ಭಾರತೀಯ ನೌಕಾಪಡೆಯು SSR ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಏಪ್ರಿಲ್ 10 ರೊಳಗೆ ಅರ್ಜಿ ಸಲ್ಲಿಸಬಹುದು.
ಎಸ್‌ಎಸ್‌ಆರ್ ವೈದ್ಯಕೀಯ ಸಹಾಯಕ ಹುದ್ದೆಗೆ ಅಧಿಸೂಚನೆಯನ್ನು ಭಾರತೀಯ ನೌಕಾಪಡೆ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಷ್ಟು ಉದ್ಯೋಗಗಳು, ಅರ್ಜಿ ಶುಲ್ಕ, ವೇತನ ಶ್ರೇಣಿ ಸೇರಿ ಎಲ್ಲ ಮಾಹಿತಿ ಇಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಕೆಯು ಇಂದಿನಿಂದ ಆರಂಭವಾಗಿದೆ.
ನೌಕಾಪಡೆಯು ಎಸ್‌ಎಸ್‌ಆರ್ ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳ ಭರ್ತಿ ಮಾಡುತ್ತಿದೆ. ಇವುಗಳಿಗೆ ಅರ್ಹ ಮತ್ತು ಆಸಕ್ತರು ಈ ಕೆಲಸಗಳ ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಎತ್ತರ ಕನಿಷ್ಠ 157 ಸೆ.ಮೀ. ಇರಲೇಬೇಕು. ಕೊನೆ ದಿನಾಂಕದ ಮಾಹಿತಿ ಸೇರಿ ಹುದ್ದೆಗಳ ವಿವರವಾದ ಮಾಹಿತಿ ನೀಡಲಾಗಿದೆ.
ನೇಮಕಾತಿ ಮಾಡಿಕೊಂಡ ಒಂದೇ ವರ್ಷಕ್ಕೆ 600 ಉದ್ಯೋಗಿಗಳು ವಜಾ, ಟಿಶ್ಯೂ ರೀತಿ ಬಳಸಿಕೊಂಡಿತಾ ಝೊಮೆಟೊ!
ಹುದ್ದೆ ಹೆಸರು-
ಎಸ್‌ಎಸ್‌ಆರ್ ಮೆಡಿಕಲ್ ಅಸಿಸ್ಟೆಂಟ್
ಎಷ್ಟು ಉದ್ಯೋಗಗಳು- ಮಾಹಿತಿ ನೀಡಿಲ್ಲ
ವಿದ್ಯಾರ್ಹತೆ-
ದ್ವಿತೀಯ ಪಿಯುಸಿ (ಪಿಯುಸಿ ಅಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಬಯೋಲಜಿ ವಿಷಯಗಳಲ್ಲಿ, ಶೇಕಡ 50 ರಷ್ಟು ಅಂಕಗಳೊಂದಿಗೆ ಪಾಸ್)
ವೇತನ ಶ್ರೇಣಿ-
ತರಬೇತಿಯಲ್ಲಿ 14,600 ರೂಪಾಯಿ
ತರಬೇತಿ ನಂತರ- 21,700 ದಿಂದ 68,100 ರೂಪಾಯಿ
ಅರ್ಜಿ ಶುಲ್ಕ- 550 ರೂಪಾಯಿ ಇದೆ
ವಯೋಮಿತಿ-
17.5 ವರ್ಷಗಳಿಂದ 23 ವರ್ಷಗಳು
ಆಯ್ಕೆ ಪ್ರಕ್ರಿಯೆ-
ಶಾರ್ಟ್ ಲಿಸ್ಟ್
ಫಿಸಿಕಲ್ ಫಿಟ್‌ನೆಸ್ ಟೆಸ್ಟ್,
ಲಿಖಿತ ಪರೀಕ್ಷೆ,
ವೈದ್ಯಕೀಯ ಪರೀಕ್ಷೆ
ಟಾರ್ಗೆಟ್ ರೀಚ್ ಮಾಡಿದ ಸಿಬ್ಬಂದಿಗೆ ಕಾರು, ಮೊಬೈಲ್, ಚಿನ್ನದ ಗಿಫ್ಟ್ !
ಉದ್ಯೋಕ್ಕೆ ಸಂಬಂಧಿಸಿದ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- 29 ಮಾರ್ಚ್
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 10 ಏಪ್ರಿಲ್
ಮಾಹಿತಿಗಾಗಿ- https://www.joinindiannavy.gov.in/en/page/ssr-medical-asst.html
ಉದ್ಯೋಗದ ಸಂಪೂರ್ಣ ಮಾಹಿತಿ-
https://www.joinindiannavy.gov.in/files/SSR_Med_English.pdf