UPSC Civil Services: ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಟಾಪ್‌ 4 ರ‍್ಯಾಂಕ್‌ ಮಹಿಳೆಯರ ಪಾಲು

By BK AshwinFirst Published May 23, 2023, 2:57 PM IST
Highlights

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ – upsc.gov.in ಪರಿಶೀಲಿಸಬಹುದಾಗಿದೆ.  

ನವದೆಹಲಿ (ಮೇ 23,2023): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಈ ವರ್ಷವೂ ಮಹಿಳೆಯರು ಉನ್ನತ ಸ್ಥಾನಗಳಲ್ಲಿ ಪ್ರಾಬಲ್ಯ ಸಾಧಿಸಿದ್ದು, ಮೊದಲ 4 ಸ್ಥಾನಗಳು ಮಹಿಳೆಯರ ಪಾಲಾಗಿದೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇಶಿತಾ ಕಿಶೋರ್ ನಂ. 1 ಸ್ಥಾನ ಪಡೆದುಕೊಂಡಿದ್ದು, ನಂತರ ಗರಿಮಾ ಲೋಹಿಯಾ, ಉಮಾ ಹರತಿ ಎನ್ ಮತ್ತು ಸ್ಮೃತಿ ಮಿಶ್ರಾ ಕ್ರಮವಾಗಿ 2, 3 ಹಾಗೂ 4 ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವರ್ಷದ ಯುಪಿಎಸ್‌ಸಿಯ ವ್ಯಕ್ತಿತ್ವ ಪರೀಕ್ಷೆಯಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ – upsc.gov.in ಪರಿಶೀಲಿಸಬಹುದಾಗಿದೆ. 933 ಅಭ್ಯರ್ಥಿಗಳು ಈ ವರ್ಷದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ ಎಂದು ಯುಪಿಎಸ್‌ಸಿ ಮಂಗಳವಾರ ಮಾಹಿತಿ ನೀಡಿದೆ. 

Latest Videos

ಇದನ್ನು ಓದಿ: ದಿನಕ್ಕೆ 1 ಗಂಟೆ ಈ ವಿಡಿಯೋಗಳನ್ನ ನೋಡಲು 8 ಸಾವಿರಕ್ಕೂ ಹೆಚ್ಚು ಹಣ ನೀಡುತ್ತೆ ಕಂಪನಿ!

UPSC ಅಂತಿಮ ಫಲಿತಾಂಶ 2022 ನೇಮಕಾತಿಗೆ ಶಿಫಾರಸು ಮಾಡಲಾದ ಒಟ್ಟು 933 ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪೈಕಿ ಸಾಮಾನ್ಯ ವರ್ಗದಿಂದ 345 ಅಭ್ಯರ್ಥಿಗಳು, ಇಡಬ್ಲ್ಯೂಎಸ್ ವರ್ಗದಿಂದ 99 ಅಭ್ಯರ್ಥಿಗಳು, ಓಬಿಸಿ ವರ್ಗದಿಂದ 263 ಅಭ್ಯರ್ಥಿಗಳು, ಎಸ್‌ಸಿ ವರ್ಗದಿಂದ 154 ಅಭ್ಯರ್ಥಿಗಳು ಮತ್ತು ಎಸ್‌ಟಿ ವರ್ಗದಿಂದ 72 ಯಶಸ್ವಿ ಅಭ್ಯರ್ಥಿಗಳ ಸಮಗ್ರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಶಿಫಾರಸು ಮಾಡಿದ ಅಭ್ಯರ್ಥಿಗಳ ಜೊತೆಗೆ, UPSC ಅಂತಿಮ ಫಲಿತಾಂಶ 2022 ಅಭ್ಯರ್ಥಿಗಳ ಮೀಸಲು ಪಟ್ಟಿಯನ್ನು ಸಹ ಒಳಗೊಂಡಿದೆ. ಈ ಮೀಸಲು ಪಟ್ಟಿಯು 178 ಅಭ್ಯರ್ಥಿಗಳನ್ನು ಒಳಗೊಂಡಿದ್ದು, ಈ ಪೈಕಿ ಸಾಮಾನ್ಯ ವರ್ಗದಿಂದ 89 ಅಭ್ಯರ್ಥಿಗಳು, EWS ವರ್ಗದಿಂದ 28 ಅಭ್ಯರ್ಥಿಗಳು, OBC ವರ್ಗದಿಂದ 52 ಅಭ್ಯರ್ಥಿಗಳು, SC ವರ್ಗದಿಂದ 5 ಅಭ್ಯರ್ಥಿಗಳು ಮತ್ತು ST ವರ್ಗದಿಂದ 4 ಅಭ್ಯರ್ಥಿಗಳು ಸೇರಿದ್ದಾರೆ.

ಇದನ್ನೂ ಓದಿ: ಉದ್ಯೋಗದ ಟೆನ್ಷನ್‌ ಬೇಡ್ವೆಂದು ಕೆಲಸ ತೊರೆದು ಆರಾಮಾಗಿ ಟೆಂಟ್‌ನಲ್ಲಿ ರಿಲ್ಯಾಕ್ಸ್‌ ಮಾಡ್ತಿರೋ ಯುವಕ!

UPSC CSE ಪೂರ್ವಭಾವಿ ಪರೀಕ್ಷೆಯನ್ನು ಜೂನ್ 5, 2022 ರಂದು ನಡೆಸಲಾಯಿತು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 22 ರಂದು ಬಿಡುಗಡೆ ಮಾಡಲಾಯಿತು. ನಂತರ, ಮುಖ್ಯ ಪರೀಕ್ಷೆಯನ್ನು ಸೆಪ್ಟೆಂಬರ್ 16 ರಿಂದ 25 ರವರೆಗೆ ನಡೆಸಲಾಯಿತು ಮತ್ತು ಫಲಿತಾಂಶಗಳನ್ನು ಡಿಸೆಂಬರ್ 6 ರಂದು ಘೋಷಿಸಲಾಯಿತು. ನಂತರ ಸಂದರ್ಶನಗಳು ಮೇ 18 ರಂದು ಮುಕ್ತಾಯಗೊಂಡಿದ್ದವು.

ಕಳೆದ ವರ್ಷ ಸಹ ಮೊದಲ 3 ಸ್ಥಾನಗಳು ಮಹಿಳೆಯರ ಪಾಲಾಗಿತ್ತು. ಶ್ರುತಿ ಶರ್ಮಾ ಅವರು UPSC CSE 2021 ಪರೀಕ್ಷೆಯಲ್ಲಿ ಅಖಿಲ ಭಾರತ ಮೊದಲ ರ‍್ಯಾಂಕ್‌ ಗಳಿಸಿದ್ದರು. ಅಂಕಿತಾ ಅಗರ್ವಾಲ್ AIR 2 ಮತ್ತು ಚಂಡೀಗಢದ ಗಾಮಿನಿ ಸಿಂಗ್ಲಾ 3 ನೇ ಸ್ಥಾನ ಪಡೆದರು.

ಇದನ್ನೂ ಓದಿ: 15 ವರ್ಷದಿಂದ ಅನಾರೋಗ್ಯ ರಜೇಲಿದ್ರೂ ಸಂಬಳ ಜಾಸ್ತಿ ಮಾಡಿಲ್ಲ ಅಂತ ಕಂಪನಿ ವಿರುದ್ಧ ಕೇಸ್‌ ಹಾಕಿದ ಉದ್ಯೋಗಿ!

ನಾಗರಿಕ ಸೇವೆಗಳ ಪರೀಕ್ಷೆಯನ್ನು ವಾರ್ಷಿಕವಾಗಿ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ - ಪೂರ್ವಭಾವಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ. ಇನ್ನು, UPSC ಯಿಂದ ಪ್ರಮುಖವಾಗಿ ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಮುಂತಾದ ಹುದ್ದೆಗಳಿಗೆ ಆಯ್ಕೆ ಮಾಡಲು ಪರೀಕ್ಷೆ ನಡೆಸಲಾಗುತ್ತದೆ. 

ಇದನ್ನೂ ಓದಿ:  ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್‌ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!

click me!