NIMHANS Recruitment 2022; ನಿಮಾನ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

By Gowthami K  |  First Published Oct 30, 2022, 3:58 PM IST

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 17 ಕೊನೆಯ ದಿನಾಂಕವಾಗಿದೆ.


ಬೆಂಗಳೂರು (ಅ.30): ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಇಲ್ಲಿ ಖಾಲಿ ಇರುವ ವಿವಿಧ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೀಡಿಯಾ ಅಸಿಸ್ಟೆಂಟ್, ಪ್ರಾಜೆಕ್ಟ್​ ಆಫೀಸರ್ ಸೇರಿ ಒಟ್ಟು 14  ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್  ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 17 ಕೊನೆಯ ದಿನಾಂಕವಾಗಿದೆ.

ಒಟ್ಟು 14 ಹುದ್ದೆಗಳ ಮಾಹಿತಿ ಇಂತಿದೆ
ಮೀಡಿಯಾ ಅಸಿಸ್ಟೆಂಟ್-2 ಹುದ್ದೆಗಳು
ಮಾನಿಟರಿಂಗ್ & ಇವಾಲ್ಯುಯೇಷನ್ ಕೋಆರ್ಡಿನೇಟರ್-1  ಹುದ್ದೆ 
ಸೀನಿಯರ್ ಐಟಿ ಆಫೀಸರ್-2 ಹುದ್ದೆಗಳು
ಐಟಿ ಅಸಿಸ್ಟೆಂಟ್/ಮೇಂಟೇನೆನ್ಸ್​ ಆಫೀಸರ್-1  ಹುದ್ದೆ 
ಪ್ರಾಜೆಕ್ಟ್​ ಆಫೀಸರ್- ಚೈಲ್ಡ್​ & ಪ್ರೊಟೆಕ್ಷನ್-2   ಹುದ್ದೆಗಳು
ಪ್ರಾಜೆಕ್ಟ್​ ಆಫೀಸರ್- ಎಜುಕೇಷನ್-2   ಹುದ್ದೆಗಳು
ಪ್ರಾಜೆಕ್ಟ್​ ಆಫೀಸರ್-ಮೆಂಟಲ್ ಹೆಲ್ತ್​-2  ಹುದ್ದೆಗಳು
ಪ್ರಾಜೆಕ್ಟ್​ ಆಫೀಸರ್- ಪಾಲಿಸಿ & ಲಾ-2  ಹುದ್ದೆಗಳು

Latest Videos

undefined

ಮೀಡಿಯಾ ಅಸಿಸ್ಟೆಂಟ್-ಸಮೂಹ ಸಂವಹನ & ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ.
ಮಾನಿಟರಿಂಗ್ & ಇವಾಲ್ಯುಯೇಷನ್ ಕೋಆರ್ಡಿನೇಟರ್-ಸೋಷಿಯಲ್ ಸೈನ್ಸ್​/ ಸೋಷಿಯಲ್ ವರ್ಕ್​/ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಪಿಎಚ್​ಡಿ.
ಸೀನಿಯರ್ ಐಟಿ ಆಫೀಸರ್-ಐಟಿ/ಕಂಪ್ಯೂಟರ್ ಸೈನ್ಸ್​​ನಲ್ಲಿ ಬಿಇ, ಬಿ.ಟೆಕ್, ಎಂಇ, ಎಂಟೆಕ್​. 
ಐಟಿ ಅಸಿಸ್ಟೆಂಟ್/ಮೇಂಟೇನೆನ್ಸ್​ ಆಫೀಸರ್- ಐಟಿ/ಕಂಪ್ಯೂಟರ್ ಸೈನ್ಸ್​​ನಲ್ಲಿ ಬಿಎಸ್ಸಿ, ಬಿಇ, ಬಿ.ಟೆಕ್​, ಎಂಎಸ್ಸಿ, ಎಂಸಿಎ.
ಪ್ರಾಜೆಕ್ಟ್​ ಆಫೀಸರ್- ಚೈಲ್ಡ್​ & ಪ್ರೊಟೆಕ್ಷನ್-ಸೋಷಿಯಲ್ ವರ್ಕ್​/ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ. 
ಪ್ರಾಜೆಕ್ಟ್​ ಆಫೀಸರ್- ಎಜುಕೇಷನ್-ಸೋಷಿಯಲ್ ವರ್ಕ್​/ ಸೈಕಾಲಜಿ/ ಸ್ಪೆಷಲ್ ಎಜುಕೇಷನ್​​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. 
ಪ್ರಾಜೆಕ್ಟ್​ ಆಫೀಸರ್-ಮೆಂಟಲ್ ಹೆಲ್ತ್​-ಸೋಷಿಯಲ್ ವರ್ಕ್​/ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ. 
ಪ್ರಾಜೆಕ್ಟ್​ ಆಫೀಸರ್- ಪಾಲಿಸಿ & ಲಾ- ಕಾನೂನು ವಿಭಾಗದಲ್ಲಿ ಪದವಿ, ಎಲ್​ಎಲ್​ಬಿ.

ವಿದ್ಯಾರ್ಹತೆ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ಬಿಇ, ಬಿ.ಟೆಕ್, ಸ್ನಾತಕೋತ್ತರ ಪದವಿ, ಎಲ್​ಎಲ್​ಬಿ ಮಾಡಿರಬೇಕು.

Haveri: ಕೋಳಿವಾಡ ಜನ್ಮ ದಿನದ ಅಂಗವಾಗಿ ನ. 1ರಂದು ಉದ್ಯೋಗ ಮೇಳ

ವೇತನ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 45,000 ರೂ ನಿಂದ 1,00,000 ರೂ.  ವೇತನ ದೊರೆಯಲಿದೆ.
ಮೀಡಿಯಾ ಅಸಿಸ್ಟೆಂಟ್-ಮಾಸಿಕ  65,000 ರೂ
ಮಾನಿಟರಿಂಗ್ & ಇವಾಲ್ಯುಯೇಷನ್ ಕೋಆರ್ಡಿನೇಟರ್- ಮಾಸಿಕ 1,00,000 ರೂ 
ಸೀನಿಯರ್ ಐಟಿ ಆಫೀಸರ್- ಮಾಸಿಕ  90,000 ರೂ 
ಐಟಿ ಅಸಿಸ್ಟೆಂಟ್/ಮೇಂಟೇನೆನ್ಸ್​ ಆಫೀಸರ್- ಮಾಸಿಕ 45,000 ರೂ
ಪ್ರಾಜೆಕ್ಟ್​ ಆಫೀಸರ್- ಚೈಲ್ಡ್​ & ಪ್ರೊಟೆಕ್ಷನ್- ಮಾಸಿಕ 90,000 ರೂ
ಪ್ರಾಜೆಕ್ಟ್​ ಆಫೀಸರ್- ಎಜುಕೇಷನ್- ಮಾಸಿಕ 90,000 ರೂ
ಪ್ರಾಜೆಕ್ಟ್​ ಆಫೀಸರ್-ಮೆಂಟಲ್ ಹೆಲ್ತ್​-ಮಾಸಿಕ  90,000 ರೂ
ಪ್ರಾಜೆಕ್ಟ್​ ಆಫೀಸರ್- ಪಾಲಿಸಿ & ಲಾ- ಮಾಸಿಕ  90,000 ರೂ

ನಿರುದ್ಯೋಗ ಸಮಸ್ಯೆಗೆ ಪಿಪಿಪಿ ಸೂತ್ರವೇ ಮದ್ದು

ವಯೋಮಿತಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 30 ವರ್ಷ ಮೇಲ್ಪಟ್ಟಿರಬೇಕು.

click me!