UGC NET ಪರೀಕ್ಷೆ ಮತ್ತೆ ಮುಂದೂಡಿಕೆ: ಹೊಸ ದಿನಾಂಕವೂ ನಿಗದಿ

By Suvarna News  |  First Published Sep 14, 2020, 7:26 PM IST

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಯುಜಿಸಿ-ನೆಟ್ ಪರೀಕ್ಷೆಯನ್ನು ಮತ್ತೆ ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಸಹ ಪ್ರಕಟಿಸಲಾಗಿದೆ.


ನವದೆಹಲಿ, (ಸೆ.14): ಇದೇ ಸೆಪ್ಟೆಂಬರ್ 16ರಿಂದ 23ರ ನಡುವೆ ನಡೆಯಬೇಕಿದ್ದ ಯುಜಿಸಿ-ನೆಟ್ ಪರೀಕ್ಷೆ ಮುಂದೂಡಲಾಗಿದ್ದು, ಸೆಪ್ಟೆಂಬರ್ 24ಕ್ಕೆ ನಿಗದಿಪಡಿಸಲಾಗಿದೆ.

ಇಂದು (ಸೋಮವಾರ) ಎನ್‌ಟಿಎ ಹೊರಡಿಸಿದ ಅಧಿಕೃತ ಸುತ್ತೋಲೆ ಹೊರಡಿಸಿದ್ದು,, ಐಸಿಎಆರ್ ಪರೀಕ್ಷೆಯ ದೃಷ್ಟಿಯಿಂದ ಎಐಇಇಎ-ಯುಜಿ / ಪಿಜಿ ಮತ್ತು ಎಐಸಿಇ-ಜೆಆರ್‌ಎಫ್ / ಎಸ್‌ಆರ್‌ಎಫ್ (ಪಿಎಚ್‌ಡಿ) 2020-21 ಅನ್ನು ಸೆ.24ಕ್ಕೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಿಡಿಸದೆ.

Latest Videos

undefined

ತರಕಾರಿ ಮಾರಿದ ಇನ್ಫೋಸಿಸ್ ಅಧ್ಯಕ್ಷೆ, ಹಿರಿಯರಿಗೆ ಮಣೆಹಾಕಿದ ಸಿಎಸ್‌ಕೆ: ಸೆ.14ರ ಟಾಪ್ 10 ಸುದ್ದಿ!

ರೋಲ್ ನಂಬರ್‌, ಪರೀಕ್ಷಾ ಕೇಂದ್ರ, ದಿನಾಂಕ, ಶಿಫ್ಟ್ ಮತ್ತು ಪರೀಕ್ಷೆಯ ಸಮಯವನ್ನು ಸೂಚಿಸುವ ಅಡ್ಮಿಟ್ ಕಾರ್ಡ್‌ಗಳನ್ನ ಡೌನ್‌ಲೋಡ್ ಮಾಡುವುದನ್ನ ಯುಜಿಸಿ-ನೆಟ್ ಪರೀಕ್ಷೆ 2020 ರ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷೆಯ ದಿನಾಂಕದ ಮೊದಲು ಪ್ರಕಟಿಸಲಾಗುವುದು ಎಂದು ಎನ್‌ಟಿಎ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ಯುಜಿಸಿ-ನೆಟ್ ಬಗ್ಗೆ
ಯುಜಿಸಿ ಮಾನ್ಯತೆ ಪಡೆದ ವಿವಿಧ ಭಾರತೀಯ ವಿಶ್ವವಿದ್ಯಾಲಯಗಳು / ಕಾಲೇಜುಗಳು / ಸಂಸ್ಥೆಗಳಲ್ಲಿ ಮಾತ್ರ ಸಹಾಯಕ ಪ್ರಾಧ್ಯಾಪಕ ಮತ್ತು ಕಿರಿಯ ಸಂಶೋಧನಾ ಫೆಲೋಶಿಪ್ (ಜೆಆರ್‌ಎಫ್) ಅಥವಾ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆಯನ್ನು ನಿರ್ಧರಿಸಲು ಯುಜಿಸಿ ನೆಟ್ 2020 ಪರೀಕ್ಷೆಗಳನ್ನು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 81 ವಿಷಯಗಳಲ್ಲಿ ಎನ್‌ಟಿಎ ನಡೆಸಲಿದೆ.

ಪರೀಕ್ಷೆಯು ಬಹು-ಆಯ್ಕೆ ಪ್ರಶ್ನೆಗಳನ್ನು (ಎಂಸಿಕ್ಯೂ) ಒಳಗೊಂಡಿರುವ ಪೇಪರ್ I ಮತ್ತು II ಎಂಬ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಬೋಧನೆ ಮತ್ತು ಸಂಶೋಧನಾ ಅಭಿರುಚಿಯಲ್ಲಿರುವ ಪೇಪರ್ I ಎಲ್ಲಾ ಅಭ್ಯರ್ಥಿಗಳಿಗೆ ಸಾಮಾನ್ಯ ಮತ್ತು ಕಡ್ಡಾಯವಾಗಿದ್ದರೆ, ಪೇಪರ್- II ಅಭ್ಯರ್ಥಿಯು ಆಯ್ಕೆ ಮಾಡಿದ ವಿಷಯದ ಮೇಲೆ ಇರುತ್ತದೆ. ಎರಡೂ ಪತ್ರಿಕೆಗಳನ್ನು 3 ಗಂಟೆಗಳಲ್ಲಿ ಪೂರ್ಣಗೊಳಿಸಬೇಕು.

click me!