ತೀವ್ರ ನಷ್ಟಕ್ಕೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ | ಬಿಎಸ್ಸೆನ್ನೆಲ್ ನೌಕರರಿಗೆ ಗರಿಷ್ಠ| 90 ಲಕ್ಷ ವಿಆರ್‌ಎಸ್ ಪ್ಯಾಕೇಜ್!| 50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳಿಗೆ ವಿಆರ್‌ಎಸ್ ಲಭ್ಯ
ನವದೆಹಲಿ[ನ.21]: ತೀವ್ರ ನಷ್ಟಕ್ಕೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ ಬಿಎಸ್‌ಎನ್‌ಎಲ್, ತನ್ನ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಜಾರಿಗೆ ತಂದಿದೆ. ಇದನ್ನು ಬಳಸಿಕೊಳ್ಳುವ ನೌಕರರಿಗೆ ಗರಿಷ್ಠ 90 ಲಕ್ಷ ರು.ವರೆಗೂ ಹಣ ದೊರೆಯಲಿದೆ ಎಂಬ ಅಂದಾಜಿದೆ.
BSNL ಮರುಜೀವಕ್ಕೆ ಯತ್ನ, 75000 ಸಿಬ್ಬಂದಿ ವಿಆರ್‌ಎಸ್ ಆಯ್ಕೆ!
undefined
ಬಿಎಸ್‌ಎನ್‌ಎಲ್‌ನಲ್ಲಿ 1.6 ಲಕ್ಷ ಉದ್ಯೋಗಿಗಳಿದ್ದಾರೆ. ಅದರಲ್ಲಿ 50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳಿಗೆ ವಿಆರ್‌ಎಸ್ ಲಭ್ಯವಿದೆ. ಅಂಥವರ ಸಂಖ್ಯೆ 1 ಲಕ್ಷದಷ್ಟಿದೆ. ಆದರೆ ಈ ಪೈಕಿ 77000 ಸಾವಿರ ಉದ್ಯೋಗಿಗಳು ಈಗಾಗಲೇ ವಿಆರ್‌ಎಸ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಬಿಎಸ್‌ಎನ್‌ಎಲ್ ವಿಆರ್‌ಎಸ್‌ಗೆ 22 ಸಾವಿರ ಉದ್ಯೋಗಿಗಳು ಅರ್ಜಿ
ಬಿಎಸ್‌ಎನ್‌ಎಲ್ ನೌಕರರ ನಿವೃತ್ತಿ ವಯಸ್ಸು 60 ವರ್ಷ. ವಿಆರ್‌ಎಸ್ ಪಡೆವವರಿಗೆ ಅವರ ಉಳಿದ ಅವಧಿಯ ಸಂಬಳವನ್ನು ಕಂಪನಿ ಕೊಡಬೇಕಾಗುತ್ತದೆ. ಬಿಎಸ್‌ಎನ್‌ಎಲ್‌ನ ಹಿರಿಯ ಅನುಭವಿ ಸಿಬ್ಬಂದಿಗೆ ಮಾಸಿಕ 75 ಸಾವಿರ ರು.ವರೆಗೂ ಸಂಬಳವಿದೆ. ಅಂತಹ ಸಿಬ್ಬಂದಿ 50ನೇ ವಯಸ್ಸಿಗೇ ವಿಆರ್‌ಎಸ್ ಪಡೆದರೆ ಉಳಿದ 10 ವರ್ಷದ ಸಂಬಳವನ್ನು ಕಂಪನಿ ನೀಡಬೇಕಾಗುತ್ತದೆ. ಅಂತಹ ಉದ್ಯೋಗಿಗೆ 90 ಲಕ್ಷ ರು.ವರೆಗೂ ಪ್ಯಾಕೇಜ್ ಲಭಿಸಲಿದೆ ಎಂದು ಮಾಧ್ಯಮವೊಂದು ಲೆಕ್ಕಾಚಾರದ ವರದಿ ಪ್ರಕಟಿಸಿದೆ.