HALನಲ್ಲಿ ಅಪ್ರೆಂಟಿಶಿಪ್: ಡಿಪ್ಲೋಮಾ, ಪದವೀಧರರಿಗೆ ಅವಕಾಶ

By Suvarna News  |  First Published Sep 12, 2021, 2:23 PM IST

ಸಾರ್ವಜನಿಕ ವಲಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ.(ಎಚ್ಎಎಲ್) ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಡಿಪ್ಲೋಮಾ ಮತ್ತು ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ಕೊನೆಯ ದಿನವಾಗಿದೆ. 


ಇಂಜಿನಿಯರಿಂಗ್ ಪದವಿ ಹಾಗೂ ಡಿಪ್ಲೋಮಾ ಪೂರೈಸಿರುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಅದರಲ್ಲೂ ಕರ್ನಾಟಕದವರಿಗೆ ತಮ್ಮದೇ ನಾಡಿನ ಪ್ರತಿಷ್ಟಿತ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಅಪ್ರೆಂಟಿಸ್ ಹುದ್ದೆಗೆ ಸೇರುವ ಸೌಭಾಗ್ಯ ದಕ್ಕಿಸಿಕೊಳ್ಳುವ ಅವಕಾಶ ಇದಾಗಿದೆ. ಅಧಿಸೂಚನೆ ತಿಳಿಯಲು

ವೆಸ್ಟರ್ನ್‌ ಕೋಲ್ ಫೀಲ್ಡ್‌ನಲ್ಲಿ 965 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Latest Videos

undefined

ಬೆಂಗಳೂರಿನಲ್ಲಿರುವ ಹೆಚ್ಎಎಲ್ ಕಂಪನಿ, ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಪದವಿ ಮತ್ತು ಡಿಪ್ಲೊಮಾ ಟ್ರೈನಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ hal-india.co.in ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ಅಂತಿಮ ದಿನವಾಗಿದೆ. ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

 ಹೆಚ್‌ಎಎಲ್ ಬೆಂಗಳೂರಿನಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿ ಪಡೆಯಲು ಅರ್ಹ ಡಿಪ್ಲೊಮಾ ಮತ್ತು ಬಿಇ/ಬಿಟೆಕ್‌ನಿಂದ ಅರ್ಜಿಗಳನ್ನು ಆಹ್ವಾನಿಸಲಾಗಮೇಲೆ ಹೆಚ್  ಪದವಿ ಅಪ್ರೆಂಟಿಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ 4984 ರೂ. ಸ್ಟೈಫಂಡ್ ಹಾಗೂ ಡಿಪ್ಲೊಮಾ ಟ್ರೈನಿ (ಅಪ್ರೆಂಟಿಸ್)ಗಳಿಗೆ ಮಾಸಿಕ 3542 ರೂ. ಸ್ಟೈಫಂಡ್ ಸಿಗಲಿದೆ.

ಎಚ್‌ಎಎಲ್ ಪದವಿ ಮತ್ತು ಡಿಪ್ಲೊಮಾ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು, ಏರೋನಾಟಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ / ಇಂಡಸ್ಟ್ರಿಯಲ್ ಇಂಜಿನಿಯರಿಂಗ್ / ಇಂಡಸ್ಟ್ರಿಯಲ್ ಪ್ರೊಡಕ್ಷನ್ ಎಂಜಿನಿಯರಿಂಗ್ / ಪ್ರೊಡಕ್ಷನ್ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

ಐಟಿಐ ಪಾಸು ಮಾಡಿದ್ದೀರಾ? ಇಸಿಐಎಲ್‌ನಲ್ಲಿ 243 ಅಪ್ರೆಂಟಿಸ್‌ ಹುದ್ದಗೆಳಿಗೆ ನೇಮಕಾತಿ

ಎಲೆಕ್ಟ್ರಿಕಲ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ / ಏವಿಯಾನಿಕ್ಸ್ ಎಂಜಿನಿಯರಿಂಗ್ / ಎಲೆಕ್ಟ್ರಾನಿಕ್ಸ್ ಮತ್ತು ಟೆಲಿ ಕಮ್ಯುನಿಕೇಶನ್ ಎಂಜಿನಿಯರಿಂಗ್ / ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ / ಟೆಲಿ-ಕಮ್ಯುನಿಕೇಶನ್ ಎಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ ಕಂಪ್ಯೂಟರ್ ಎಂಜಿನಿಯರಿಂಗ್ / ಕಂಪ್ಯೂಟರ್ ಸೈನ್ಸ್ & ಟೆಕ್ನಾಲಜಿ / ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್ / ಇನ್ಫರ್ಮೇಷನ್ ಸೈನ್ಸ್ & ಇಂಜಿನಿಯರಿಂಗ್ / ಇನ್ಫರ್ಮೇಷನ್ ಟೆಕ್ನಾಲಜಿ, ಕೆಮಿಕಲ್  ಎಂಜಿನಿಯರಿಂಗ್- ಇವುಗಳಲ್ಲಿ ಯಾವುದಾದರೂ ಒಂದು ಪೂರೈಸಿರಬೇಕು. ಇನ್ನು ಡಿಪ್ಲೋಮಾ ಅಭ್ಯರ್ಥಿಯು ಡಿಪ್ಲೊಮಾ ಅಥವಾ ಬಿಇ/ಬಿ ಟೆಕ್ ನಲ್ಲಿ ತಾತ್ಕಾಲಿಕ ಡಿಪ್ಲೊಮಾ ಅಥವಾ ಭಾರತದಲ್ಲಿ ಮಾನ್ಯತೆ ಪಡೆದ ಮಂಡಳಿಯಿಂದ ಬಿಇ/ಬಿಟೆಕ್ ಪ್ರಮಾಣಪತ್ರ ಹೊಂದಿರಬೇಕು. 

ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ hal-india.co.in ಮೂಲಕ ಸೆಪ್ಟೆಂಬರ್ 03 ರಿಂದ ಸೆಪ್ಟೆಂಬರ್ 25, 2021 ರವರೆಗೆ ಅರ್ಜಿ ಸಲ್ಲಿಸಬಹುದು. ಡಿಪ್ಲೊಮಾ/ಬಿ.ಟೆಕ್ ಅಂಕಗಳ ಮೆರಿಟ್ ಆಧಾರದ ಮೇಲೆ ಹೆಚ್ ಎಎಲ್, ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. 

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಅಪ್ರೆಂಟಿಸ್ ಮಾಡುವ ಅಭ್ಯರ್ಥಿಗಳಿಗೆ ಮುಂದೆ ಪ್ರತಿಷ್ಟಿತ ಕಂಪನಿಗಳನ್ನು ಸೇರುವ ಅವಕಾಶ ಸಿಗಲಿದೆ. ಸರ್ಕಾರಿ ಸ್ವಾಮ್ಯದ ಹೆಚ್ಎಎಲ್ ನಲ್ಲಿ ಕೆಲಸ ಮಾಡುವುದೇ ಹೆಗ್ಗಳಿಕೆ. ಅದಕ್ಕಾಗಿಯೇ ಇಂಜಿನಿಯರಿಂಗ್ ಅಥವಾ ಡಿಪ್ಲೋಮಾ ಮುಗಿಸಿರುವ ಅಭ್ಯರ್ಥಿಗಳು ಯಾವುದೇ ನಿಶ್ಚಿಂತೆ ಇಲ್ಲದೇ ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಹಾಕಿ. ನಿಮಗೆ ಅದೃಷ್ಟ ಖುಲಾಯಿಸಿದರೂ ಖುಲಾಯಿಸಬಹುದು.

ರಕ್ಷಣಾ ಇಲಾಖೆಯಲ್ಲಿ ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಜಾಬ್, 400 ಹುದ್ದೆಗಳಿಗೆ ನೇಮಕಾತಿ

ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. ಸರ್ಕಾರಿ ಸ್ವಾಮ್ಯದ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಬೆಂಗಳೂರಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಈ ಕಂಪನಿಯು ರಕ್ಷಣಾ ಇಲಾಖೆಯ ಅಧೀನದಲ್ಲಿದೆ. 81 ವರ್ಷದ ಹಿಂದೆ ಅಂದರೆ 1940ರಲ್ಲಿ ಸ್ಥಾಪನೆಯಾದ ಕಂಪನಿಯು, ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಜಗತ್ತಿನ ಅತ್ಯಂತ ಹಳೆಯ ಕಂಪನಿ ಎಂಬ ಕೀರ್ತಿಗೆ ಪಾತ್ರವಾಗಿದೆ. ರಕ್ಷಣಾ ಇಲಾಖೆಗೆ ಬೇಕಾಗುವ ಯುದ್ಧೋಪಕರಣಗಳನ್ನು, ವಿಮಾನಗಳು, ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಕೊಡುವ ಕೆಲಸವನ್ನು ಇದು ಮಾಡುತ್ತದೆ.

click me!