
ಭಾರತೀಯ ರಿಸರ್ವ್ ಬ್ಯಾಂಕ್ ನೇಮಕಾತಿ 2025: ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸ್ತುತ ವೈದ್ಯಕೀಯ ಸಲಹೆಗಾರ (MC) ಹುದ್ದೆಗೆ ಒಪ್ಪಂದದ ಆಧಾರದ ಮೇಲೆ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು . ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 14, 2025, ಸಂಜೆ 4.40ರವರಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಅಧಿಕೃತ RBI ವೆಬ್‌ಸೈಟ್‌ಗೆ ಭೇಟಿ ನೀಡಲು ಸೂಚಿಸಲಾಗಿದೆ.
ಈ ನೇಮಕಾತಿಯು ಆರ್‌ಬಿಐ ಜೊತೆ ಕೆಲಸ ಮಾಡಲು ಬಯಸುವ ವೈದ್ಯಕೀಯ ವೃತ್ತಿಪರರಿಗೆ ಅವಕಾಶವನ್ನು ನೀಡುತ್ತದೆ. ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನಗಳು ಸೇರಿದಂತೆ ವಿವರವಾದ ಅಧಿಸೂಚನೆಯು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಐಒಸಿಎಲ್ ನಲ್ಲಿ 456 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾವುದೇ ಪರೀಕ್ಷೆ ಇಲ್ಲ
ಈ ಹುದ್ದೆ ಮೂರು ವರ್ಷಗಳ ಒಪ್ಪಂದದ ಆಧಾರದ ಮೇಲಿನದು. ಅಭ್ಯರ್ಥಿಗಳ ಆಯ್ಕೆಯನ್ನು ಸಂದರ್ಶನ ಮತ್ತು ದಾಖಲೆಗಳ ಪರಿಕರಣೆಯ ಮೂಲಕ ಮಾಡಲಾಗುತ್ತದೆ. ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಗಂಟೆಗೆ 1,000 ರೂಪಾಯಿಗಳ ಸಂಭಾವನೆ ನೀಡಲಾಗುತ್ತದೆ. ಈ ನೇಮಕಾತಿಯ ಮೂಲಕ RBIಯಲ್ಲಿ ಕೆಲಸ ಮಾಡಲು ಇಚ್ಛಿಸುವ ವೈದ್ಯಕೀಯ ವೃತ್ತಿಪರರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ವಿವರವಾದ ಅಧಿಸೂಚನೆಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದು.
ಎನ್‌ಟಿಪಿಸಿ ಹಿರಿಯ ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಆಹ್ವಾನ, 1 ಲಕ್ಷ ರೂ ವೇತನ!
ವೈದ್ಯಕೀಯ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಅರ್ಹತೆ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ ಮತ್ತು ಸಂಬಳ
ಅರ್ಜಿ ಸಲ್ಲಿಸುವುದು ಹೇಗೆ:
ಅರ್ಜಿದಾರರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕೊನೆಯ ದಿನಾಂಕದ ಮೊದಲು ಗೊತ್ತುಪಡಿಸಿದ ವಿಳಾಸಕ್ಕೆ ತಲುಪುವಂತೆ ಕಳಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ:
ಪ್ರಾದೇಶಿಕ ನಿರ್ದೇಶಕರು,
ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆ,
ನೇಮಕಾತಿ ವಿಭಾಗ,
ಭಾರತೀಯ ರಿಸರ್ವ್ ಬ್ಯಾಂಕ್,
ಕೋಲ್ಕತ್ತಾ ಪ್ರಾದೇಶಿಕ ಕಚೇರಿ,
15, ನೇತಾಜಿ ಸುಭಾಷ್ ರಸ್ತೆ,
ಕೋಲ್ಕತ್ತಾ - 700001.
Regional Director,
Human Resource Management Department,
Recruitment Section,
Reserve Bank of India,
Kolkata Regional Office,
15, Netaji Subhas Road,
Kolkata - 700001.