ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ: SSLC, PUC ಆದವರಿಗೂ ಅವಕಾಶ

By Suvarna News  |  First Published Apr 7, 2021, 4:04 PM IST

ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.


ಬೆಂಗಳೂರು, (ಏ.07): ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ದೆಹಲಿಯ ತೆರಿಗೆ ಮುಖ್ಯ ಆಯುಕ್ತರ ಕಚೇರಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು 2 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ದಿನಾಂಕ 15.4.2021ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Tap to resize

Latest Videos

undefined

ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುದ್ದೆ ವಿವರ
* ಇನ್‍ಕಮ್ ಟ್ಯಾಕ್ಸ್ ಇನ್‍ಸ್ಪೆಕ್ಟರ್ - 1
* ಟ್ಯಾಕ್ಸ್ ಅಸಿಸ್ಟೆಂಟ್ - 4
* ಸ್ಟೆನೋಗ್ರ್ರಾಫರ್ ಗ್ರೇಡ್2 - 3
* ಮಲ್ಟಿ ಟಾಸ್ಕಿಂಗ್ ಸ್ಟಾಫ್​ - 6

ವಿದ್ಯಾರ್ಹತೆ: SSLC, ದ್ವಿತೀಯ ಪಿಯುಸಿ, ಪದವಿ ಪಡೆದಿರಬೇಕು. ಟ್ಯಾಕ್ಸ್ ಅಸಿಸ್ಟೆಂಟ್‍ಗೆ ಪ್ರತಿ ಗಂಟೆಗೆ 8,000 ಪದಗಳ ಡೇಟಾ ಎಂಟ್ರಿ ವೇಗ ಹೊಂದಿರಬೇಕು. ಸ್ಟೆನೋಗ್ರಾಫರ್​ಗೆ ಡಿಕ್ಟೇಷನ್ ಪ್ರತಿ ನಿಮಿಷಕ್ಕೆ 80 ಪದಗಳ ಟೈಪಿಂಗ್ ಸ್ಪೀಡ್, ಇಂಗ್ಲಿಷ್‍ನಲ್ಲಿ ಪ್ರತಿ ನಿಮಿಷಕ್ಕೆ 50 ಪದ, ಹಿಂದಿ 65 ಪದಗಳ ಪ್ರತಿಲೇಖನ ಕೌಶಲ ಹೊಂದಿರಬೇಕು.

ವಯೋಮಿತಿ: ಎಲ್ಲ ಹುದ್ದೆಗಳಿಗೂ ಕನಿಷ್ಠ 18 ವರ್ಷ. ಇನ್‍ಕಮ್ ಟ್ಯಾಕ್ಸ್ ಇನ್‍ಸ್ಪೆಕ್ಟರ್​ಗೆ ಗರಿಷ್ಠ 30 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 27 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ ಶ್ರೇಣಿ: ಇನ್‍ಕಮ್ ಟ್ಯಾಕ್ಸ್ ಆಫೀಸರ್​ಗೆ ಮಾಸಿಕ 34,800 ರೂ. ಉಳಿದ ಹುದ್ದೆಗಳಿಗೆ ಮಾಸಿಕ 20,200 ರೂ. ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ, ಸ್ಥಳ, ಸ್ಥಳ ಹಾಗೂ ಇತರ ಮಾಹಿತಿಯನ್ನು ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಮೇಲ್ ಮೂಲಕ ತಿಳಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಹಾಗೂ ಕ್ರೀಡಾ ವಿಭಾಗದಲ್ಲಿ ಯಾವ ಕ್ರೀಡೆ ಎಂಬುದನ್ನು ಅರ್ಜಿಯಲ್ಲಿ ತಿಳಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ: ಅಗತ್ಯ ದಾಖಲೆಗಳ ಸಹಿತ ಅರ್ಜಿಯನ್ನುThe Deputy Commissioner of Income-tax (Hqrs.- Personnel), Room No. 378A, C.R. Building, I.P. Estate, New Delhi-110 002 ವಿಳಾಸಕ್ಕೆ ಕಳುಹಿಸಬೇಕು.

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮಾಡಿ

click me!