್ಷೆ ನಡೆಸುವುದು ಅಸಾಧ್ಯ
* ಅಕ್ಟೋಬರ್  10  ರಂದು ಪರೀಕ್ಷೆ ನಡೆಸಲು ತೀರ್ಮಾನ
* ಜೂನ್ 27 ರಂದು ನಡೆಯಬೇಕಿದ್ದ ಪರೀಕ್ಷೆ


ನವದೆಹಲಿ (ಮೇ 12) ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)  ಮಹತ್ವದ ಸೂಚನೆಯೊಂದನ್ನು ಅಭ್ಯರ್ಥಿಗಳಿಗೆ ನೀಡಿದೆ. ಜೂನ್  27  ರಂದು ನಡೆಯಬೇಕಿದ್ದ ನಾಗರಿಕ ಸೇವೆಗಳ ಪ್ರಾಥಮಿಕ(ಪ್ರಿಲಿಮನರಿ)  ಪರೀಕ್ಷೆಯನ್ನು ಅಕ್ಟೋಬರ್  10ಕ್ಕೆ ಮುಂದೂಡಲಾಗಿದೆ.

ಸದ್ಯದ ಕೊರೋನಾ ಪರಿಸ್ಥಿಯಲ್ಲಿ ಪರೀಕ್ಷೆ ನಡೆಸಲು ಅಸಾಧ್ಯವಾಗಿದ್ದು ಅಕ್ಟೋಬರ್  10  ರಂದು ನಡೆಸುವ  ತೀರ್ಮಾನ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.  ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್), ಭಾರತೀಯ ವಿದೇಶಾಂಗ ಸೇವೆ(ಐಎಫ್ ಎಸ್), ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಮತ್ತು ಇತರ ಇಲಾಖೆಗಳ ನೇಮಕಾತಿ ಪರೀಕ್ಷೆ ನಿಗದಿಯಾಗಿತ್ತು. 

Latest Videos

undefined

ಕರ್ನಾಟಕಕ್ಕೆ ಸಿಕ್ಕ ಹೊಸ ಯೋಜನೆಯಿಂದ ಆರು ಸಾವಿರ ಮಂದಿಗೆ ಉದ್ಯೋಗ

ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ 22 ಹುದ್ದೆಗಳು ಸೇರಿದಂತೆ 712 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು.  ಪ್ರಾಥಮಿಕ ಪರೀಕ್ಷೆಗಳು, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯುತ್ತದೆ. 

click me!