ಸಿಆರ್‌ಪಿಎಫ್‌ನಲ್ಲಿ 400 ಹುದ್ದೆಗಳ ನೇಮಕಾತಿಗೆ ಸೂಚನೆ, ಕರ್ನಾಟದ ಅಭ್ಯರ್ಥಿಗಳಿಗೂ ಹುದ್ದೆ ಮೀಸಲು

By Suvarna News  |  First Published Oct 3, 2022, 3:33 PM IST

ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌  ಅರ್ಜಿ ಸಲ್ಲಿಕೆಗೆ ಅಕ್ಟೋಬರ್‌ 22ರಂದು ಕೊನೆಯ ದಿನವಾಗಿದೆ.


ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌-ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌)ನಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ವಿವರಗಳಾದ ಆಯ್ಕೆ ಪ್ರಕ್ರಿಯೆ, ವೇತನ ಮಾಹಿತಿ, ಬೇಕಾದ ದಾಖಲೆಗಳುಮ, ಅರ್ಜಿ ಸಲ್ಲಿಕೆ ಹೇಗೆ, ವಯೋಮಿತಿ ಹಾಗೂ ವಿದ್ಯಾರ್ಹತೆ ಸಹಿತ ಪ್ರಮುಖ ವಿವರಗಳನ್ನು ಕೆಳಗಡೆ ನೀಡಲಾಗಿದ್ದು, ಇದರ ಅನ್ವಯ ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌-ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌) ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಒಟ್ಟು 400 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಪೈಕಿ ಬಿಜಾಪುರ ವಿಭಾಗದಲ್ಲಿ 128 ಹುದ್ದೆಗಳು, ದಾಂತೆವಾಡದಲ್ಲಿ 144 ಹುದ್ದೆಗಳು ಹಾಗೂ ಸುಕ್ಮಾದಲ್ಲಿ 128 ಹುದ್ದೆಗಳಿಗೆ ಸಹಿತ ದೇಶಾದ್ಯಂತ ನೇಮಕಾತಿ ನಡೆಯಲಿದೆ. ಹುದ್ದೆಗಳು ಕಾನ್‌ಸ್ಟೇಬಲ್‌ ಹಾಗೂ ಸಾಮಾನ್ಯ ಕರ್ತವ್ಯ ವಿಭಾಗ (ಜಿಡಿ)ಕ್ಕೆ ಸೇರಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಮಾನ್ಯತೆ ಪಡೆದ ಶಿಕ್ಷಣ ಮಂಡಳಿ/ಕೇಂದ್ರದಿಂದ ಕನಿಷ್ಠ 8ನೇ ತರಗತಿಯ ವಿದ್ಯಾರ್ಹತೆಯನ್ನು ಪಡೆದಿರಬೇಕಿದೆ. ಇದರ ಮಾಹಿತಿ ಅಧಿಸೂಚನೆಯಲ್ಲಿ ಇದೆ.

ವಯೋಮಿತಿ, ಅರ್ಜಿ ಶುಲ್ಕ: ಸಿಆರ್‌ಪಿಎಫ್‌-ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ ವತಿಯಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಹೇಳಿದಂತೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷವಾದರೂ ಆಗಿರಬೇಕಿದ್ದು, ಗರಿಷ್ಠ ಎಂದರೆ 28 ವರ್ಷದ ಒಳಗಿರಬೇಕಿದೆ. ಸರ್ಕಾರಿ ನಿಯಮಾನುಸಾರ ಎಸ್ಸಿ/ಎಸ್ಟಿಅಭ್ಯರ್ಥಿಗಳಿಗೆ ಗರಿಷ್ಠ ಎಂದರೆ 5 ವರ್ಷಗಳ ಸಡಿಲಿಕೆ ದೊರೆಯಲಿದೆ. ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳನ್ನು ಮೊದಲು ಲಿಖಿತ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಳಿಕ ಕೌಶಲ್ಯ ಪರೀಕ್ಷೆ, ಹಾಗೂ ಅಂತಿಮವಾಗಿ ಸಂದರ್ಶನ ನಡೆಸಿ ಅಭ್ಯರ್ಥೀಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Tap to resize

Latest Videos

undefined

ಅರ್ಜಿ ಸಲ್ಲಿಕೆಯ ಕುರಿತು ಮಾಹಿತಿ: ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌-ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌)ಯು ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರದಂತೆ ಅಭ್ಯರ್ಥಿಯು ಮೊದಲು ಸಿಆರ್‌ಪಿಎಫ್‌ನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್‌ ಮಾಡಿಕೊಳ್ಳಬೇಕು. ಅಲ್ಲಿ ನೋಂದಣಿಯಾದ ಬಳಿಕ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಬಳಿಕ ಸರಿಯಾದ ಮಾಹಿತಿಗಳನ್ನು ನಮೂದಿಸಿ ಭರ್ತಿಗೊಳಿಸಬೇಕು. ಅರ್ಜಿಗಳ ಜೊತೆಗೆ ದಾಖಲೆಗಳ ರೂಪದಲ್ಲಿ ಆಧಾರ್‌ಕಾರ್ಡ್‌, ಮೇಲೆ ತಿಳಿಸಿದ ಸದರಿ ಹುದ್ದೆಯ ವಿದ್ಯಾರ್ಹತೆ, ಮೀಸಲಾತಿ/ ಜಾತಿ ಪ್ರಮಾಣ ಪತ್ರಗಳು ಸಹಿತ ಇತರೆ ಯಾವುದೇ ಪ್ರಮುಖ ದಾಖಲೆಗಳು ಇದ್ದಲ್ಲಿ ಅವುಗಳ ನಕಲು ಪ್ರತಿಗಳನ್ನು ಅರ್ಜಿ ಜೊತೆ ಲಗತ್ತಿಸಿ ಕಳುಹಿಸಬೇಕಿದೆ. ಇದರ ಕುರಿತು ಹೆಚ್ಚಿನ ಮಾಹಿತಿಯುಳ್ಳ ಅಧಿಸೂಚನೆಯ ಲಿಂಕ್‌ನ್ನು ಕೆಳಗೆ ನೀಡಲಾಗಿದೆ.

IOCL recruitment 2022: ಖಾಲಿ ಇರುವ ಬರೋಬ್ಬರಿ 1535 ಹುದ್ದೆಗಳಿಗೆ ನೇಮಕಾತಿ

ವೇತನ ಶ್ರೇಣಿ ಹೇಗೆ?: ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌-ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌) ತಾನು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ನಿಯಮಾನುಸಾರ ಆಯ್ಕೆಯಾದ ಮೇಲೆ ಅಭ್ಯರ್ಥಿಗಳಿಗೆ ಮಾಸಿಕವಾಗಿ ವೇತನವನ್ನು ನೀಡಲಾಗುತ್ತದೆ. ಪ್ರತಿ ತಿಂಗಳೂ ಕನಿಷ್ಠ 21,700 ರು. ಇಂದ 69,100 ರು. ವರೆಗೆ ನೀಡಲಾಗುತ್ತದೆ. ವೇತನ ಶ್ರೇಣಿ ಕುರಿತು ಹೆಚ್ಚಿನ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌-ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌)ನ ನೇಮಕಾತಿ ವಿಭಾಗವು ತಿಳಿಸಿದೆ.

NHAI RECRUITMENT 2022; ಕರ್ನಾಟಕ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

* ಅರ್ಜಿ ಸಲ್ಲಿಕೆಗೆ ಅಕ್ಟೋಬರ್‌ 22ರಂದು ಕೊನೆಯ ದಿನ

*ಹೆಚ್ಚಿನ ಮಾಹಿತಿಗಾಗಿ  https://crpf.gov.in/ 

* ಕರ್ನಾಟಕದ ಅಭ್ಯರ್ಥಿಗೆ ವಿಳಾಸ : ಸಿಆರ್‌ಪಿಎಫ್‌ ಶಿಬಿರಿ, ಬಿಜಾಪುರ ಕ್ರೀಡಾಂಗಣ, ಅವಪಲ್ಲಿ ತಾಲೂಕು, ಬೀದರ್‌ ಜಿಲ್ಲೆ

click me!