ಕೇಂದ್ರ ಸರ್ಕಾರಿ ನೌಕರರ ವೇತನ ಕನಿಷ್ಠ 33,000 ಏರಿಕೆ?

Published : Feb 04, 2025, 08:13 AM IST
ಕೇಂದ್ರ ಸರ್ಕಾರಿ ನೌಕರರ ವೇತನ ಕನಿಷ್ಠ 33,000 ಏರಿಕೆ?

ಸಾರಾಂಶ

ಇದೀಗ ರಚನೆಯಾಗಿರುವ 8ನೇ ವೇತನ ಆಯೋಗವು 2.86 ಫಿಟ್‌ಮೆಂಟ್ ಫ್ಯಾಕ್ಟ‌ರ್ ಆಧಾರದಲ್ಲಿ ನೌಕರರ ವೇತನ ಪರಿಷ್ಕ ರಿಸಬಹುದು ಎಂದು ಹೇಳಲಾಗುತ್ತಿದೆ. ಇದು ಖಚಿತಪಟ್ಟಲ್ಲಿ ಹಾಲಿ 18000 ರು. ಇರುವ ಲೆವೆಲ್ 1 ನೌಕರರ ಮೂಲ ವೇತನ ಭರ್ಜರಿ 51480 ರು.ಗೆ ಪರಿಷ್ಕರಣೆಗೊಳ್ಳಲಿದೆ. 

ನವದೆಹಲಿ(ಫೆ.04): ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಶಿಫಾರಸು ಮಾಡಲು ಸರ್ಕಾರ ರಚಿಸಿರುವ 8ನೇ ವೇತನ ಆಯೋಗವು ನೌಕರರಿಗೆ ಭರ್ಜರಿ ವೇತನದ ಕೊಡುಗೆ ನೀಡುವ ಸಾಧ್ಯತೆ ಇದೆ. ಅಟೆಂಡ‌ರ್, ಸಹಾಯಕ ಸಿಬ್ಬಂದಿಯಂತಹ ಲೆವೆಲ್ 1 ನೌಕರರ ಮೂಲ ವೇತನ 18 ಸಾವಿರ ರು.ನಿಂದ 51480 ರು.ಗೆ ಅಂದರೆ 33480 ರು.ನಷ್ಟು ಪರಿಷ್ಕರಣೆಯಾಗಬಹುದು ಎಂದು ವರದಿಗಳು ತಿಳಿಸಿವೆ.

ವೇತನ ಆಯೋಗವು ಹೊಸ ವೇತನ ಶಿಫಾರಸು ಮಾಡಲು 'ಫಿಟ್‌ಮೆಂಟ್ ಫ್ಯಾಕ್ಟ‌ರ್' ಅನ್ನು ಆಧಾರವಾಗಿ ಬಳಸುತ್ತದೆ. ಈ ಹಿಂದೆ 7ನೇ ವೇತನ ಆಯೋಗವು 2.57 ಫಿಟ್ ಮೆಂಟ್ ಫ್ಯಾಕ್ಟರ್ ಆಧರಿಸಿ ವೇತನ ಏರಿಕೆಯ ಶಿಫಾರಸು ಮಾಡಿತ್ತು. ಅದರನ್ವಯ 7000 ರು. ಇದ್ದ ಲೆವೆಲ್ 1 ಅಧಿಕಾರಿಗಳ ಮೂಲ ವೇತನವನ್ನು 2016ರಲ್ಲಿ 18000 ರು.ಗೆ ಏರಿಸಲಾಗಿತ್ತು. ಮೂಲ ವೇತನ 18000 ರು. ಇದ್ದರೂ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ, ಮತ್ತಿತರೆ ಸೌಲಭ್ಯಗಳು ಸೇರಿದರೆ ಒಟ್ಟು ವೇತನ 36020 ರು.ಗೆ ತಲುಪಿತ್ತು.

ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ

ಭರ್ಜರಿ ಏರಿಕೆ?: 

ಇದೀಗ ರಚನೆಯಾಗಿರುವ 8ನೇ ವೇತನ ಆಯೋಗವು 2.86 ಫಿಟ್‌ಮೆಂಟ್ ಫ್ಯಾಕ್ಟ‌ರ್ ಆಧಾರದಲ್ಲಿ ನೌಕರರ ವೇತನ ಪರಿಷ್ಕ ರಿಸಬಹುದು ಎಂದು ಹೇಳಲಾಗುತ್ತಿದೆ. ಇದು ಖಚಿತಪಟ್ಟಲ್ಲಿ ಹಾಲಿ 18000 ರು. ಇರುವ ಲೆವೆಲ್ 1 ನೌಕರರ ಮೂಲ ವೇತನ ಭರ್ಜರಿ 51480 ರು.ಗೆ ಪರಿಷ್ಕರಣೆಗೊಳ್ಳಲಿದೆ. ಮೊದಲ ಹಂತದ ಹುದ್ದೆಗಳು ಅಂದರೆ, ಅಟೆಂಡರ್‌ಗಳು, ಜವಾನರು, ಸಹಾಯಕ ಸಿಬ್ಬಂದಿಯಂಥ ನೌಕ ರರ ಮೂಲ ವೇತನ 33,480ರು.ನಷ್ಟು ಜಿಗಿ ಯಬಹುದು ಎಂದು ವರದಿಗಳು ತಿಳಿಸಿವೆ. ಅದೇ ರೀತಿ ಎಲ್ಲಾ ವರ್ಗದ ಹುದ್ದೆಗಳ ಮೂಲವೇತನವೂ ದುಪ್ಪಟ್ಟಾಗಲಿದೆ.

ಯಾವ ಸ್ತರಕ್ಕೆ ಎಷ್ಟು ವೇತನ ಸಂಭವ?

* ಲೆವೆಲ್ 1 ಅಧಿಕಾರಿಗಳ ವೇತನ 18000 ರು. ನಿಂದ  36020 2. ನಷ್ಟು ಏರಿಕೆಯಾಗಿ 51480 ರು. ಗೆ
* ಲೆವೆಲ್ 2 ಅಧಿಕಾರಿಗಳ ವೇತನ 19900 ರು. ನಿಂದ 37014 2.  ನಷ್ಟು ಏರಿಕೆಯಾಗಿ 56914 ರು.ಗೆ
* ಲೆವೆಲ್ 3 ಅಧಿಕಾರಿಗಳ ವೇತನ 21700 ರು. ನಿಂದ 40362 2.  ನಷ್ಟು ಏರಿಕೆಯಾಗಿ 62062 ರು.ಗೆ
* ಲೆವೆಲ್ 4 ಅಧಿಕಾರಿಗಳ ವೇತನ 25500 ರು. ನಿಂದ47430 2.  ನಷ್ಟು ಏರಿಕೆಯಾಗಿ 72930 ರು.ಗೆ
* ಲೆವೆಲ್ 5 ಅಧಿಕಾರಿಗಳ ವೇತನ 29200 ರು. ನಿಂದ 54312 2.  ನಷ್ಟು ಏರಿಕೆಯಾಗಿ 83512 ರು.ಗೆ
* ಲೆವೆಲ್ 6 ಅಧಿಕಾರಿಗಳ ವೇತನ 35400 ರು. ನಿಂದ 65844 2.  ನಷ್ಟು ಏರಿಕೆಯಾಗಿ 101244 ರು.ಗೆ
• ಲೆವೆಲ್ 7 ಅಧಿಕಾರಿಗಳ ವೇತನ 44900 ರು. ನಿಂದ 83514 2.  ನಷ್ಟು ಏರಿಕೆಯಾಗಿ 1,28,414 ರು.ಗೆ
• ಲೆವೆಲ್ 8 ಅಧಿಕಾರಿಗಳ ವೇತನ 47600 ರು. ನಿಂದ 88536 2. ನಷ್ಟು ಏರಿಕೆಯಾಗಿ 136136 ರು.ಗೆ
• ಲೆವೆಲ್ 9 ಅಧಿಕಾರಿಗಳ ವೇತನ 53100 ರು. ನಿಂದ98766 2. ನಷ್ಟು ಏರಿಕೆಯಾಗಿ 151866 ರು.ಗೆ
* ಲೆವೆಲ್ 10 ಅಧಿಕಾರಿಗಳ ವೇತನ 56100 ರು. ನಿಂದ 104346 2. ನಷ್ಟು  ನಷ್ಟು ಏರಿಕೆಯಾಗಿ 160446 ರು.ಗೆ

ಮುಂದಿನ ವರ್ಷ ಅನುಮಾನ: 

ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿಯನ್ನು ಪರಿಷ್ಕರಿಸಲಿರುವ ಎಂಟನೇ ವೇತನ ಆಯೋಗದ ವರದಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸಿಕ್ಕಿದ್ದರೂ ದೇಶದ 1.2 ಕೋಟಿ ಕೇಂದ್ರ ಸರ್ಕಾರಿ ನೌಕರರು ನಿರೀಕ್ಷಿಸಿದಂತೆ ಮುಂದಿನ ವರ್ಷ ಈ ವರದಿಯ ಅನುಷ್ಠಾನ ಅನುಮಾನ ಎನ್ನಲಾಗಿದೆ.

ಐಒಸಿಎಲ್ ನಲ್ಲಿ 456 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾವುದೇ ಪರೀಕ್ಷೆ ಇಲ್ಲ

ಈ ಬಾರಿಯ ಬಜೆಟ್‌ನಲ್ಲಿ ವೇತನ ಆಯೋಗದ ವೆಚ್ಚಗಳ ಪ್ರಸ್ತಾಪ ಎಲ್ಲೂ ಇಲ್ಲ. ಅಲ್ಲದೆ, ಯಾವುದೇ ಹಣಕಾಸು ಆಯೋಗವು ತನ್ನ ವರದಿ ಸಲ್ಲಿಕೆಗೆ ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ. ಏಳನೇ ವೇತನ ಆಯೋಗವು 18 ತಿಂಗಳ ಅವಧಿಯನ್ನು ವರದಿ ಸಲ್ಲಿಕೆಗೆ ತೆಗೆದುಕೊಂಡಿತ್ತು. ಈ ಎಲ್ಲ ವಿಚಾರಗಳನ್ನು ನೋಡಿದರೆ 2026ರ ಜನವರಿ 1ರಿಂದ 8ನೇ ವೇತನ ಆಯೋಗದ ವರದಿ ಜಾರಿಗೆ ಬರಬಹುದು ಎಂಬ ನೌಕರರ ಲೆಕ್ಕಾಚಾರ ಉಲ್ಟಾ ಆಗಬಹುದು ಎಂದು ಮೂಲಗಳು ತಿಳಿಸಿವೆ.

ಏನಿದು ಲೆಕ್ಕಾಚಾರ?

* 7000 ರು. ಇದ್ದ ಲೆವೆಲ್ 1 ಸಿಬ್ಬಂದಿಯ ಸಂಬಳವನ್ನು 7ನೇ ವೇತನ ಆಯೋಗ 18 ಸಾವಿರ ರು.ಗೆ ಹೆಚ್ಚಳ ಮಾಡಿತ್ತು
* 2.57 ಫಿಟ್‌ಮೆಂಟ್ ಫ್ಯಾಕ್ಟರ್ ಆಧರಿಸಿ ಆಗ ಪರಿಷ್ಕರಣೆ ಮಾಡಲಾಗಿತ್ತು. ಈ ಬಾರಿ 2.86 ಫಿಟೆಂಟ್ ಬಳಕೆ?
* 2.86 ಫಿಟ್‌ಮೆಂಟ್ ಫ್ಯಾಕ್ಟರ್ ಬಳಸಿದರೆ 18 ಸಾವಿರ ರು. ಇರುವ ಮೂಲ ವೇತನ 51480 ರು.ಗೆ ಜಿಗಿತ
* ಲೆವೆಲ್ 1 ಅಂದರೆ ಅಟೆಂಡರ್, ಜವಾನರು, ಸಹಾಯಕ ಸಿಬ್ಬಂದಿ ವರ್ಗದ ನೌಕರರು. ಅವರಿಗೆ 33000

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್