ICAR Recruitment 2022 ಕೃಷಿ ವಿಜ್ಞಾನ ಕೇಂದ್ರದಲ್ಲಿ IT ವೃತ್ತಿಪರ ಹುದ್ದೆಗೆ ನೇಮಕಾತಿ

By Suvarna NewsFirst Published Apr 25, 2022, 9:22 AM IST
Highlights

ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ಖಾಲಿ ಇರುವ IT ವೃತ್ತಿಪರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ  ಮೇ. 12 ಕೊನೆಯ ದಿನವಾಗಿದೆ. 

ಬೆಂಗಳೂರು(ಏ.25): ನೀವೇನಾದ್ರೂ  IT ವೃತ್ತಿಪರ (IT Professional) ಉದ್ಯೋಗ  ಹುಡುಕಾಡುತ್ತಿದ್ದೀರಾ. ಅಂಥವರಿಗಾಗಿ ಇಲ್ಲೊಂದು ಬಂಪರ್ ಅವಕಾಶವಿದೆ. ಅದು ಕೇಂದ್ರ ಸರ್ಕಾರಿ (central government ) ಸ್ವಾಮ್ಯದ ಇಲಾಖೆಯಲ್ಲಿ ಕೆಲಸವಿದೆ. ಅದು ಕೃಷಿಗೆ ಸಂಬಂಧಿಸಿದ್ದು ಅಂದ್ರೆ ನೀವು ಇನ್ನಷ್ಟು ಖುಷಿಪಡಬಹುದು. ಹೌದು. ಅದ್ಭುತವಾದ ಕೃಷಿ ಉದ್ಯೋಗಾವಕಾಶ (Agriculture job) ಇದಾಗಿದ್ದು,  ಅರ್ಜಿ ಸಲ್ಲಿಸಬಹುದು.

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR- Indian Council of Agricultural Research ) ಅಡಿಯಲ್ಲಿ ಬರುವ ಕೃಷಿ ವಿಜ್ಞಾನ ಕೇಂದ್ರವು (Krishi Vignan Kendra-KVK) ಖಾಲಿ ಇರುವ ವಿವಿಧ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.  ಐಟಿ ವೃತ್ತಿಪರ   ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ  ಅರ್ಜಿಗಳನ್ನು ಆಹ್ವಾನಿಸಿದ್ದು,ಅಧಿಸೂಚೆನೆ  ಬಗ್ಗೆ ತಿಳಿಯಲು https://icar.org.in/ ಗೆ ಭೇಟಿ ನೀಡಿ. ಈ  ಹುದ್ದೆಗಳಿಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ.12, 2022 ಕೊನೆಯ ದಿನವಾಗಿದೆ. 

KPSC RDWSD Recruitment 2022 ಒಟ್ಟು 136  ಕಿರಿಯ ಇಂಜಿನಿಯರ್ ಹುದ್ದೆಗೆ ನೇಮಕಾತಿ

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ಖಾಲಿ ಇರುವ IT ವೃತ್ತಿಪರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ CSE/IT ಯಲ್ಲಿ B.Tech ಮಾಡಿರಬೇಕು ಅಥವಾ ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನ / ಕಂಪ್ಯೂಟರ್ ಎಂಜಿನಿಯರಿಂಗ್ / MCA / M.Tech ನಲ್ಲಿ ಸ್ನಾತಕೋತ್ತರ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಮೂರು ವರ್ಷಗಳ ಅನುಭವದೊಂದಿಗೆ ತತ್ಸಮಾನವಾಗಿರಬೇಕು. ಅಥವಾ ಪಿಎಚ್.ಡಿ. ಎರಡು ವರ್ಷಗಳ ಅನುಭವದೊಂದಿಗೆ ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನ / ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪದವಿ ಪಡೆದಿರಬೇಕು.  

ಶೀಘ್ರವೇ 2 ಸಾವಿರಕ್ಕೂ ಹೆಚ್ಚು KSP Constable Recruitment: ಪ್ರವೀಣ್ ಸೂದ್ 

ಕೆಲಸದ ಅನುಭವ: ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ಖಾಲಿ ಇರುವ IT ವೃತ್ತಿಪರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು   ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಆರು ವರ್ಷಗಳ ಅನುಭವ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ: ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ಖಾಲಿ ಇರುವ IT ವೃತ್ತಿಪರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿ ಪರಿಶೀಲನೆ ನಡೆಸಿದ ನಂತರ ವೈಯಕ್ತಿಕ ಸಂದರ್ಶನ ಮತ್ತು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

Kodagu VA Recruitment 2022: ಗ್ರಾಮಲೆಕ್ಕಿಗರ ಹುದ್ದೆಗೆ ನೇಮಕಾತಿ

ವೇತನ ವಿವರ: ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ಖಾಲಿ ಇರುವ IT ವೃತ್ತಿಪರ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳೀಗೆ ಮಾಸಿಕ  ₹60000 ವೇತನ ದೊರೆಯಲಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ ಮತ್ತು ವಿಧಾನ: ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ಖಾಲಿ ಇರುವ IT ವೃತ್ತಿಪರ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಈ ಮೇಲ್‌ ಮೂಲಕ ಅಥವಾ ಈ ಕೆಳಗಿನ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ ಇಂತಿದೆ
ಸಹಾಯಕ ನಿರ್ದೇಶಕ-ಜನರಲ್ (PIM),
ICAR ಹೆಡ್‌ಕ್ವಾರ್ಟರ್ಸ್, ಕೃಷಿ ಭವನ,
ನವದೆಹಲಿ - 110001
ಈ ಮೇಲ್ ವಿಳಾಸ : sopimicar@nic.in 

SBI Recruitment 2022: ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ

click me!