NHPC Recruitment 2022: ಜಲ ವಿದ್ಯುತ್ ಶಕ್ತಿ ನಿಗಮದಲ್ಲಿ 1.6ಲಕ್ಷ ವೇತನದ ಟ್ರೈನಿ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

By Suvarna News  |  First Published Jan 2, 2022, 6:54 PM IST

ರಾಷ್ಟ್ರೀಯ ಜಲ ವಿದ್ಯುತ್ ಶಕ್ತಿ ನಿಗಮ ಖಾಲಿ ಇರುವ  ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ  ಆಹ್ವಾನಿಸಿದೆ. ಜನವರಿ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಬೆಂಗಳೂರು(ಜ.2): ರಾಷ್ಟ್ರೀಯ ಜಲ ವಿದ್ಯುತ್ ಶಕ್ತಿ ನಿಗಮ (National Hydroelectric Power Corporation - NHPC)ಖಾಲಿ ಇರುವ  ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 67 ಹುದ್ದೆಗಳು ಖಾಲಿ ಇದ್ದು, ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಟ್ರೈನಿ ಇಂಜಿನಿಯರ್ ಹುದ್ದೆಗಳಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಹೀಗೆ ಒಟ್ಟು 53 ಹುದ್ದೆಗಳು ಮತ್ತು ಟ್ರೈನಿ ಆಫೀಸರ್ ಹುದ್ದೆಗಳಲ್ಲಿ ಫೈನಾನ್ಸ್, ಕಂಪನಿ ಸೆಕ್ರೆಟರಿ ಸೇರಿ ಒಟ್ಟು 14 ಹುದ್ದೆಗಳಿವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜನವರಿ 17ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ nhpcindia.com ಗೆ ಭೇಟಿ ನೀಡಲು ಕೋರಲಾಗಿದೆ.

ಅಭ್ಯರ್ಥಿಗಳು ಗಮನಿಸಬೇಕಾದ ಮುಖ್ಯ ಅಂಶವೆಂದರೆ GATE (Graduate Aptitude Test in Engineering) ನೋಂದಣಿ ಸಂಖ್ಯೆಯೊಂದಿಗೆ GATE-2021 ಪರೀಕ್ಷೆಯಲ್ಲಿ ಅಂಕಗಳನ್ನು ಹೊಂದಿರುವ ಅಭ್ಯರ್ಥಿಗಳು, CA (Chartered Accountant) ಅಥವಾ CMA (Certified Management Accountant) ನೋಂದಣಿ ಸಂಖ್ಯೆಯೊಂದಿಗೆ CA/CMA ಅಂಕಗಳನ್ನು ಹೊಂದಿರುವ ಅಭ್ಯರ್ಥಿಗಳು ಮತ್ತು  CS(Computer Science) ನೋಂದಣಿ ಸಂಖ್ಯೆಯೊಂದಿಗೆ  CS ಅಂಕಗಳನ್ನು ಹೊಂದಿರುವ ಅಭ್ಯರ್ಥಿಗಳು NHPC ಯ ವೆಬ್‌ಸೈಟ್ www.nhpcindia.com ನಲ್ಲಿ ಜಾಹೀರಾತು ಸಂಖ್ಯೆ NH/Rectt/04/2021 ನಲ್ಲಿ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Tap to resize

Latest Videos

undefined

IBPS Prelims Result 2021: ಬ್ಯಾಂಕಿಗ್ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ, ಈಗಲೇ ಚೆಕ್ ಮಾಡಿ

ಒಟ್ಟು 67 ಹುದ್ದೆಯ ವಿವರ ಈ ಕೆಳಗಿನಂತಿದೆ:
ಟ್ರೈನಿ ಇಂಜಿನಿಯರ್ (ಸಿವಿಲ್): 29
ಟ್ರೈನಿ ಇಂಜಿನಿಯರ್ (ಮೆಕ್ಯಾನಿಕಲ್): 20
ಟ್ರೈನಿ ಇಂಜಿನಿಯರ್ (ಎಲೆಕ್ಟ್ರಿಕಲ್): 4
ಟ್ರೈನಿ ಆಫೀಸರ್ (ಹಣಕಾಸು-Finance):12
ಟ್ರೈನಿ ಆಫೀಸರ್ (ಕಂಪೆನಿ ಸೆಕ್ರೆಟರಿ): 2

ಅರ್ಹತೆ: ಖಾಲಿ ಇರುವ  ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ಸಂಬಂಧಿತ ಎಂಜಿನಿಯರಿಂಗ್ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ/ಬಿಎಸ್ಸಿ ಪೂರೈಸಿರಬೇಕು.

ವಯೋಮಿತಿ: ಖಾಲಿ ಇರುವ  ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯಸ್ಸು ಡಿಸೆಂಬರ್ 1, 2021 ರಂತೆ ಗರಿಷ್ಠ 30 ವರ್ಷ ಮೀರಬಾರದು. 

ವೇತನ: ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 50,000/- ರಿಂದ 1,60,000/-ರೂ ನಿಗದಿಯಾಗಿದೆ. ಸ್ಟೈಫಂಡ್ ಕೂಡ ದೊರೆಯಲಿದೆ.

SCI Recruitment 2022: BE, B Tech ಆದವರಿಗೆ ಮ್ಯಾರಿನ್ ಎಂಜಿನಿಯರ್ ಕೆಲಸ, 2 ಲಕ್ಷಕ್ಕೂ ಅಧಿಕ ವೇತನ

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು, EWS ಮತ್ತು OBC ಕೆಟಗರಿಯ ಅಭ್ಯರ್ಥಿಗಳು 295 ರೂ ಆನ್‌ಲೈನ್  ಮೂಲಕ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. SC/ST/PwBD/ಮತ್ತು ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
 
ಆಯ್ಕೆ ಪ್ರಕ್ರಿಯೆ ಮತ್ತು ಉದ್ಯೋಗ ಸ್ಥಳ: GATE, CA/CMA , CS ಪರೀಕ್ಷೆಯ  ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ಭಾರತದ ಎಲ್ಲಿ ಬೇಕಾದರೂ ಉದ್ಯೋಗ ದೊರೆಯಲಿದೆ.

BECIL Recruitment 2022: ಪತ್ರಿಕೋದ್ಯಮ ಪದವಿಯಾದವರಿಗೆ ಸುವರ್ಣವಕಾಶ

click me!