800 ಕಾನ್ಸ್‌ ಸ್ಟೇಬಲ್, SI ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

By Suvarna News  |  First Published Jul 12, 2020, 10:10 PM IST

ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್‌ಪಿಎಫ್) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಗ್ರೂಪ್ ಬಿ ಮತ್ತು ಸಿ ವೃಂದದ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.


ನವದೆಹಲಿ, (ಜುಲೈ,12): ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್‌ಪಿಎಫ್) ವಿವಿಧ ಹುದ್ದೆಗಳ ನೇಮಕಾತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಜುಲೈ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿಸೆಂಬರ್ 21 ರಂದು ಲಿಖಿತ ಪರೀಕ್ಷೆ ನಡೆಯಲಿದೆ.

Latest Videos

undefined

ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶಗಳು: ಅರ್ಜಿ ಹಾಕಿ

ಸಬ್ ಇನ್ಸ್‌ಪೆಕ್ಟರ್ 175, ಸಹಾಯಕ ಸಬ್‌ಇನ್ಸ್ ಪೆಕ್ಟರ್ 84, ಕಾನ್ಸ್‌ಸ್ಟೇಬಲ್ 116, ಕಾನ್ಸ್ ಟೇಬಲ್(ಸಪಾಯಿ ಕರ್ಮಚಾರಿ) 121 ಸೇರಿದಂತೆ ಸುಮಾರು 800 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಯೋಮಿತಿ:
* ಸಬ್ ಇನ್ಸ್‌ಪೆಕ್ಟರ್: 30 ವರ್ಷ
* ಸಹಾಯಕ ಸಬ್‌ಇನ್ಸ್ ಪೆಕ್ಟರ್: 20 to 25 ವರ್ಷ
* Head Constable - 18 to 25 Years
* Head Constable (Junior X -ray Assistant/Laboratory Assistant/Electrician)- 20 to 25 Years
* Head Constable (Steward)and Constable-18 to 23 Years

ಜಾಬ್ಸ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಶುಲ್ಕ: ಗ್ರೂಪ್-ಬಿ ಹುದ್ದೆಗಳಿಗೆ 200 ರೂ., ಗ್ರೂಪ್-ಸಿ ಹುದ್ದೆಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳ ನಂತರ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಎಲ್ಲಾ ಸಂಬಂಧಿತ ದಾಖಲೆಗಳ ಜೆರಾಕ್ಸ್ ಪ್ರತಿ, ಇತ್ತೀಚಿನ ಭಾವಚಿತ್ರಗಳೊಂದಿಗೆ ಅರ್ಜಿಯನ್ನು 'ಡಿಐಜಿಪಿ, ಗ್ರೂಪ್ ಸೆಂಟರ್, ಸಿಆರ್ಪಿಎಫ್, ಭೋಪಾಲ್, ವಿಲೇಜ್-ಬಂಗ್ರೇಸಿಯಾ, ತಾಲ್ಲೂಕು-ಹುಜೂರ್, ಜಿಲ್ಲಾ-ಭೋಪಾಲ್, ಎಂ.ಪಿ.-462045' ಇಲ್ಲಿಗೆ ಕಳಿಸಬೇಕಿದೆ.

ಅರ್ಜಿ ಸಲ್ಲಿಕೆ ವಿಳಾಸ:
 DIGP, Group Centre, CRPF, Bhopal, Village-Bangrasia, Taluk-Huzoor, District-Bhopal, M.P.-462045

ಮುಖ್ಯ ದಿನಾಂಕಗಳು
* ಜುಲೈ  20ರಿಂದ ಅರ್ಜಿ ಅಲ್ಲಿಕೆ ಆರಂಭ 
* ಆಗಸ್ಟ್ 31 ಅರ್ಜಿ ಸಲ್ಲಿಕೆಗೆ ಕೊನೆ ದಿನ
* ಲಿಖಿತ ಪರೀಕ್ಷೆ ನಡೆಯುವ ದಿನಾಂಕ ಡಿಸೆಂಬರ್ 20 

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!