ನಿವೃತ್ತಿ ವಯಸ್ಸು ಬದಲಾವಣೆ? ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

Published : Jan 22, 2025, 11:16 AM ISTUpdated : Jan 22, 2025, 11:34 AM IST
ನಿವೃತ್ತಿ ವಯಸ್ಸು ಬದಲಾವಣೆ? ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್

ಸಾರಾಂಶ

ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ರಿಂದ 62ಕ್ಕೆ ಹೆಚ್ಚಿಸುವ ವದಂತಿಗಳಿವೆ. ಪಿಂಚಣಿ ಹಾಗೂ ಗ್ರಾಚ್ಯುಟಿ ಸುಧಾರಣೆಯ ಸಾಧ್ಯತೆಯೂ ಇದೆ. ಜೀವಿತಾವಧಿ ಹೆಚ್ಚಳ ಹಾಗೂ ಅನುಭವಿ ಉದ್ಯೋಗಿಗಳ ಲಭ್ಯತೆ ಕಾರಣಗಳಾಗಿವೆ. ಆದರೆ, ಸರ್ಕಾರ ಇದನ್ನು ನಿರಾಕರಿಸಿದೆ. ವಯಸ್ಸಿನ ಹೆಚ್ಚಳದಿಂದ ಕೆಲ ಉದ್ಯೋಗಿಗಳಿಗೆ ಲಾಭವಾದರೆ, ಯುವಕರಿಗೆ ಉದ್ಯೋಗಾವಕಾಶ ಕಡಿಮೆಯಾಗಬಹುದು.

ಭಾರತ (India)ದಲ್ಲಿ ನಿವೃತ್ತಿ ವಯಸ್ಸು ಉದ್ಯೋಗಿ (Employee)ಗಳು ಹಾಗೂ ಕುಟುಂಬದ ಮೇಲೆ ಪರಿಣಾಮ ಬೀರುವ ಮಹತ್ವದ ವಿಷ್ಯಗಳಲ್ಲಿ ಒಂದು. ನಿವೃತ್ತಿ (Retirement) ವಯಸ್ಸಿಗೆ ಸಂಬಂಧಿಸಿದಂತೆ ಆಗಾಗ ಚರ್ಚೆಗಳು ನಡೆಯುತ್ತಿರುತ್ತವೆ.  ಸರ್ಕಾರಿ ನೌಕರರ ನಿವೃತ್ತಿಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನುವ ಸುದ್ದಿಯೊಂದಿದೆ. ಉದ್ಯೋಗಿಗಳ ನಿವೃತ್ತಿ ವಯಸ್ಸು, ಪಿಂಚಣಿ (pension) ಸೇರಿದಂತೆ ಕೆಲ ಬದಲಾವಣೆಗಳು ಮಾಡಲಾಗ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗ್ತಿದೆ. ಈ ವರ್ಷ ಮಾರ್ಚ್ 1 ರಿಂದ ಈ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂಬ ಸುದ್ದಿ ಇದೆ. ಒಂದ್ವೇಳೆ ಹೊಸ ಮಾರ್ಗಸೂಚಿ ಜಾರಿಗೆ ಬಂದ್ರೆ ಏನೆಲ್ಲ ಬದಲಾವಣೆ ಆಗಲಿದೆ ಎಂಬ ವಿವರವನ್ನೂ ಇಲ್ಲಿ ನೀಡಲಾಗಿದೆ. 

ವೈರಲ್ ಪೋಸ್ಟ್ ಪ್ರಕಾರ ನೌಕರರ ನಿವೃತ್ತಿ ನಿಯಮದಲ್ಲಿ ಯಾವೆಲ್ಲ ಬದಲಾವಣೆ? :
ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ : ಸದ್ಯ ನಿವೃತ್ತಿ ವಯಸ್ಸು ಕೇಂದ್ರ ಸರ್ಕಾರಿ ನೌಕರರಿಗೆ 60 ಆದ್ರೆ ರಾಜ್ಯ ಸರ್ಕಾರಿ ನೌಕರರ ವಯಸ್ಸು 58 -60 ವರ್ಷವಿದೆ. ಈ ವಯಸ್ಸನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದಲಿಸಲಿದೆ. ಮುಂದಿನ ದಿನಗಳಲ್ಲಿ ವಯಸ್ಸು 62 ಆಗಲಿದೆ ಎಂಬ ಸುದ್ದಿ ಹರಡಿದೆ.

ಡಿಗ್ರಿ ಪಾಸಾದವರಿಗೆ ಸೆಂಟ್ರಲ್‌ ಬ್ಯಾಂಕ್‌ನಲ್ಲಿ ಉದ್ಯೋಗ; 266 ಹುದ್ದೆ, 85 ಸಾವಿರ ಸಂಬಳ

ಪಿಂಚಣಿಯಲ್ಲಿ ವೃದ್ಧಿ : ನಿವೃತ್ತಿ ವಯಸ್ಸಿನ ಜೊತೆ ಸರ್ಕಾರ ಪಿಂಚಣಿಯನ್ನೂ ಹೆಚ್ಚಿಸಲಿದೆ. ಇದ್ರಿಂದ ಉದ್ಯೋಗಿಗಳ ಮುಂದಿನ ಭವಿಷ್ಯ ಉತ್ತಮವಾಗಿರಲಿದೆ. 

ಗ್ರಾಚ್ಯುಟಿಯಲ್ಲಿ ಸುಧಾರಣೆ : ಸರ್ಕಾರಿ ನೌಕರರಿಗೆ ಗ್ರಾಚ್ಯುಟಿಯಲ್ಲಿ ಮತ್ತಷ್ಟು ಸುಧಾರಣೆ ತರುವ ಸಾಧ್ಯತೆ ಇದೆ ಎಂದು ವರದಿ ಮಾಡಲಾಗಿದೆ.

ವಯಸ್ಸು ಹೆಚ್ಚಳಕ್ಕೆ ಕಾರಣ : ನಿವೃತ್ತಿ ವಯಸ್ಸು ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ನಿವೃತ್ತಿ ವಯಸ್ಸನ್ನು ಹೆಚ್ಚಿಸಬೇಕು ಎನ್ನುವ ವಾದ ಹಿಂದಿನಿಂದಲೂ ಕೇಳಿ ಬರ್ತಿದೆ. ಅದಕ್ಕೆ ಕಾರಣ ಜೀವಿತಾವಧಿಯಲ್ಲಿ ಹೆಚ್ಚಳ. ಹಿಂದೆ 1998ರಲ್ಲಿ ಸರಾಸರಿ ಜೀವಿತಾವಧಿ 61.4 ವರ್ಷವಿತ್ತು. ಆದ್ರೀಗ ಅದು 72.24 ವರ್ಷವಾಗಿದೆ. ಸರ್ಕಾರಕ್ಕೆ ಇನ್ನೆರಡು ವರ್ಷ ಅನುಭವಿ ಉದ್ಯೋಗಿಗಳು ಲಭ್ಯವಾಗ್ತಾರೆ ಹಾಗೂ ನಿವೃತ್ತಿ ವಯಸ್ಸು ಹೆಚ್ಚಿಸುವುದರಿಂದ ಪಿಂಚಣಿ ಎರಡು ವರ್ಷ ವಿಳಂಬವಾಗುತ್ತದೆ. ಇದ್ರಿಂದ ಸರ್ಕಾರಕ್ಕೆ ಲಾಭವಾಗುತ್ತದೆ ಎಂದು ಕೆಲವರ ವಾದವಾಗಿದೆ. 

ವಯಸ್ಸಿನ ಹೆಚ್ಚಳದಿಂದ ಲಾಭ : ಒಂದ್ವೇಳೆ ಸರ್ಕಾರ ವಯಸ್ಸಿನಲ್ಲಿ ಹೆಚ್ಚಳ ಮಾಡಿದ್ರೆ ಕೆಲ ಉದ್ಯೋಗಿಗಳಿಗೆ ಲಾಭವಾದ್ರೆ ಕೆಲ ಉದ್ಯೋಗಿಗಳು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ದೀರ್ಘಾವಧಿಯವರೆಗೆ ಕೆಲಸ ಮಾಡಲು ಮತ್ತು ಗಳಿಸಲು ಅವಕಾಶ ಸಿಗುತ್ತದೆ. ಅನುಭವಿ ಉದ್ಯೋಗಿಗಳಿಂದ ಕೆಲಸ ಸುಲಭವಾಗುತ್ತದೆ.   

ಎಸ್‌ಬಿಐನಲ್ಲಿ 150 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಬರೋಬ್ಬರಿ ₹93,960 ಸಂಬಳ!

ನಕಾರಾತ್ಮಕ ಪ್ರಭಾವ : ಯುವಕರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಉದ್ಯೋಗಿಗಳು ದೀರ್ಘ ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು. ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಪ್ರಸ್ತುತ ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಸ್ಪಷ್ಟಪಡಿಸಿದೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಬಳಿ ಬಾಕಿ ಇಲ್ಲ ಎಂದು ಹೇಳಿದ್ದರು.

ವಿದೇಶದಲ್ಲಿ ನಿವೃತ್ತಿ ವಯಸ್ಸು ಹೇಗಿದೆ? : 
ಫ್ರಾನ್ಸ್ - 2025 ರಿಂದ ನಿವೃತ್ತಿ ವಯಸ್ಸನ್ನು 62 ರಿಂದ 64 ಕ್ಕೆ ಹೆಚ್ಚಿಸಲಾಗುತ್ತಿದೆ.
ಜಪಾನ್ – ಈ ವರ್ಷ ನಿವೃತ್ತಿ ವಯಸ್ಸು 65 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.
ಅಮೆರಿಕ - ಪೂರ್ಣ ಪಿಂಚಣಿಗೆ ನಿವೃತ್ತಿ ವಯಸ್ಸು 67
ಜರ್ಮನಿ - 2029 ರ ವೇಳೆಗೆ ನಿವೃತ್ತಿ ವಯಸ್ಸು 67 ವರ್ಷವಾಗಲಿದೆ
ಚೀನಾ - ಪುರುಷರಿಗೆ 60 ಮತ್ತು ಮಹಿಳೆಯರಿಗೆ 55 

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್