Railway Recruitment: ದಕ್ಷಿಣ ಮಧ್ಯ ರೈಲ್ವೆ ಮತ್ತು ಸೆಂಟ್ರಲ್ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ

By Suvarna News  |  First Published Dec 11, 2021, 6:45 PM IST
  • ದಕ್ಷಿಣ ಮಧ್ಯ ರೈಲ್ವೆಯಲ್ಲಿ  81 ಜೂನಿಯರ್ ಎಂಜಿನಿಯರ್ ಹುದ್ದೆ
  • ದಕ್ಷಿಣ ಮಧ್ಯ ರೈಲ್ವೆಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಸಲು  ಡಿ.16 ಕೊನೆ ದಿನ
  • ರೈಲ್ವೆ ಇಲಾಖೆಯಲ್ಲಿನ ಹುದ್ದೆಗೆ ಅರ್ಜಿ ಸಲ್ಲಿಸಲು  ಡಿ.20 ಕೊನೆ ದಿನ
     

ಬೆಂಗಳೂರು(ಡಿ.11): ದಕ್ಷಿಣ ಮಧ್ಯ ರೈಲ್ವೆ (South Central Railway)ತನ್ನ ಖಾಲಿ ಇರುವ 81 ಜೂನಿಯರ್ ಎಂಜಿನಿಯರ್ (Junior Engineer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ  ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಇ, ಬಿಎಸ್ಸಿ, ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನವೆಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆನ್​ಲೈನ್​(Online)ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ scr.indianrailways.gov.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ. 

ವಿದ್ಯಾರ್ಹತೆ ಮತ್ತು ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ ಬಿಇ, ಬಿಎಸ್ಸಿ, ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಸಾಮಾನ್ಯ ವರ್ಗ- 42 ವರ್ಷ, ಒಬಿಸಿ-45 ವರ್ಷ, SC/ST- 47 ವರ್ಷ ಮೀರಿರಬಾರದು.

Latest Videos

undefined

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತೆಲಂಗಾಣದ ಸಿಕಂದರಾಬಾದ್​​ನಲ್ಲಿ ಉದ್ಯೋಗ ನೀಡಲಾಗುತ್ತದೆ.  ಮತ್ತು ನಿಯಮಾನುಸಾರ ವೇತನ ನೀಡಲಾಗುತ್ತದೆ. ಕಂಪ್ಯೂಟರ್​ ಆಧಾರಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

KARNATAKA HIGH COURT RECRUITMENT: ಕರ್ನಾಟಕ ಹೈ ಕೋರ್ಟ್ ನಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ಅರ್ಜಿ ಆಹ್ವಾನ

10ನೇ ತರಗತಿ ಪಾಸ್​ ಆದವರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ: ರೈಲ್ವೆ ಇಲಾಖೆಯ (Railway department) ಸೆಂಟ್ರಲ್ ರೈಲ್ವೇ ( Central Railway) ಹಂತ 1 ಮತ್ತು 2 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ  ವೆಬ್‌ಸೈಟ್ rrccr.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 20 ಆಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

IOCL Recruitment 2021: 300 ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದ ಇಂಡಿಯನ್

ಒಟ್ಟು 12 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು,  ಹಂತ 1 ರಲ್ಲಿ 10 ಪೋಸ್ಟ್​ಗಳು ಹಾಗೂ ಹಂತ 2 ರಲ್ಲಿ  2 ಪೋಸ್ಟ್‌ಗಳು ಖಾಲಿ ಇದೆ. ಸೆಂಟ್ರಲ್ ರೈಲ್ವೇ ಇಲಾಖೆಯ ಹಂತ 1 ರಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದಲ್ಲಿ ಮುಂಬೈ, ಭೂಸಾವಲ್, ನಾಗ್ಪುರ, ಪುಣೆ ಮತ್ತು ಸೋಲಾಪುರ ವಿಭಾಗಕ್ಕೆ ತಲಾ 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 

ಹಂತ 2 – 12 ನೇ (+2 ಹಂತ) ಉತ್ತೀರ್ಣ ಅಥವಾ ಕನಿಷ್ಠ ಶೇ. 50 ಅಂಕ ಪಡೆದಿರಬೇಕು. ಆಕ್ಟ್ ಅಪ್ರೆಂಟಿಸ್‌ಶಿಪ್‌ನೊಂದಿಗೆ 10ನೇ ತರಗತಿ ಪಾಸು ಆಗಿರಬೇಕು

ಹಂತ 1- 10 ನೇ ತರಗತಿ ಉತ್ತೀರ್ಣ ಅಥವಾ ಐಟಿಐ ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಪಡೆದಿರಬೇಕು. 10ನೇ ತರಗತಿ ತೇರ್ಗಡೆ ಜೊತೆಗೆ ಎನ್ ಸಿವಿಟಿ ಇಂದ ನೀಡಲಾದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಪಡೆದಿರಬೇಕು. 10ನೇ ತರಗತಿ ತೇರ್ಗಡೆ ಜೊತೆಗೆ ಐಟಿಐ ಪ್ರಮಾಣಪತ್ರ ಪಡೆದಿರಬೇಕು.

Bank of Baroda Recruitment 2021: ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗ, ತಿಂಗಳಿಗೆ 63,840 ರೂ

ಲೆವೆಲ್ 2 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಹಂತ 1 ಹುದ್ದೆಗಳಿಗೆ, ಅಭ್ಯರ್ಥಿಗಳು 18 ರಿಂದ 33 ವರ್ಷ ವಯಸ್ಸಿನವರಾಗಿರಬೇಕು. ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ರೂ. 250  ಅರ್ಜಿ ಶುಲ್ಕ ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ ರೂ. 500  ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

click me!