NIFT Recruitment 2022: 190 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ ಫ್ಯಾಷನ್ ಟೆಕ್ನಾಲಜಿ

By Suvarna News  |  First Published Dec 30, 2021, 10:22 PM IST
  • ಪ್ರಾಧ್ಯಾಪಕರ ಹುದ್ದೆಗೆ NIFT ಅಧಿಸೂಚನೆ 
  • 190  ಅಸಿಸ್ಟಂಟ್‌ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಅರ್ಜಿ ಜನವರಿ 31 ಕೊನೆಯ ದಿನವಾಗಿದೆ

ಬೆಂಗಳೂರು(ಡಿ.30): ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್ ಟೆಕ್ನಾಲಜಿಯು (National Institute of Fashion Technology -NIFT) ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.  ಒಟ್ಟು 190 ಅಸಿಸ್ಟಂಟ್‌ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜನವರಿ 31, 2022 ರವರೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.  ಹೆಚ್ಚಿನ ಮಾಹಿತಿಗೆ ರಾಷ್ಟ್ರೀಯ ಫ್ಯಾಷನ್‌ ಟೆಕ್ನಾಲಜಿ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ nift.ac.in ಗೆ ಭೇಟಿ ನೀಡಲು ಸೂಚಿಸಲಾಗಿದೆ. 

ಅಸಿಸ್ಟಂಟ್‌ ಪ್ರೊಫೆಸರ್  ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.56,100 ಮಾಸಿಕ ವೇತನ ನೀಡಲಾಗುತ್ತದೆ. ಜತೆಗೆ ಇತರೆ ಭತ್ಯೆಗಳು ಕೂಡ ಇರಲಿದೆ. ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿದ ನಡೆಯಲಿರುವ ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Tap to resize

Latest Videos

undefined

ವಿದ್ಯಾರ್ಹತೆ ಮತ್ತು ವಯೋಮಿತಿ: NIFTಯ ಅಸಿಸ್ಟಂಟ್‌ ಪ್ರೊಫೆಸರ್  ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎನ್‌ಇಟಿ / ಎಸ್‌ಎಲ್‌ಇಟಿ ಅರ್ಹತೆ ಜತೆಗೆ, ಪಿಹೆಚ್‌ಡಿ ಪದವಿ ಪಡೆದಿರಬೇಕು. ಅಬ್ಯರ್ಥಿಗಳ ವಯಸ್ಸು ಜನವರಿ 31, 2022 ಕ್ಕೆ ಗರಿಷ್ಠ 40 ವರ್ಷ ಮೀರಿರಬಾರದು.

ಆಯ್ಕೆ ಪ್ರಕ್ರಿಯೆ:  NIFTಯ ಅಸಿಸ್ಟಂಟ್‌ ಪ್ರೊಫೆಸರ್  ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಪ್ರೆಸೆಂಟೇಷನ್, ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56000 ರೂ ವೇತನ ನೊಗದಿಪಡಿಸಲಾಗಿದೆ.

 ವರ್ಗಾವಾರು ಹುದ್ದೆಗಳ ಮಾಹಿತಿ ಇಂತಿದೆ: ಕಾಯ್ದಿರಿಸಿದ ವರ್ಗ (Unreserved category-UR).-77, ಪರಿಶಿಷ್ಟ ಜಾತಿ (SC)-27, ಪರಿಶಿಷ್ಟ ಪಂಗಡ-14. ಇತರ ಹಿಂದುಳಿದ ವರ್ಗ (OBC)-53, ಆರ್ಥಿಕವಾಗಿ ದುರ್ಬಲ ವಿಭಾಗ(EWS)-19, ಪ್ರತಿಭಾನ್ವಿತ ಕ್ರೀಡಾ ವ್ಯಕ್ತಿ (MSP) -19 ಈ ರೀತೊಯಾಗಿ ಹುದ್ದೆಗಳನ್ನು ಮೀಸಲಿರಿಸಲಾಗಿದೆ.

 ಅರ್ಜಿ ಸಲ್ಲಿಕೆ ಹೇಗೆ?: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಡೈರೆಕ್ಟ್‌ ಲಿಂಕ್‌ ಕ್ಲಿಕ್ ಮಾಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1080 ಅರ್ಜಿ ಶುಲ್ಕ ಇದೆ. ಇತರೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

 

click me!