ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮದಲ್ಲಿ ಇಂಜಿನಿಯರ್ ನೇಮಕಾತಿ, ಲಕ್ಷಕ್ಕೂ ಹೆಚ್ಚು ವೇತನ!

By Suvarna News  |  First Published Mar 20, 2024, 2:22 PM IST

ನ್ಯಾಷನಲ್ ಹೈಡ್ರೊಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್‌ 26 ಕೊನೆಯ ದಿನವಾಗಿದೆ.


ನ್ಯಾಷನಲ್ ಹೈಡ್ರೊ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ದಲ್ಲಿ (ರಾಷ್ಟ್ರೀಯ ಜಲವಿದ್ಯುತ್ ಶಕ್ತಿ ನಿಗಮ) ಖಾಲಿ ಇರುವ ಟ್ರೈನಿ ಆಫೀಸರ್ ಮತ್ತು ಟ್ರೈನಿ ಇಂಜಿನಿಯರ್ (ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

Tap to resize

Latest Videos

undefined

ಟ್ರೈನಿ ಆಫೀಸರ್ ಮತ್ತು ಟ್ರೈನಿ ಇಂಜಿನಿಯರ್ : 280 ಹುದ್ದೆ

1.ಟ್ರೈನಿ ಇಂಜಿನಿಯರ್ (ಸಿವಿಲ್) : 95 ಹುದ್ದೆ

2.ಟ್ರೈನಿ ಇಂಜಿನಿಯರ್ (ಎಲೆಕ್ಟ್ರಿಕಲ್) : 75 ಹುದ್ದೆ

3. ಟ್ರೈನಿ ಇಂಜಿನಿಯರ್ (ಮೆಕ್ಯಾನಿಕಲ್) : 77 ಹುದ್ದೆ

4. ಟ್ರೈನಿ ಇಂಜಿನಿಯರ್ (ಇ ಮತ್ತು ಸಿ) : 04 ಹುದ್ದೆ

5. ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಆಫೀಸರ್ (ಐಟಿ) : 20 ಹುದ್ದೆ

6. ತರಬೇತಿ ಅಧಿಕಾರಿ (ಭೂವಿಜ್ಞಾನ) : 03 ಹುದ್ದೆ

7. ಟ್ರೈನಿ ಇಂಜಿನಿಯರ್ ಮತ್ತು ಟ್ರೈನಿ ಆಫೀಸರ್ (ಇಎನ್‌ವಿ) : 06 ಹುದ್ದೆ

ಕೆಪಿಎಸ್‌ಸಿಯಿಂದ ಭರ್ಜರಿ ನೇಮಕಾತಿ, ವಿವಿಧ ಇಲಾಖೆಯಲ್ಲಿ 2500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ!

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-03-2024

ಅರ್ಜಿ ಶುಲ್ಕ

ಸಾಮಾನ್ಯ. ಇಡಬ್ಲ್ಯೂಎಸ್‌/ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ : ರೂ. 600

ಎಸ್‌ಸಿ/ಎಸ್‌ ಟಿ/ಪಿಡಬ್ಲ್ಯೂಡಿ/ಮಹಿಳಾ ವರ್ಗದ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ಇಲ್ಲ

ವಯಸ್ಸಿನ ಮಿತಿ (26-03-2024 ರಂತೆ):

ಗರಿಷ್ಠ ವಯಸ್ಸಿನ ಮಿತಿ : 30 ವರ್ಷಗಳು

ವೇತನ ಶ್ರೇಣಿ

ರೂ. 50,000-3%-1,60,000

ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಲ್ಲಿ ಸೈಂಟಿಸ್ಟ್‌ ಹುದ್ದೆ, 1 ಲಕ್ಷದ 70 ಸಾವಿರ ವೇತನ!

ಕನಿಷ್ಠ ವಿದ್ಯಾರ್ಹತೆ

ಅಭ್ಯರ್ಥಿಗಳು ತಾವು ಆಯ್ಕೆ ಬಯಸುವ ಹುದ್ದೆಗಳಿಗೆ ತಕ್ಕಂತೆ ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾನಿಲಯದಿಂದ ಸಿವಿಲ್ / ಮೆಕ್ಯಾನಿಕಲ್ /ಎಲೆಕ್ಟ್ರಿಕಲ್ /ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ /ಮಾಹಿತಿ ತಂತ್ರಜ್ಞಾನ/ಅನ್ವಯಿಕ ಭೂವಿಜ್ಞಾನ ಎಂಜಿನಿಯರಿಂಗ್ ವಿಭಾಗದಿಂದ ಬಿ.ಎಸ್ಸಿ ಪದವಿ ಯನ್ನು ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ

ಎ) ಅಭ್ಯರ್ಥಿಗಳು ಗೇಟ್- 2023ರ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ (100 ರಲ್ಲಿ) ಅನುಗುಣವಾಗಿ ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನವನ್ನು ನಡೆಸಲಾಗುತ್ತದೆ.

ಬಿ) ಆಯ್ಕೆಯು ಗೇಟ್- 2023ರ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳಲ್ಲಿ ಶೇಕಡಾ 75 ಅಂಕ ಹಾಗೂ ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದಲ್ಲಿ ಪಡೆದ ಶೇಕಡಾ 25 ಅಂಕಗಳ ಅನುಪಾತದ ಆಧಾರದ ಮೇಲೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: www.nhdcindia.com

click me!