Indian Navy Recruitment 2022: ನೌಕಾದಳದ SSC ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

By Suvarna News  |  First Published Feb 28, 2022, 2:29 PM IST

ಭಾರತೀಯ ನೌಕಾಸೇನೆ  ಖಾಲಿ ಇರುವ  155 SSC ಆಫೀಸರ್ ಹುದ್ದೆಗೆ  ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್​​ 12ರೊಳಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 


ಬೆಂಗಳೂರು(ಫೆ.28): ಭಾರತೀಯ ನೌಕಾಸೇನೆಯಲ್ಲಿ (Indian Navy) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ  ಅಧಿಸೂಚನೆ ಹೊರಡಿಲಾಗಿದೆ. ನೌಕಾಸೇನೆಯು ಖಾಲಿ ಇರುವ ಒಟ್ಟು 155 SSC ಆಫೀಸರ್ ಹುದ್ದೆಗೆ  ಅರ್ಜಿ ಆಹ್ವಾನಿಸಿದ್ದು,  ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಮಾರ್ಚ್​​ 12ರೊಳಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸಕ್ತರು  ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್​ಸೈಟ್ https://www.indiannavy.nic.in/ ಗೆ  ಅಥವಾ https://www.joinindiannavy.gov.in/en ಭೇಟಿ ನೀಡಲು ಕೋರಲಾಗಿದೆ.

ಕಾರ್ಯನಿರ್ವಾಹಕ ಶಾಖೆ, ಶೈಕ್ಷಣಿಕ ಶಾಖೆ ಮತ್ತು ತಾಂತ್ರಿಕ ಶಾಖೆ ಈ ಮೂರು ವಿಭಾಗಳಿಗೆ ಭಾರತೀಯ ನೌಕಾಸೇನೆಯು ಅರ್ಜಿ ಆಹ್ವಾನಿದ್ದು, 155 ಹುದ್ದೆಗಳ  ಮಾಹಿತಿ ಇಂತಿದೆ.

Latest Videos

undefined

ಕಾರ್ಯನಿರ್ವಾಹಕ ಶಾಖೆ (Executive Branch): ಇದರಲ್ಲಿ 93 ಹುದ್ದೆಗಳು ಖಾಲಿ ಇದೆ.
ಜನರಲ್ ಸರ್ವೀಸ್/ಹೈಡ್ರೋ ಕೇಡರ್- 40 ಹುದ್ದೆಗಳು
ನಾವಲ್ ಆರ್ಮಮೆಂಟ್ ಇನ್​​ಸ್ಪೆಕ್ಟೋರೇಟ್ ಕೇಡರ್-6 ಹುದ್ದೆಗಳು
ಏರ್ ಟ್ರಾಫಿಕ್ ಕಂಟ್ರೋಲರ್ - 6 ಹುದ್ದೆಗಳು
ಅಬ್​ಸರ್ವರ್ - 8 ಹುದ್ದೆಗಳು
ಪೈಲಟ್ - 15 ಹುದ್ದೆಗಳು
ಲಾಜಿಸ್ಟಿಕ್ಸ್​ - 18 ಹುದ್ದೆಗಳು 

ANGANWADI RECRUITMENT 2022: ಕೊಡಗು ಜಿಲ್ಲೆಯ 3 ತಾಲೂಕಿನ ವ್ಯಾಪ್ತಿಯ ಅಂಗನವಾಡಿ ಕೇಂದ್ರದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶೈಕ್ಷಣಿಕ ಶಾಖೆ (education branch): ಎಜುಕೇಷನ್ - 17 ಹುದ್ದೆಗಳು

ತಾಂತ್ರಿಕ ಶಾಖೆ (Technical Branch): ಇದರಲ್ಲಿ 45 ಹುದ್ದೆಗಳು ಖಾಲಿ ಇದೆ.
ಎಂಜಿನಿಯರಿಂಗ್ ಬ್ರಾಂಚ್ (ಜನರಲ್ ಸರ್ವೀಸ್) - 15
ಎಲೆಕ್ಟ್ರಿಕಲ್ ಬ್ರಾಂಚ್ (ಜನರಲ್ ಸರ್ವೀಸ್) - 30

ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ನೌಕಾಸೇನೆಯಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗೆ ಅನುಸಾರವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ವಿದ್ಯಾರ್ಹತೆ ಪೂರ್ಣಗೊಳಿಸರಬೇಕು.
ಜನರಲ್ ಸರ್ವೀಸ್/ಹೈಡ್ರೋ ಕೇಡರ್ ಹುದ್ದೆಗೆ  ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.
ನಾವಲ್ ಆರ್ಮಮೆಂಟ್ ಇನ್​​ಸ್ಪೆಕ್ಟೋರೇಟ್ ಕೇಡರ್ ಹುದ್ದೆಗೆ  ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.
ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆಗೆ  ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.
ಅಬ್​ಸರ್ವರ್ ಹುದ್ದೆಗೆ  ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.
ಪೈಲಟ್ ಹುದ್ದೆಗೆ  ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.
ಲಾಜಿಸ್ಟಿಕ್ಸ್​ ಹುದ್ದೆಗೆ  ಬಿ.ಟೆಕ್/ ಎಂಬಿಎ/ ಪಿಜಿ ಡಿಪ್ಲೋಮಾ/ ಎಂಸಿಎ/ ಎಂಎಸ್ಸಿ ಪಾಸಾಗಿರಬೇಕು.
ಎಜುಕೇಷನ್ ಹುದ್ದೆಗೆ ಎಂಎಸ್ಸಿ/ ಎಂಟೆಕ್/ ಬಿ.ಟೆಕ್ ಪಾಸಾಗಿರಬೇಕು.
ಎಂಜಿನಿಯರಿಂಗ್ ಬ್ರಾಂಚ್ (ಜನರಲ್ ಸರ್ವೀಸ್) ಹುದ್ದೆಗೆ  ಶೇ.60ರಷ್ಟು ಅಂಕಗಳೊಂದಿಗೆ ಬಿ.ಟೆಕ್ ಪಾಸಾಗಿರಬೇಕು.

BSNL Recruitment 2022: ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಬಿಎಸ್‌ಎನ್‌ಎಲ್‌

ಲಿಂಗಾನುಸಾರ ಹುದ್ದೆ ಹಂಚಿಕೆ: ಭಾರತೀಯ ನೌಕಾಸೇನೆಯಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಇಚ್ಚಿಸುವ ಅಭ್ಯರ್ಥಿಗಳಿಗೆ ಲಿಂಗಾನುಸಾರ ಹುದ್ದೆಯನ್ನು ಹಂಚಿಕೆ ಮಾಡಲಾಗಿದೆ.
ಜನರಲ್ ಸರ್ವೀಸ್/ಹೈಡ್ರೋ ಕೇಡರ್ ಹುದ್ದೆ ಪುರುಷ ಮಾತ್ರ.
ನಾವಲ್ ಆರ್ಮಮೆಂಟ್ ಇನ್​​ಸ್ಪೆಕ್ಟೋರೇಟ್ ಕೇಡರ್ ಹುದ್ದೆ ಪುರುಷ  ಮತ್ತು ಮಹಿಳೆಯರಿಗೆ
ಏರ್ ಟ್ರಾಫಿಕ್ ಕಂಟ್ರೋಲರ್ ಹುದ್ದೆ ಪುರುಷ  ಮತ್ತು  ಮಹಿಳೆಯರಿಗೆ
ಅಬ್​ಸರ್ವರ್ ಹುದ್ದೆ ಪುರುಷರಿಗೆ ಮಾತ್ರ
ಪೈಲಟ್ ಹುದ್ದೆ ಪುರುಷರಿಗೆ ಮಾತ್ರ
ಲಾಜಿಸ್ಟಿಕ್ಸ್​ ಹುದ್ದೆ ಪುರುಷರಿಗೆ ಮಾತ್ರ
ಎಜುಕೇಷನ್  ಹುದ್ದೆ ಪುರುಷ  ಮತ್ತು ಮಹಿಳೆಯರಿಗೆ
ಎಂಜಿನಿಯರಿಂಗ್ ಬ್ರಾಂಚ್(ಜನರಲ್ ಸರ್ವೀಸ್) ಪುರುಷರಿಗೆ ಮಾತ್ರ

ವಯೋಮಿತಿ: ಭಾರತೀಯ ನೌಕಾಸೇನೆಯಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಇಚ್ಚಿಸುವ ಅಭ್ಯರ್ಥಿಗಳು ಹುದ್ದೆಗನುಸಾರವಾಗಿ ಜನವರಿ 1998 ರಿಂದ  ಜುಲೈ 2004 ರೊಳಗೆ ಜನಿಸಿರಬೇಕು.

ಆಯ್ಕೆ ಪ್ರಕ್ರಿಯೆ: ಭಾರತೀಯ ನೌಕಾಸೇನೆಯಲ್ಲಿ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು  SSB ಸಂದರ್ಶನ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
 

click me!