ಉದ್ಯೋಗ ಭಾಗ್ಯ: ವಿವಿಧ ಹುದ್ದೆಗಳ ನೇಮಕಾತಿಗೆ ನಬಾರ್ಡ್ ಅರ್ಜಿ ಆಹ್ವಾನ

By Suvarna News  |  First Published Aug 8, 2020, 8:03 PM IST

ವಿವಿಧ ಹುದ್ದೆಗಳ ಭರ್ತಿಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನೇಮಕಾತಿ ಅಧಿಸೂಚನೆ ಹೊರಡಿಸಿದೆ.ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.


ನವದೆಹಲಿ, (ಆ.08): ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ಸ್ಪೆಷಲಿಸ್ಟ್ ಕನ್ಸಲ್ಟೆಂಟ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಪ್ಪ್ರಾಜೆಕ್ಟ್ ಮ್ಯಾನೇಜರ್-2,  ಸೀನಿಯರ್ ಅನಾಲಿಸ್ಟ್-2, ಅನಾಲಿಟಿಕ್ಸ್-ಕಮ್-ಚೀಫ್ ಡೇಟಾ ಕನ್ಸಲ್ಟೆಂಟ್ -1, ಸೈಬರ್ ಸೆಕ್ಯುರಿಟಿ ಮ್ಯಾನೇಜರ್ (ಸಿಎಸ್ಎಂ) -1,  ಅಡಿಷನಲ್ ಸೈಬರ್ ಸೆಕ್ಯುರಿಟಿ ಮ್ಯಾನೇಜರ್ (ಎಸಿಎಸ್ಎಂ)-1, ಅಡಿಷನಲ್ ಚೀಫ್ ರಿಸ್ಕ್ ಮ್ಯಾನೇಜರ್-2,  ರಿಸ್ಕ್ ಮ್ಯಾನೇಜರ್ -4 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Tap to resize

Latest Videos

undefined

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಹ  ಮತ್ತು  ಆಸಕ್ತ ಅಭ್ಯರ್ಥಿಗಳು ಅಧಿಕೃತ ಸೈಟ್ ಮೂಲಕ ಆಗಸ್ಟ್ 23, 2020ರೊಳಗೆ ಅರ್ಜಿ  ಸಲ್ಲಿಸಲು ಕೋರಲಾಗಿದೆ.

ಅಜಿ ಶುಲ್ಕ: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 50 ರೂ. ಇನ್ನುಳಿದಂತೆ ಎಲ್ಲಾ ಜಾತಿ ಅಭ್ಯರ್ಥಿಗಳಿಗೆ 800 ರೂ. ನಿಗದಿಪಡಿಸಲಾಗಿದೆ.

ವಯೋಮಿತಿ: ಅರ್ಜಿ ಸಲ್ಲಿಸಲು ಗರಿಷ್ಠ  62 ವಯೋಮಿತಿ.

ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ nabard.org ನೋಡಬಹುದು. 

click me!