NDRI Recruitment 2022: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ

By Suvarna News  |  First Published Feb 13, 2022, 4:34 PM IST

ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ  ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಿ ಮಾರ್ಚ್​ 8ರಂದು  ನಡೆಯಲಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.


ಬೆಂಗಳೂರು(ಫೆ.13): ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ (National Dairy Research Institute)​ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಯಂಗ್ ಪ್ರೊಫೆಶನಲ್ (Young Professional ), ಆಫೀಸ್ ಅಸಿಸ್ಟೆಂಟ್, SRF, JRF ಸೇರಿ ಒಟ್ಟು 15  ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾರ್ಚ್​ 8ರಂದು ನೇರ ಸಂದರ್ಶನ (Walk-In-Interview) ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ ndri.res.in ಗೆ ಭೇಟಿ ನೀಡಿ.

ಒಟ್ಟು 15 ಹುದ್ದೆಗಳ ಮಾಹಿತಿ ಇಂತಿದೆ:
ಯಂಗ್ ಪ್ರೊಫೆಶನಲ್ ಗ್ರೇಡ್1- 8
ಸೀನಿಯರ್ ರಿಸರ್ಚ್​ ಫೆಲೋ- SRF- 4
ಆಫೀಸ್ ಅಸಿಸ್ಟೆಂಟ್- 1
ಯಂಗ್ ಪ್ರೊಫೆಶನಲ್ ಗ್ರೇಡ್2 -1
ಜೂನಿಯರ್ ರಿಸರ್ಚ್​ ಫೆಲೋ- JRF-1

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರ ಅರ್ಹತೆ ಪಡೆದಿರಬೇಕು.
ಯಂಗ್ ಪ್ರೊಫೆಶನಲ್ ಗ್ರೇಡ್1- ಬಿಕಾಂ/ಬಿಬಿಎ/ಬಿಬಿಎಸ್/ ಪದವಿ/ಸ್ನಾತಕೋತ್ತರ ಪದವಿ/ಎಂಎಸ್ಸಿ
ಸೀನಿಯರ್ ರಿಸರ್ಚ್​ ಫೆಲೋ- SRF- ಪದವಿ, ಸ್ನಾತಕೋತ್ತರ ಪದವಿ
ಆಫೀಸ್ ಅಸಿಸ್ಟೆಂಟ್- ಪದವಿ
ಯಂಗ್ ಪ್ರೊಫೆಶನಲ್ ಗ್ರೇಡ್2 -ಸ್ನಾತಕೋತ್ತರ ಪದವಿ
ಜೂನಿಯರ್ ರಿಸರ್ಚ್​ ಫೆಲೋ- ಎಂಇ/ಎಂಟೆಕ್/ಎಂವಿಎಸ್ಸಿ/ಎಂಎಸ್ಸಿ

ಯಾದಗಿರಿಯ ಕಡೇಚೂರು ಕೈಗಾರಿಕಾ ಪ್ರದೇಶ 7 ಸಾವಿರ ಎಕರೆಗೆ ವಿಸ್ತರಣೆ: ಸಚಿವ ಡಾ. ಅಶ್ವತ್ಥನಾರಾಯಣ

ವೇತನ: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ದೊರೆಯಲಿದೆ.
ಯಂಗ್ ಪ್ರೊಫೆಶನಲ್ ಗ್ರೇಡ್1- ಮಾಸಿಕ ₹ 25,000
ಸೀನಿಯರ್ ರಿಸರ್ಚ್​ ಫೆಲೋ- SRF- ಮಾಸಿಕ ₹ 31,000-35,000
ಆಫೀಸ್ ಅಸಿಸ್ಟೆಂಟ್- ಮಾಸಿಕ ₹ 15,000
ಯಂಗ್ ಪ್ರೊಫೆಶನಲ್ ಗ್ರೇಡ್2 -ಮಾಸಿಕ ₹ 35,000
ಜೂನಿಯರ್ ರಿಸರ್ಚ್​ ಫೆಲೋ- JRF-ಮಾಸಿಕ ₹ 31,000

ವಯೋಮಿತಿ:  ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರ ವಯೋಮಿತಿ ನಿಗದಿಯಾಗಿದೆ.
ಯಂಗ್ ಪ್ರೊಫೆಶನಲ್ ಗ್ರೇಡ್1- 21ರಿಂದ 45 ವರ್ಷ
ಸೀನಿಯರ್ ರಿಸರ್ಚ್​ ಫೆಲೋ- SRF- ಗರಿಷ್ಠ 40 ವರ್ಷ
ಆಫೀಸ್ ಅಸಿಸ್ಟೆಂಟ್- 18ರಿಂದ 45 ವರ್ಷ
ಯಂಗ್ ಪ್ರೊಫೆಶನಲ್ ಗ್ರೇಡ್2 -21ರಿಂದ 45 ವರ್ಷ
ಜೂನಿಯರ್ ರಿಸರ್ಚ್​ ಫೆಲೋ- ಗರಿಷ್ಠ 35 ವರ್ಷ

ಉದ್ಯೋಗ ಸ್ಥಳ: ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಹರಿಯಾಣದ ಕರ್ನಲ್ ನಲ್ಲಿ ಉದ್ಯೋಗ ಮಾಡಬೇಕು.

TCIL Recruitment 2022: ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗೆ ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನ

ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗೆ ಫೆ.15 ಅರ್ಜಿ ಸಲ್ಲಿಸಲು ಕೊನೆಯ ದಿನ: ಟೆಲಿಕಮ್ಯುನಿಕೇಷನ್ಸ್​ ಕನ್ಸಲ್ಟೆಂಟ್ಸ್​ ಇಂಡಿಯನ್ ಲಿಮಿಟೆಡ್ (Telecommunications Consultants India Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 6 ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ (Technician Apprentice Trainee) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಲು ಕೋರಲಾಗಿದೆ. ಫೆಬ್ರವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆನ್​ಲೈನ್​ (Online) ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ dot.gov.in ಗೆ ಅಥವಾ https://tcilindia.com/ಗೆ ಭೇಟಿ ನೀಡಬಹುದು. 

ಅರ್ಜಿ ಸಲ್ಲಿಸಬೇಕಾದ ವಿಳಾಸ: ಟೆಲಿಕಮ್ಯುನಿಕೇಷನ್ಸ್​ ಕನ್ಸಲ್ಟೆಂಟ್ಸ್​ ಇಂಡಿಯನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಟೆಕ್ನಿಷಿಯನ್ ಅಪ್ರೆಂಟಿಸ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮೊದಲಿಗೆ http://www.mhrdnats.gov.in/ ಅಧಿಕೃತ ವೆಬ್‌ತಾಣಕ್ಕೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು.  https://tcilindia.com/ ನಲ್ಲಿ ಅಧಿಸೂಚನೆಯನ್ನು ಓದಿಕೊಂಡು ಬಳಿಕ ಅಗತ್ಯ ದಾಖಲಾತಿಗಳೊಂದಿಗೆ ಫೆ.15ಕ್ಕೆ ಮೊದಲು tcilapprentice2021@gmail.com ಈ ಮೇಲ್  ಮಾಡಬೇಕು.

click me!