ಭಾರತೀಯ ಅಂಚೆ ಇಲಾಖೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By Web Desk  |  First Published Nov 29, 2019, 3:02 PM IST

ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ ಇತರೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.


ಬೆಂಗಳೂರು, (ನ.29):  ಭಾರತೀಯ ಅಂಚೆ ಇಲಾಖೆ ತಮಿಳುನಾಡು ವಿಭಾಗದಲ್ಲಿ ಖಾಲಿ ಇರುವ ಪೋಸ್ಟಲ್ ಅಸಿಸ್ಟಂಟ್, ವಿಂಗಡಣೆ ಸಹಾಯಕ, ಪೋಸ್ಟ್‌ ಮ್ಯಾನ್‌ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಪೋಸ್ಟಲ್ ಅಸಿಸ್ಟಂಟ್/ ವಿಂಗಡಣೆ ಸಹಾಯಕ 89, ಪೋಸ್ಟ್‌ ಮ್ಯಾನ್ 65, ಮಲ್ಟಿ ಟಾಸ್ಕಿಂಗ್ ಸ್ಟಾಫ್‌ 77 ಒಟ್ಟು 231 ಹುದ್ದೆಗಳಿಗೆ ಆರ್ಜಿ ಆಹ್ವಾನಿಸಿದ್ದು, ಆಸಕ್ತ  ಅರ್ಹ ಹಾಗೂ ಆಸಕ್ತ ಅ ಭ್ಯರ್ಥಿಗಳು ನಿಗದಿತ ದಿನಾಂಕ 31-12-2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Tap to resize

Latest Videos

undefined

ಗ್ರಾಮಲೆಕ್ಕಿಗ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಿ

ವಿದ್ಯಾರ್ಹತೆ
* ಪೋಸ್ಟಲ್ ಅಸಿಸ್ಟಂಟ್/ ವಿಂಗಡಣೆ ಸಹಾಯಕ : ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಬೇಸಿಕ್ ಕಂಪ್ಯೂಟರ್ ತರಬೇತಿ ಪಡೆದ ಪ್ರಮಾಣಪತ್ರ ಹೊಂದಿರಬೇಕು.
* ಪೋಸ್ಟ್‌ಮ್ಯಾನ್ : ಪಿಯುಸಿ ಪಾಸ್‌ ಜೊತೆಗೆ, ಸ್ಥಳೀಯ ಭಾಷೆ ಬಗ್ಗೆ ಅರಿವಿರಬೇಕು.
* ಮಲ್ಟಿ ಟಾಸ್ಕಿಂಗ್ ಸ್ಟಾಫ್‌ : SSLC ಪಾಸ್‌ ಜೊತೆಗೆ ಸ್ಥಳೀಯ ಭಾಷೆ ಬಗ್ಗೆ ಅರಿವಿರಬೇಕು.

ವಯೋಮಿತಿ:
* ಪೋಸ್ಟಲ್ ಅಸಿಸ್ಟಂಟ್/ ವಿಂಗಡಣೆ ಸಹಾಯಕ : ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ.
* ಪೋಸ್ಟ್‌ಮ್ಯಾನ್ : ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ.
* ಮಲ್ಟಿ ಟಾಸ್ಕಿಂಗ್ ಸ್ಟಾಫ್‌ : ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ.
* ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 10 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕ:  100 ಅರ್ಜಿ ಶುಲ್ಕವನ್ನು ನಿಗದಿಪಡಿಲಸಾಗಿದ್ದು, ಯಾವುದೇ ಅಂಚೆ ಕಛೇರಿಯಲ್ಲಿ ದಿನಾಂಕ 28-12-2019ರೊಳಗೆ ಪಾವತಿಸಬಹುದು.

ವೇತನ ಶ್ರೇಣಿ
* ಪೋಸ್ಟಲ್ ಅಸಿಸ್ಟಂಟ್/ ವಿಂಗಡಣೆ ಸಹಾಯಕ : 25500 ರಿಂದ 81100 ರೂ. ತಿಂಗಳಿಗೆ  (ಪೇ ಮೆಟ್ರಿಕ್ಸ್‌ ಲೆವೆಲ್ 4)
* ಪೋಸ್ಟ್‌ ಮ್ಯಾನ್ : 21700-69100 ರೂ. ತಿಂಗಳಿಗೆ (ಪೇ ಮೆಟ್ರಿಕ್ಸ್‌ ಲೆವೆಲ್ 3)
* ಮಲ್ಟಿ ಟಾಸ್ಕಿಂಗ್ ಸ್ಟಾಫ್‌ : 18000-56900 ರೂ. ತಿಂಗಳಿಗೆ  (ಪೇ ಮೆಟ್ರಿಕ್ಸ್‌ ಲೆವೆಲ್ 1)

ಅರ್ಜಿ ತಲುಪಿಸಬೇಕಾದ ವಿಳಾಸ : 
The Assistant Director (Recruitment), O/o the Chief Postmaster General, Tamilnadu Circle, Chennai-600002

ಈ  ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಅಧಿಸೂಚನೆಯಲ್ಲಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

click me!