ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ
1226 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳು ಖಾಲಿ
ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನಾಂಕ
ನವದೆಹಲಿ ಡಿ (9): ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ (State Bank of India) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನಾಂಕವಾಗಿದೆ. ಒಟ್ಟು 1226 ಸರ್ಕಲ್ ಬೇಸ್ಡ್ ಆಫೀಸರ್ (Circle Based Officer) ಹುದ್ದೆಗಳು ಖಾಲಿ ಇದ್ದು, ಅರ್ಹ ಪದವೀಧರರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಉದ್ಯೋಗ ಪಡೆಯಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ ಎಸ್ಬಿಐನ ಅಧಿಕೃತ ವೆಬ್ಸೈಟ್ sbi.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ತಿಳಿಯುವುದು ಬಹುಮುಖ್ಯವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ವೇತನ 36,000 ರಿಂದ 63,840 ಇರಲಿದೆ.
undefined
ಅರ್ಜಿ ಶುಲ್ಕ ಮತ್ತು ವಿದ್ಯಾರ್ಹತೆ: ಸಾಮಾನ್ಯ/ಒಬಿಸಿ/EWS- 750 ರೂ. ಅರ್ಜಿ ಶುಲ್ಕ ಇರಲಿದೆ. SC/ST/ PWD ಅವರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು. ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ 30 ವರ್ಷ ಮೀರಿರಬಾರದು. ಆನ್‌ಲೈನ್ ಟೆಸ್ಟ್, ಸ್ಕ್ರೀನಿಂಗ್, ವೈಯಕ್ತಿಕ ಸಂದರ್ಶನದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ಕಡೆಗಳಲ್ಲಿ ಉದ್ಯೋಗ ಮಾಡಲು ತಯಾರಿರಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
SBI ಎಟಿಎಂನಲ್ಲಿ 10 ಸಾವಿರ ರೂ.ಗಿಂತ ಅಧಿಕ ನಗದು ಡ್ರಾಗೆ ಒಟಿಪಿ ಕಡ್ಡಾಯ:
ಮೊಬೈಲ್ ಇಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಎಟಿಎಂ (ATM) ಕೇಂದ್ರಗಳಿಗೆ ಭೇಟಿ ನೀಡಿದ್ರೆ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗೋದಿಲ್ಲ. ಎಟಿಎಂನಿಂದ ಹಣ ಹಿಂಪಡೆಯೋ (withdraw) ನಿಯಮಗಳಲ್ಲಿ SBI ಬದಲಾವಣೆ ಮಾಡಿದ್ದು,ಹೊಸ ನಿಯಮಗಳನ್ನುಜಾರಿಗೊಳಿಸಿದೆ. ಇದರ ಅನ್ವಯ ಇನ್ನು ಮುಂದೆ SBI ಎಟಿಎಂನಿಂದ ಹಣ ಪಡೆಯಲು ಒನ್ ಟೈಮ್ ಪಾಸ್ ವರ್ಡ್ (OTP) ಅಗತ್ಯ.
RRB NTPC result date: ಜನವರಿ 15ರೊಳಗೆ ರೈಲ್ವೇ ನೇಮಕಾತಿ ಪರೀಕ್ಷಾ ಫಲಿತಾಂಶ ಪ್ರಕಟ
ಗ್ರಾಹಕರು ಎಟಿಎಂ ಬಳಸೋ ಸಮಯದಲ್ಲಿಅವರ ಮೊಬೈಲ್ ಗೆ ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿದ ಬಳಿಕವಷ್ಟೇ ಹಣ ಸಿಗುತ್ತದೆ. ಆದ್ರೆ ಈ ನಿಯಮ 10 ಸಾವಿರ ರೂ.ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ವಿತ್ ಡ್ರಾ ಮಾಡಲು ಮಾತ್ರ ಅನ್ವಯಿಸುತ್ತದೆ. ಆದ್ರೆ ಕೆಲವು ಗ್ರಾಹಕರಿಗೆ ಈ ಬಗ್ಗೆ ಮಾಹಿತಿಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವರು ಹಣ ವಿತ್ ಡ್ರಾ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ. OTP ಬರುತ್ತಿಲ್ಲ ಎಂಬ ದೂರನ್ನು ಕೆಲವು ಗ್ರಾಹಕರು ನೀಡಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತಿರೋದಾಗಿ ತಿಳಿಸಿರೋ SBI, ಏನೇ ಸಮಸ್ಯೆಯಾದ್ರೂ ಬ್ಯಾಂಕ್ ಅನ್ನು ಸಂಪರ್ಕಿಸುವಂತೆ ತಿಳಿಸಿದೆ.
WFH Employees: ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ಗುಡ್ ನ್ಯೂಸ್, ಕೇಂದ್ರದಿಂದ ಹೊಸ ಕಾನೂನು