NCERT Recruitment 2022: ಖಾಲಿ ಇರುವ 292 ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

By Gowthami K  |  First Published Oct 13, 2022, 12:50 PM IST

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ - NCERT, ಖಾಲಿ ಇರುವ 292 ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಎನ್‌ಸಿಇಆರ್‌ಟಿಯ ಅಧಿಕೃತ ವೆಬ್‌ಸೈಟ್ ncert.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


ನವದೆಹಲಿ (ಅ.13): ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ - NCERT, ಖಾಲಿ ಇರುವ 292 ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಎನ್‌ಸಿಇಆರ್‌ಟಿಯ ಅಧಿಕೃತ ವೆಬ್‌ಸೈಟ್ ncert.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 28 ಕೊನೆಯ ದಿನವಾಗಿದೆ. ಪ್ರೊಫೆಸರ್: 40, ಅಸೋಸಿಯೇಟ್ ಪ್ರೊಫೆಸರ್: 97, ಸಹಾಯಕ ಪ್ರಾಧ್ಯಾಪಕ: 155 ಹೀಗೆ ಒಟ್ಟು 292  ಹುದ್ದೆಗಳಿವೆ. ಈ ಎಲ್ಲಾ ಹುದ್ದೆಗಳಿಗೆ ಆಯ್ಕೆಯಾದವರನ್ನು ನವದೆಹಲಿ, ಅಜ್ಮೀರ್ , ಭುವನೇಶ್ವರ , ಮೈಸೂರು  ಇಲ್ಲಿ ನೇಮಕಾತಿ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ ತಾಣ ncert.nic.in ಗೆ ಭೇಟಿ ನೀಡಲು ಕೋರಲಾಗಿದೆ.

ವಿದ್ಯಾರ್ಹತೆ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. 

Tap to resize

Latest Videos

undefined

ಸಿಆರ್‌ಪಿಎಫ್‌ನಲ್ಲಿ 400 ಹುದ್ದೆಗಳ ನೇಮಕಾತಿಗೆ ಸೂಚನೆ, ಕರ್ನಾಟದ ಅಭ್ಯರ್ಥಿಗಳಿಗೂ ಹುದ್ದೆ ಮೀಸಲು

ಪ್ರೊಫೆಸರ್  ಹುದ್ದೆಗೆ  ಪಿಎಚ್​ಡಿ ಮಾಡಿರಬೇಕು. ಅಸೋಸಿಯೇಟ್ ಪ್ರೊಫೆಸರ್ ಕೂಡ  ಪಿಎಚ್​ಡಿ ಮತ್ತು ಸಂಬಂಧಿಸಿದ ವಿಷಯಕ್ಕೆ ತಕ್ಕಂತೆ ವಿದ್ಯಾರ್ಹತೆ ಪಡೆದಿರಬೇಕು.  ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ವಿದ್ಯಾರ್ಹತೆ ಜೊತೆಗೆ  ಪಿಎಚ್​ಡಿ  ಮಾಡಿರಬೇಕು. ಲೈಬ್ರರಿಯನ್​​ ಹುದ್ದೆಗೆ ಲೈಬ್ರರಿ ಸೈನ್ಸ್​ನಲ್ಲಿ ಪದವಿ ಜೊತೆಗೆ ಪಿಎಚ್​ಡಿ ಮಾಡಿರಬೇಕು.

NHAI Recruitment 2022; ಕರ್ನಾಟಕ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ

ಅರ್ಜಿ ಶುಲ್ಕ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ UR/OBC/EWS ಗೆ ಸೇರಿದ ಅಭ್ಯರ್ಥಿಗಳು ₹1000 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಹಿಳಾ ಅಭ್ಯರ್ಥಿಗಳು ಮತ್ತು SC/ST/PWD ಗೆ ಸೇರಿದ ಅರ್ಜಿದಾರರಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

KSP CONSTABLE RECRUITMENT 2022: ವಿವಿಧ ಹುದ್ದೆಗಳಿಗೆ ತೃತೀಯ ಲಿಂಗಿಗಳಿಗೂ ಸೇರಿ ನೇಮಕಾತಿ

ವಯೋಮಿತಿ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗೆ ತಕ್ಕಂತೆ ವಯೋಮಿತಿ ನಿಗದಿಯಾಗಿದೆ.

click me!