ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಹೈಕ್ ನಿರೀಕ್ಷೆ, ಜನವರಿ ಸಂಬಳದಲ್ಲೇ ಸಿಗುತ್ತಾ ಏರಿಕೆ ಸ್ಯಾಲರಿ ?

Published : Dec 23, 2025, 01:44 PM IST
8th Pay Commission

ಸಾರಾಂಶ

ಕೇಂದ್ರ ಸರ್ಕಾರಿ ನೌಕರರಿಗೆ 2026 ಖುಷಿ ನೀಡಲಿದೆ. 8ನೇ ವೇತನ ಆಯೋಗ ಜಾರಿಗೆ ಬರ್ತಿದೆ. ಆದ್ರೆ ವರ್ಷದ ಮೊದಲೇ ತಿಂಗಳಲ್ಲೇ ಹೆಚ್ಚವರಿ ಸಂಬಳ ಸಿಗುತ್ತಾ? ಈ ಪರಶ್ನೆಗೆ ಉತ್ತರ ಇಲ್ಲಿದೆ. 

ಹೊಸ ವರ್ಷ (new year), 2026 ಕೇಂದ್ರ ಸರ್ಕಾರಿ ನೌಕರ (Central Govt)ರು ಮತ್ತು ಪಿಂಚಣಿದಾರರಿಗೆ ವಿಶೇಷ ವರ್ಷ. 7ನೇ ವೇತನ ಆಯೋಗ ಡಿಸೆಂಬರ್ 31, 2025 ರಂದು ಕೊನೆಗೊಳ್ಳಲಿದೆ. ನಂತ್ರ 8ನೇ ವೇತನ ಆಯೋಗ ಜಾರಿಗೆ ಬರಲಿದೆ. ಸದ್ಯ ಎಲ್ಲರ ಗಮನ 8ನೇ ವೇತನ ಆಯೋಗದ ಮೇಲಿದೆ. 8ನೇ ವೇತನ ಆಯೋಗದ ಹಣ ಜನವರಿ 2026 ರ ಸಂಬಳದಿಂದಲೇ ಸಿಗುತ್ತಾ ಎನ್ನುವ ಪ್ರಶ್ನೆ ಬಹುತೇಕ ಎಲ್ಲರನ್ನು ಕಾಡ್ತಿದೆ.

ಎಂಟನೇ ವೇತನ ಆಯೋಗ ಯಾವಾಗ ಜಾರಿಗೆ?

ಭಾರತ ಸರ್ಕಾರ ಈಗಾಗಲೇ 8ನೇ ವೇತನ ಆಯೋಗಕ್ಕೆ ಸಂಬಂಧಿಸಿದ ಪ್ರಕ್ರಿಯೆ ಶುರು ಮಾಡಿದೆ. ಎಂಟನೇ ವೇತನ ಆಯೋಗದ ನಿಯಮಗಳು ಮತ್ತು ಷರತ್ತುಗಳಿಗೆ ಅಕ್ಟೋಬರ್ 2025 ರಲ್ಲಿ ಅನುಮೋದನೆ ಸಿಕ್ಕಿದೆ. ಆದ್ರೆ ಇನ್ನೂ ಅಂತಿಮ ವರದಿ ಸಿದ್ಧವಾಗಿಲ್ಲ. ಸದ್ಯ ವೇತನ ರಚನೆ, ಭತ್ಯೆಗಳು ಮತ್ತು ಪಿಂಚಣಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಆಯೋಗಕ್ಕೆ ಸುಮಾರು 18 ತಿಂಗಳುಗಳ ಸಮಯ ನೀಡಲಾಗಿದೆ. ಅಂದ್ರೆ ಅಂತಿಮ ವರದಿಗೆ ಸಮಯ ತೆಗೆದುಕೊಳ್ಳಲಿದೆ.

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ

ಹಿಂದಿನ ವೇತನ ಆಯೋಗಗಳಂತೆ, ಎಂಟನೇ ವೇತನ ಆಯೋಗದ ಅನುಷ್ಠಾನ ದಿನಾಂಕ ಜನವರಿ 1, 2026. ಆದ್ರೆ ಹೆಚ್ಚಾದ ಸಂಬಳ ಜನವರಿಯಿಂದಲೇ ಸರ್ಕಾರಿ ನೌಕರರ ಖಾತೆಗೆ ಬರುತ್ತೆ ಎಂಬುದು ಇದರ ಅರ್ಥವಲ್ಲ. ಸರ್ಕಾರದ ಅನುಮೋದನೆಯ ನಂತರ ಅನುಷ್ಠಾನ ದಿನಾಂಕ ಮತ್ತು ನಿಜವಾದ ಪಾವತಿಯ ನಡುವೆ ಸಮಯಸ ಅಂತರವಿರುತ್ತದೆ. ಹಾಗಾಗಿ ಜನವರಿ ಒಂದರಿಂದ ನೌಕರರಿಗೆ 8ನೇ ವೇತನ ಆಯೋಗದ ಸಂಬಳ ಸಿಗೋದಿಲ್ಲ.

ಸ್ಯಾಲರಿ ಎಷ್ಟು ಏರಿಕೆ ಆಗ್ಬಹುದು?

ಸರ್ಕಾರ, ನೌಕರರ ಸಂಬಳದಲ್ಲಿ ಎಷ್ಟು ಏರಿಕೆಯಾಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹಿಂದಿನ ದಾಖಲೆಗಳ ಮೇಲೆ ಸಂಬಳ ಏರಿಕೆಯನ್ನು ಅಂದಾಜು ಮಾಡಲಾಗ್ತಿದೆ. 6 ನೇ ವೇತನ ಆಯೋಗ ಸರಿಸುಮಾರು ಶೇಕಡಾ 40 ರಷ್ಟು ವೇತನ ಹೆಚ್ಚಳ ಮಾಡಿತ್ತು. 7 ನೇ ವೇತನ ಆಯೋಗದಲ್ಲಿ ಶೇಕಡಾ 23 ರಿಂದ ಶೇಕಡಾ 25 ರಷ್ಟು ವೇತನ ಹೆಚ್ಚಳವಾಗಿತ್ತು. ಇದರ ಆಧಾರದ ಮೇಲೆ, 8 ನೇ ವೇತನ ಆಯೋಗವು ಸುಮಾರು ಶೇಕಡಾ 20 ರಿಂದ ಶೇಕಡಾ 35ರಷ್ಟು ಸಂಬಳ ಹೆಚ್ಚಿಸುವ ನಿರೀಕ್ಷೆಯಿದೆ.

DRDO ನೇಮಕಾತಿ, ಬರೋಬ್ಬರಿ 764 ತಾಂತ್ರಿಕ ಸಹಾಯಕ, ತಂತ್ರಜ್ಞ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ

ಫಿಟ್ಮೆಂಟ್ ಅಂಶ ಏನಾಗಿರಬಹುದು?

7 ನೇ ವೇತನ ಆಯೋಗದ ಅಡಿಯಲ್ಲಿ ಫಿಟ್ಮೆಂಟ್ ಅಂಶ 2.57 ಆಗಿತ್ತು. 8 ನೇ ವೇತನ ಆಯೋಗದ ಫಿಟ್ಮೆಂಟ್ ಅಂಶ 2.4 ಮತ್ತು 3.0 ರ ನಡುವೆ ಇರಬಹುದು ಎಂದು ಅಂದಾಜಿಸಲಾಗ್ತಿದೆ. ಒಂದ್ವೇಳೆ ಫಿಟ್ ಮೆಂಟ್ ಅಂಶ ಹೆಚ್ಚಾದ್ರೆ ಮೂಲ ವೇತನವು ಗಮನಾರ್ಹವಾಗಿ ಹೆಚ್ಚಾಗಲಿದೆ. ಪ್ರಸ್ತುತ, ಕೇಂದ್ರ ಸರ್ಕಾರಿ ಉದ್ಯೋಗಿಯ ಕನಿಷ್ಠ ಮೂಲ ವೇತನ 18 ಸಾವಿರ ರೂಪಾಯಿ ಇದೆ. ಪ್ರಸ್ತಾವಿತ ಫಿಟ್ಮೆಂಟ್ ಅಂಶ ಶ್ರೇಣಿಯ ಆಧಾರದ ಮೇಲೆ, ಹೊಸ ಕನಿಷ್ಠ ಮೂಲ ವೇತನ 41 ಸಾವಿರ ಮತ್ತು 51,480 ರ ನಡುವೆ ಇರಬಹುದು ಎನ್ನಲಾಗ್ತಿದೆ. ಎಂಟನೇ ವೇತನ ಆಯೋಗದ ಪರಿಷ್ಕೃತ ವೇತನ ಜನವರಿ 2026 ರಲ್ಲಿ ನೀಡಲಾಗುವುದಿಲ್ಲ. ಇದನ್ನು ಜನವರಿಯಲ್ಲಿ ಜಾರಿಗೆ ತರಲಾಗುತ್ತದೆ. ಅನುಮೋದನೆಯ ನಂತರ ಬಾಕಿಗಳನ್ನು ಪಾವತಿಸಲಾಗುತ್ತದೆ.

PREV
Read more Articles on
click me!

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
DRDO ನೇಮಕಾತಿ, ಬರೋಬ್ಬರಿ 764 ತಾಂತ್ರಿಕ ಸಹಾಯಕ, ತಂತ್ರಜ್ಞ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ