Prasar Bharati Recruitment 2022: ಪ್ರಸಾರ ಭಾರತಿಯಲ್ಲಿನ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

By Suvarna News  |  First Published Jan 21, 2022, 5:19 PM IST

ಪ್ರಸಾರ ಭಾರತಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 


ಬೆಂಗಳೂರು(ಜ.21): ಪ್ರಸಾರ ಭಾರತಿ (Prasar Bharati) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಸಂಪನ್ಮೂಲ ವ್ಯಕ್ತಿ​, ವಿಡಿಯೋ ಸಹಾಯಕ ಸೇರಿ​ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜನವರಿ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ prasarbharati.gov.inಗೆ ಭೇಟಿ ನೀಡಬಹುದು. 

ಹುದ್ದೆಯ ಮಾಹಿತಿ:
ಸಂಪನ್ಮೂಲ ವ್ಯಕ್ತಿ (Resource Person)
ವೀಡಿಯೊ ಸಹಾಯಕ (Video Assistant)
ಪೋಸ್ಟ್ ಪ್ರೊಡಕ್ಷನ್ ಸಹಾಯಕ​ (Post Production Assistant)
ಸಹಾಯಕ ಮೇಕಪ್ ಬ್ಯೂಟಿಷಿಯನ್/ಕೇಶ ವಿನ್ಯಾಸಕರು (Makeup Assistant Beautician/Hair Dresser)
ಸೆಟ್ ಸಹಾಯಕ/ಬಡಗಿ (Set Assistant/Carpenter)
ಜನರಲ್ ಅಸಿಸ್ಟೆಂಟ್ (General Assistant)

Latest Videos

undefined

ಶೈಕ್ಷಣಿಕ ಅರ್ಹತೆ:
ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಪದವಿ ಪಡೆದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪತ್ರಿಕೋದ್ಯಮ ಮತ್ತು ಸಮೂಹ/ ಟಿವಿ ಮತ್ತು ರೇಡಿಯೊದಲ್ಲಿ ಪದವಿ/ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ವಿಡಿಯೋ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10+2, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿನಿಮಾಟೋಗ್ರಫಿ/ವೀಡಿಯೋಗ್ರಫಿಯಲ್ಲಿ ಡಿಪ್ಲೊಮಾ/ಪದವಿ ಪಡೆದಿರಬೇಕು.

ಪೋಸ್ಟ್ ಪ್ರೊಡಕ್ಷನ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10+2; ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಚಲನಚಿತ್ರ ಮತ್ತು ವೀಡಿಯೊ ಸಂಪಾದನೆಯಲ್ಲಿ ಪದವಿ ಪದವಿ/ ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಸಹಾಯಕ ಮೇಕಪ್ ಬ್ಯೂಟಿಷಿಯನ್/ಕೇಶ ವಿನ್ಯಾಸಕರು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಸಂಸ್ಥೆಯಿಂದ ಪಿಯುಸಿ ಮಾಡಿರಬೇಕು. ಮೇಕಪ್  ವಿಷಯದಲ್ಲಿ ಡಿಪ್ಲೋಮಾ ಮತ್ತು ವೃತ್ತಿಪರ ಪಾರ್ಲರ್ ನಲ್ಲಿ 2 ವರ್ಷಗಳ ಅನುಭವ ಇರಬೇಕು.

ಸೆಟ್ ಸಹಾಯಕ/ಬಡಗಿ  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಸಂಸ್ಥೆಯಿಂದ ಪಿಯುಸಿ ಮಾಡಿರಬೇಕು.

ಜನರಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ: ಸಂಪನ್ಮೂಲ ವ್ಯಕ್ತಿ, ವಿಡಿಯೋ ಸಹಾಯಕ, ಜನರಲ್ ಅಸಿಸ್ಟೆಂಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21 ರಿಂದ 40 ವರ್ಷದೊಳಗಿರಬೇಕು. 

IFFCO Recruitment 2022: ಇಫ್ಕೊನಲ್ಲಿ ಬಿಸಿಎ ಪಾಸಾದವರಿಗೆ ಉದ್ಯೋಗವಕಾಶ

ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ: ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿ (Prasar Bharathi) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ.  ಮಲ್ಟಿ ಮೀಡಿಯಾ ಜರ್ನಲಿಸ್ಟ್ ( Multi Media Journalist ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು,  ಅನುಭವಿ ಮತ್ತು ಕ್ರಿಯಾತ್ಮಕರಿಂದ ಮಲ್ಟಿ ಮೀಡಿಯಾ ಜರ್ನಲಿಸ್ಟ್ ಹುದ್ದೆಗಳ ಆಯ್ಕೆಗೆ ನೇರ ಸಂದರ್ಶನ ನಡೆಸಲಿರುವ ಬಗ್ಗೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜನವರಿ 28 ಆಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ತಾಣ https://prasarbharati.gov.in/pbvacancies/ ಗೆ ಭೇಟಿ ನೀಡಬಹುದು.

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ದಿನಾಂಕ 28-01-2022ರಂದು ಬೆಳಿಗ್ಗೆ 10 ಗಂಟೆಗೆ  ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ  ಮಾಸಿಕ 30,000 ವೇತನ ದೊರೆಯಲಿದೆ.

ಈ ಹುದ್ದೆಗಳಿಗೆ ಅರ್ಹರಾದಂತ ಅಭ್ಯರ್ಥಿಗಳು ಸಂದರ್ಶನಕ್ಕೆ ತೆರಳೋ ಮುನ್ನ https://applications.prasarbharati.org ಲಿಂಕ್ ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಸಂದರ್ಶನ ನಡೆಯುವ ಸ್ಥಳ:
DD News,
Doordarshan Kendra,
5 Sivananda Salai, Chennai
Pin – 600005, Tamil Nadu

ಸರಕಾರಿ ಶಾಲೆಯಲ್ಲಿ ನ್ಯಾನೊ ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ರೂ. ಬಿಡುಗಡೆ

click me!