ಪ್ರಸಾರ ಭಾರತಿಯ ಆಲ್ ಇಂಡಿಯಾ ರೇಡಿಯೋದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಎಪ್ರಿಲ್ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಬೆಂಗಳೂರು (ಎ.1): ಪ್ರಸಾರ ಭಾರತಿಯ (Prasar Bharati) ಆಲ್ ಇಂಡಿಯಾ ರೇಡಿಯೋದಲ್ಲಿ (All India Radio) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸುದ್ದಿ ಸಂಪಾದಕ, ವೆಬ್ ಸಂಪಾದಕ, ಸುದ್ದಿವಾಚಕ ಮತ್ತು ಅನುವಾದಕ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಎಪ್ರಿಲ್ 8 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ prasarbharati.gov.in ಗೆ ಭೇಟಿ ನೀಡಬಹುದು.
ಹುದ್ದೆಯ ಮಾಹಿತಿ:
ಸುದ್ದಿ ಸಂಪಾದಕ- News Editor (ಇಂಗ್ಲಿಷ್)
ಸುದ್ದಿ ಸಂಪಾದಕ (ಹಿಂದಿ)
ವೆಬ್ ಸಂಪಾದಕ -Web Editor (ಇಂಗ್ಲಿಷ್)
ವೆಬ್ ಸಂಪಾದಕ (ಹಿಂದಿ)
ಗ್ರಾಫಿಕ್ ಡಿಸೈನರ್ (Graphic Designer)
ಸುದ್ದಿ ವಾಚಕ-ಇಂಗ್ಲಿಷ್ (Newsreader)
ಸುದ್ದಿ ವಾಚಕ-ಕಮ್-ಅನುವಾದಕ (ಹಿಂದಿ)
ಸುದ್ದಿ ವಾಚಕ-ಕಮ್-ಅನುವಾದಕ (ಸಂಸ್ಕೃತ)
ಸುದ್ದಿ ವಾಚಕ-ಕಮ್-ಅನುವಾದಕ (translator- ಅನುವಾದಕ)
ಸುದ್ದಿ ವಾಚಕ-ಕಮ್-ಅನುವಾದಕ (ಉರ್ದು)
ಸುದ್ದಿವಾಚಕ-ಕಮ್-ಅನುವಾದಕ (ಪಂಜಾಬಿ)
ಸುದ್ದಿ ವಾಚಕ-ಕಮ್-ಅನುವಾದಕ (ನೇಪಾಳಿ)
ಸುದ್ದಿ ಸಂಪಾದಕ (ವಾಣಿಜ್ಯ)
ಇಂಗ್ಲಿಷ್ ನಿರೂಪಕ - Anchors (ವಾಣಿಜ್ಯ)
ಹಿಂದಿ ನಿರೂಪಕ (ವಾಣಿಜ್ಯ)
ಶೈಕ್ಷಣಿಕ ಅರ್ಹತೆ: ಪ್ರಸಾರ ಭಾರತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.
Indian Navy Recruitment 2022: ಅಪ್ರೆಂಟಿಸ್ ಮತ್ತು SSR ಬ್ಯಾಚ್ ಗೆ ಅರ್ಜಿ ಆಹ್ವಾನ
ಸುದ್ದಿ ಸಂಪಾದಕ (ಇಂಗ್ಲಿಷ್/ಹಿಂದಿ) ಮತ್ತು ವರದಿಗಾರ ಹಾಗೂ ವೆಬ್ ಸಂಪಾದಕ ಹುದ್ದೆಗೆ ಕನಿಷ್ಠ ಒಂದು ವರ್ಷದ ಅವಧಿಯೊಂದಿಗೆ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಅಥವಾ ಮುದ್ರಣ/ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿ ಮಾಡುವ/ಸಂಪಾದಿಸುವ ಕೆಲಸದಲ್ಲಿ 5 ವರ್ಷಗಳ ಅನುಭವ. ಇಂಗ್ಲಿಷ್/ಹಿಂದಿ ಭಾಷೆಯಲ್ಲಿ ಪ್ರಾವೀಣ್ಯತೆ. ಕಂಪ್ಯೂಟರ್ ಅಪ್ಲಿಕೇಶನ್‌ಗಳ ಜ್ಞಾನ ಹೊಂದಿರಬೇಕು.
ಗ್ರಾಫಿಕ್ ಡಿಸೈನರ್: ಗ್ರಾಫಿಕ್ಸ್ ಕ್ಷೇತ್ರದಲ್ಲಿ ಪದವಿ/ಡಿಪ್ಲೊಮಾ ಮಾಡಿರಬೇಕು.
ಸುದ್ದಿ ವಾಚಕ-ಕಮ್-ಅನುವಾದಕ ಹುದ್ದೆಗೆ ಮೇಲೆ ನಮೂದಿಸಿದ ಎಲ್ಲಾ ಭಾಷೆಗಳಲ್ಲಿ ಪ್ರಾವಿಣ್ಯತೆ ಹೊಂದಿರಬೇಕು. ವಿಶ್ವವಿದ್ಯಾಲಯದಿಂದ ಪದವಿ ಮಾಡಿರಬೇಕು.
ಸುದ್ದಿ ನಿರೂಪಕ ಹುದ್ದೆಗೆ ಕನಿಷ್ಠ ಒಂದು ವರ್ಷದ ಅವಧಿಯೊಂದಿಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಅಥವಾ ಸ್ನಾತಕೋತ್ತರ ಡಿಪ್ಲೊಮಾ ಅಥವಾ
ಮುದ್ರಣ/ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವ್ಯಾಪಾರ ವರದಿ/ಸಂಪಾದನೆ ಕೆಲಸದಲ್ಲಿ 5-ವರ್ಷದ ಅನುಭವ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪ್ರಾವೀಣ್ಯತೆ. ಪ್ರಸಾರಕ್ಕೆ ಸೂಕ್ತವಾದ ಉತ್ತಮ ಗುಣಮಟ್ಟದ ಧ್ವನಿಯನ್ನು ಹೊಂದಿರಬೇಕು. ಕಂಪ್ಯೂಟರ್ ಅಪ್ಲಿಕೇಶನ್‌ಗಳ ಉತ್ತಮ ಜ್ಞಾನ ಹೊಂದಿರಬೇಕು
KIOCL RECRUITMENT 2022: ಕುದುರೆಮುಖ ಕಬ್ಬಿಣ ಕಾರ್ಖಾನೆಯಲ್ಲಿ ಎಂಜಿನಿಯರ್ ಪದವೀಧರರ ನೇಮಕಾತಿ
ವಯೋಮಿತಿ: ಪ್ರಸಾರ ಭಾರತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 21 ವರ್ಷದಿಂದ 50 ವರ್ಷಗದ ಒಳಗಿರಬೇಕು.
ಅರ್ಜಿ ಶುಲ್ಕ: ಪ್ರಸಾರ ಭಾರತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ₹300 ಮತ್ತು SC/ST/OBC ಅಭ್ಯರ್ಥಿಗಳು ₹225 ಅರ್ಜಿ ಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಪ್ರಸಾರ ಭಾರತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖತ ಪರೀಕ್ಷೆ, ಧ್ವನಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
IAS Officer Salary: UPSC ಪರೀಕ್ಷೆ ಬರೆದು IAS ಅಧಿಕಾರಿಯಾಗುವವರಿಗೆ ವೇತನವೆಷ್ಟು?