NTRO Recruitment 2022: ನ್ಯಾಷನಲ್ ಟೆಕ್ನಿಕಲ್ ರಿಸರ್ಚ್‌ ಆರ್ಗನೈಜೇಷನ್ ನಲ್ಲಿ ಐಟಿ ಉದ್ಯೋಗ

By Gowthami K  |  First Published Oct 23, 2022, 8:44 PM IST

ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಲಾಗಿದೆ.  ಒಟ್ಟು 125 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು   ನವೆಂಬರ್ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಲಾಗಿದೆ.  ಒಟ್ಟು 125 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು   ನವೆಂಬರ್ 7 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.  ಹೆಚ್ಚಿನ ಮಾಹಿತಿಗೆ ವೆಬ್‌ತಾಣ https://ntro.gov.in/consultant/index.do ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು  ಅಭ್ಯರ್ಥಿಗಳು  B.E, B.Tech, BCA, ಇಂಜಿನಿಯರಿಂಗ್, M.Sc, M.Tech, MCA,ಪದವಿ ಮಾಡಿರಬೇಕು.  ಅಭ್ಯರ್ಥಿಯು ಅರ್ಹರಾಗಿದ್ದರೆ ಅಧಿಕೃತ NTRO ಅಧಿಸೂಚನೆಗೆ ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ನೇಮಕಾತಿ 2022 ಅಧಿಸೂಚನೆ, NTRO ನೇಮಕಾತಿ 2022 ಆನ್‌ಲೈನ್ ಅಪ್ಲಿಕೇಶನ್, ವಯಸ್ಸಿನ ಮಿತಿ, ಶುಲ್ಕ ರಚನೆ, ಅರ್ಹತಾ ಮಾನದಂಡಗಳು, ವೇತನ ಪಾವತಿ, ಉದ್ಯೋಗ ವಿವರ, NTRO ಪ್ರವೇಶ ಕಾರ್ಡ್ 2022, ಪಠ್ಯಕ್ರಮ ಮತ್ತು ಹೆಚ್ಚಿನ ಮಾಹಿತಿ ಮುಂದೆ ನೀಡಲಾಗಿದೆ.  

ಒಟ್ಟು 125 ಹುದ್ದೆಗಳ ಮಾಹಿತಿ ಇಂತಿದೆ:
ಸೈಬರ್ ಸೆಕ್ಯೂರಿಟಿ ಅನಾಲಿಸ್ಟ್‌: 36 ಹುದ್ದೆಗಳು
ಸಾಫ್ಟ್‌ವೇರ್‌ ಪ್ರೋಗ್ರಾಮರ್: 4 ಹುದ್ದೆಗಳು
 ರಿಸಕ್‌ ಪ್ರೋಗ್ರಾಮರ್: 10 ಹುದ್ದೆಗಳು
 ನೆಟ್‌ವರ್ಕ್‌ ಅಡ್ಮಿನಿಸ್ಟ್ರೇಟರ್ ; 2 ಹುದ್ದೆಗಳು
 ಪವರ್ ಅಂಡ್ ಎನರ್ಜಿ ಸೆಕ್ಟಾರ್ ಐಟಿ ಅಂಡ್ ಒಟಿ ಸೆಕ್ಯೂರಿಟಿ ಕನ್ಸಲ್‌ಟಂಟ್‌ : 3 ಹುದ್ದೆಗಳು
 BFSI ಸೆಕ್ಟಾರ್ ಐಟಿ ಸೆಕ್ಯೂರಿಟಿ ಕನ್ಸಲ್‌ಟಂಟ್ :3 ಹುದ್ದೆಗಳು
 ಕ್ಲೌಡ್ ಇನ್ಫ್ಟಾಸ್ಟ್ರಕ್ಚರ್ ಸೆಕ್ಯೂರಿಟಿ ಕನ್ಸಲ್‌ಟಂಟ್ : 1 ಹುದ್ದೆ 
 ಡಾಟಾ ಎಸ್ಸೆನ್ಸಿಯಲ್ ಸೆಂಟರ್ ಸೆಕ್ಯೂರಿಟಿ ಕನ್ಸಲ್‌ಟಂಟ್: 2 ಹುದ್ದೆಗಳು 
 ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ : 1 ಹುದ್ದೆ 
ಟೀಮ್ ಲೀಡರ್ : 2 ಹುದ್ದೆಗಳು
ಸಿಸ್ಟಮ್ ಸ್ಪೆಷಲಿಸ್ಟ್‌ : 2 ಹುದ್ದೆಗಳು
ಕನ್ಸಲ್‌ಟಂಟ್    : 2 ಹುದ್ದೆಗಳು
ಮೊಬೈಲ್ ಸೆಕ್ಯೂರಿಟಿ ರಿಸರ್ಚರ್ : 3ಹುದ್ದೆಗಳು
ಸೈಬರ್ ಸೆಕ್ಯೂರಿಟಿ ರಿಸರ್ಚರ್ : 33 ಹುದ್ದೆಗಳು
ರೆಡ್‌ ಟೀಮ್ ಎಕ್ಸ್‌ಪರ್ಟ್‌ : 2 ಹುದ್ದೆಗಳು 
ಆಂಡ್ರಾಯ್ಡ್‌ / ಐಒಎಸ್ ಸೆಕ್ಯೂರಿಟಿ ರಿಸರ್ಚರ್ : 1 ಹುದ್ದೆ
ಫರ್ಮ್‌ವೇರ್ ರಿವರ್ಸ್‌ ಇಂಜಿನಿಯರ್ : 1 ಹುದ್ದೆ
ಸಾಫ್ಟ್‌ವೇರ್ ಡೆವಲಪರ್ : 5 ಹುದ್ದೆಗಳು
ರಿಮೋಟ್ ಸೆನ್ಸಿಂಗ್ ಡಾಟಾ : 1 ಹುದ್ದೆ
ಸಿಸ್ಟಮ್ ಸ್ಪೆಷಲಿಸ್ಟ್‌ : 1 ಹುದ್ದೆ
ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ : 2 ಹುದ್ದೆಗಳು
ನೆಟ್‌ವರ್ಕ್‌ ಇಂಜಿನಿಯರ್ : 1 ಹುದ್ದೆ
ಜಿಯೋಸ್ಪೇಟಿಯಲ್ ಸಾಫ್ಟ್‌ವೇರ್ ಇಂಜಿನಿಯರ್ : 2  ಹುದ್ದೆಗಳು
ಎಐ / ಐವಿಎಲ್ ಕನ್ಸಲ್‌ಟಂಟ್ : 5 ಹುದ್ದೆಗಳು

Latest Videos

undefined

Rozgar Mela: ರಾಜ್ಯದಲ್ಲಿ 1000 ಯುವಕರಿಗೆ ಕೇಂದ್ರ ನೌಕರಿ

ವಯೋಮಿ:  ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ 30 ರಿಂದ  40 ವರ್ಷಗಳನ್ನು ಒಳಗಿನವರಾಗಿರಬೇಕು.

ರೈಲ್ವೆಯಲ್ಲಿ 200 ಜನರ ನೇಮಕ, ನೇಮಕಾತಿ ಪತ್ರ ವಿತರಿಸಿದ ಸಚಿವೆ ಶೋಭಾ ಕರಂದ್ಲಾಜೆ

ಆಯ್ಕೆ ಪ್ರಕ್ರಿಯೆ:  ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ  ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. 

click me!