Prasar Bharati Recruitment 2022: ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.20 ಕೊನೆ ದಿನ

By Suvarna News  |  First Published Jan 12, 2022, 12:30 PM IST

•    ಸರ್ಕಾರಿ ಸ್ವಾಮ್ಯ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ
•    ಖಾಲಿ ಇರುವ ಒಟ್ಟು 9 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ
•    ಜನವರಿ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ


ಬೆಂಗಳೂರು(ಜ.12): ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿ Prasar Bharathi) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಪ್ರಸಾರ ಭಾರತಿಯಲ್ಲಿ ಉದ್ಯೋಗಕ್ಕೆ ಸೇರಲು ಬಯಸುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. ತಡ ಮಾಡಿದ್ರೆ ಕಾಲಾವಕಾಶ ಮುಗಿದು ಹೋಗುತ್ತದೆ. ಯಾಕಂದ್ರೆ ಈ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನಗಳಷ್ಟೇ ಬಾಕಿ. ಜನವರಿ 20ಕ್ಕೆ ಗಡುವು ಮುಕ್ತಾಯಗೊಳ್ಳಲಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರಸಾರ ಭಾರತಿಯ ಅಧಿಕೃತ ವೆಬ್ಸೈಟ್ prasarbharati.gov.in ನಲ್ಲಿ ಅರ್ಜಿ ಸಲ್ಲಿಸಬೇಕು. ಪ್ರಸಾರ ಭಾರತಿಯು ಡಿಡಿ-ಕಿಸಾನ್ ನ  ಪ್ರೊಡಕ್ಷನ್ ಎಕ್ಸಿಕ್ಯೂಟಿವ್ (Production Executive) ಮತ್ತು ಸೀನಿಯರ್ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ( Senior Production Exicutive) ಹುದ್ದೆಗಳಿಗೆ ಅರ್ಹ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಡಿಡಿ-ಕಿಸಾನ್ ನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುವ  ಅನುಭವಿ ಮತ್ತು ಕ್ರಿಯಾತ್ಮಕ ವ್ಯಕ್ತಿಗಳಿಂದ ಪ್ರಸಾರ್ ಭಾರತಿ ಅರ್ಜಿಗಳನ್ನು ಆಹ್ವಾನಿಸಿದೆ.

RRB NTPC Result: 1 ಕೋಟಿಗೂ ಅಧಿಕ ಅಭ್ಯರ್ಥಿಗಳು ಬರೆದಿದ್ದ ಸಿಬಿಟಿ-1 ಪರೀಕ್ಷೆ ಜನವರಿ 15 ರಂದು ಪ್ರಕಟ

Latest Videos

undefined

ಅಂದಹಾಗೆ ಈ ಸೇವೆಗಳು ಸಂಪೂರ್ಣವಾಗಿ ಕಾಂಟ್ರಾಕ್ಟ್  ಆಧಾರದ ಮೇಲೆ ಇರುತ್ತವೆ. ಈ ನೇಮಕಾತಿಯಲ್ಲಿ ಸೀನಿಯರ್ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ (Senior Production Executive) - 6 ಹುದ್ದೆಗಳು, ಪ್ರೊಡಕ್ಷನ್ ಎಕ್ಸಿಕ್ಯೂಟಿವ್ (Production Executive) -3 ಹುದ್ದೆಗಳು ಸೇರಿ ಒಟ್ಟು 9 ಹುದ್ದೆಗಳನ್ನು ನೇಮಕ‌ ಮಾಡಿಕೊಳ್ಳಲಾಗುತ್ತದೆ.

ಪ್ರೊಡಕ್ಷನ್ ಎಕ್ಸಿಕ್ಯೂಟಿವ್ (Senior Production Executive) ಹುದ್ದೆಗೆ ತಿಂಗಳಿಗೆ ರೂ 50,000 ರಿಂದ ರೂ 55,000 ವೇತನ ಸಿಗಲಿದೆ. ಪ್ರೊಡಕ್ಷನ್ ಎಕ್ಸಿಕ್ಯೂಟಿವ್ (Production Executive) ಹುದ್ದೆಗೆ  ಪ್ರತಿ ತಿಂಗಳು ರೂ 35,000 ರಿಂದ ರೂ 40,000 ವೇತನ ದೊರೆಯಲಿದೆ. ಪ್ರಸಾರ ಭಾರತಿಯ  ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಪಡೆದಿರಬೇಕು. ಜೊತೆಗೆ ಅಭ್ಯರ್ಥಿಗಳು ಹಿಂದಿಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

ಸೀನಿಯರ್ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆಯಿಂದ ಪತ್ರಿಕೋದ್ಯಮ ಅಥವಾ ಸಮೂಹ ಸಂವಹನ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಪೂರೈಸಿರಬೇಕು. ಜೊತೆಗೆ ಅಭ್ಯರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು. ಈ ಹುದ್ದೆಗಳ ಅರ್ಹತಾ ಮಾನದಂಡಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು. ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಹುದ್ದೆಗೆ ನಿಗದಿತ ದಿನಾಂಕದಂದು ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳು ಆಗಿದೆ. ಸೀನಿಯರ್ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿಯ ದಿನಾಂಕದಂದು ಗರಿಷ್ಠ ವಯಸ್ಸಿನ ಮಿತಿ 50 ವರ್ಷಗಳ ಒಳಗಿರಬೇಕು.

HAL Recruitment 2022: BE, B Tech ಆದವರಿಗೆ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ಪ್ರಸಾರ ಭಾರತಿಯಲ್ಲಿ ಈ ಎಲ್ಲಾ ನಿಯಮಗಳು ಮತ್ತು ಷರತ್ತುಗಳ ಮೇಲೆ ಕೆಲಸ ಮಾಡಲು  ಸಿದ್ಧರಿರುವ ಅಭ್ಯರ್ಥಿಗಳು, ಅಗತ್ಯವಿರುವ ವಿದ್ಯಾರ್ಹತೆಗಳು ಮತ್ತು ಮೇಲೆ ಸೂಚಿಸಿದ ಅನುಭವವನ್ನು ಹೊಂದಿರುವವರು ಜನವರಿ 20ರ ಒಳಗಾಗಿ ಪ್ರಸಾರ ಭಾರತಿ ವೆಬ್ ಲಿಂಕ್ https://applications.prasarbharati.org/ ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಸಕ್ತಿ ಯುಳ್ಳ ಅಭ್ಯರ್ಥಿಗಳು ಕೂಡಲೇ ಪ್ರಸಾರ ಭಾರತಿ ವೆಬ್ ಸೈಟ್ ಗೆ ಭೇಟಿ ನೀಡಿ ಹುದ್ದೆಗಳ ಕುರಿತಾಗಿ ತಿಳಿದುಕೊಳ್ಳಿ. ಅರ್ಜಿ ಸಲ್ಲಿಕೆ ಬಳಿಕ ಅಭ್ಯರ್ಥಿಗಳು ಅರ್ಜಿಯ ಪ್ರಿಂಟ್ ಔಟ್  ತೆಗೆದಿಟ್ಟುಕೊಳ್ಳಿ.

click me!