ಸಿಬಿಎಸ್‌ಇ ಯಲ್ಲಿ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ

By Suvarna News  |  First Published Mar 16, 2024, 2:10 PM IST

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್​​ನಲ್ಲಿ 118 ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಏಪ್ರೀಲ್‌ 11 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.


ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್​​ನಲ್ಲಿ 118 ವಿವಿಧ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಮಾರ್ಚ್ 12 ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಏಪ್ರಿಲ್ 11 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆಗಳು
ಅಸಿಸ್ಟೆಂಟ್ ಸೆಕ್ರೆಟರಿ, ಜೂನಿಯರ್ ಅಕೌಂಟೆಂಟ್ ​ಅಸಿಸ್ಟೆಂಟ್ ಸೆಕ್ರೆಟರಿ- 64, ಅಕೌಂಟ್ಸ್ ಆಫೀಸರ್- 3, ಜೂನಿಯರ್ ಎಂಜಿನಿಯರ್- 17, ಜೂನಿಯರ್ ಟ್ರಾನ್ಸ್​ಲೇಶನ್ ಆಫೀಸರ್-7, ಅಕೌಂಟೆಂಟ್​-7, ಜೂನಿಯರ್ ಅಕೌಂಟೆಂಟ್​-20ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.

Tap to resize

Latest Videos

undefined

ಕೆಪಿಎಸ್‌ಸಿಯಿಂದ ನೇಮಕಾತಿ ಸುಗ್ಗಿ, 247 ಪಿಡಿಒ, 400ಕ್ಕೂ ಹೆಚ್ಚು ಗ್ರೂಪ್ ಸಿ ಹುದ್ದೆ ಅರ್ಜಿ ಆಹ್ವಾನ

ಅರ್ಹತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಪದವಿ ಪಾಸ್ ಮಾಡಿರಬೇಕು ಹಾಗೂ ನಿಗದಿತ ವಯಸ್ಸಿನ ಅರ್ಹತೆ, ಕರ್ತವ್ಯ ಅನುಭವ ಹೊಂದಿರಬೇಕು.

ವೇತನ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೇತನ ನಿಗದಿಪಡಿಸಿಲ್ಲ. ಅವರ ಕಾರ್ಯ ಕ್ಷಮತೆ ಮತ್ತು ಅನುಭವದ ಆಧಾರದ ಮೇಲೆ ವೇತನ ಕೊಡಲಾಗುತ್ತದೆ.

ಸ್ಟಾಫ್ ಸೆಲೆಕ್ಷನ್ ಕಮಿಷನ್ ಪೊಲೀಸ್‌ ಇನ್‌ಸ್ಪೆಕ್ಟರ್ ಹುದ್ದೆ, ಮಾರ್ಚ್‌ 28 ಅರ್ಜಿ ಸಲ್ಲಿಸಲು ಕೊನೆಯ ದಿನ

ಅಸಿಸ್ಟಂಟ್ ಸೆಕ್ರೆಟರಿ ಹುದ್ದೆಗಳು ಗ್ರೂಪ್ ಎ ಹುದ್ದೆಗಳಾಗಿದ್ದು ಪೇ ಲೆವಲ್ - 10 ಸಂಭಾವನೆ ಇರಲಿದೆ. ಅಕೌಂಟೆಂಟ್ ಹುದ್ದೆಗಳು ಗ್ರೂಪ್ ಸಿ ಹುದ್ದೆಗಳಾಗಿದ್ದು, ಇವರಿಗೆ ಪೇ ಲೆವಲ್ -4 / ಪೇ ಲೆವೆಲ್ 2 ಸಂಭಾವನೆ ಇರಲಿದೆ. ಜೂನಿಯರ್ ಇಂಜಿನಿಯರ್ / ಭಾಷಾಂತರ ಅಧಿಕಾರಿ ಗ್ರೂಪ್ ಬಿ ಹುದ್ದೆಗಳಾಗಿದ್ದು ಪೇ ಲೆವೆಲ್ 6 ಸಂಭಾವನೆ ಇರಲಿದೆ.

ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳ ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ ಇನ್ನಿತರೆ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು.

click me!