Latest Videos

ಪೋಸ್ಟ್ ಆಫೀಸ್‌ನಲ್ಲಿ 1 ಲಕ್ಷ ಉದ್ಯೋಗ ನೇಮಕಾತಿಗೆ ಅಧಿಸೂಚನೆ, ಇಲ್ಲಿದೆ ಅರ್ಜಿ ಸಲ್ಲಿಸುವ ವಿವರ!

By Suvarna NewsFirst Published Aug 16, 2022, 9:32 PM IST
Highlights

ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ ತೆರೆದುಕೊಂಡಿದೆ. ಬರೋಬ್ಬರಿ 1 ಲಕ್ಷ ಹುದ್ದೆಗಳು ಖಾಲಿ ಆಗಿದ್ದು, ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.
 

ನವದೆಹಲಿ(ಆ.16):  ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಅಂಚೆ ಇಲಾಖೆಯಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿಯಾಗಿದೆ. ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸಿದ್ದು, 23 ವಿಭಾಗಗಳಲ್ಲಿ ಒಟ್ಟು 1 ಲಕ್ಷಕ್ಕೂ ಹೆಚ್ಚು ಉದ್ಯೋಗವಕಾಶಗಳು ತೆರೆದುಕೊಂಡಿದೆ. ದೇಶಾದ್ಯಂತ ಅಂಚೆ ಇಲಾಖೆಯಲ್ಲಿ 59,099 ಪೋಸ್ಟ್‌ಮನ್ ಹುದ್ದೆಯಾಗಿದ್ದರೆ, 1445 ಮೈಲ್ ಗಾರ್ಡ್, 37,539 ಮಲ್ಟಿ ಟಾಸ್ಕ್ ಫೋರ್ಸ್ ಹುದ್ದೆಗಳಾಗಿವೆ. ಕರ್ನಾಟಕದಲ್ಲಿ 3887 ಪೋಸ್ಟ್‌ಮನ್ ಹುದ್ದೆ, 90 ಮೈಲ್‌ಗಾರ್ಡ್ ಹಾಗೂ 1754 ಎಂಟಿಎಸ್ ಹುದ್ದೆಗಳು ಖಾಲಿಯಾಗಿವೆ. ಪೋಸ್ಟ್ ಆಫೀಸ್‌ನಲ್ಲಿರುವ ಖಾಲಿ ಹುದ್ದೆಗೆ ಅರ್ಜಿ ಸಲ್ಲಸುವ ಆಸಕ್ತರು ಕೆಲ ಮಾನದಂಡಗಳನ್ನು ಹೊಂದಿರಬೇಕು

ಮಾನದಂಡ
ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10 ತರಗತಿ ಪಾಸ್ ಆಗಿರಬೇಕು. ಕೆಲ ಹುದ್ದೆಗಳಿಗೆ 12ನೇ ತರಗತಿ ಪಾಸ್ ಆಗಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅಂಚೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು. ಇನ್ನು 32 ವರ್ಷ ವಯಸ್ಸು ಮೀರಿರಬಾರದು. 

UIDAI BENGALURU RECRUITMENT 2022: ಬೆಂಗಳೂರಿನ ಆಧಾರ್​ ಕೇಂದ್ರದಲ್ಲಿ ಉದ್ಯೋಗವಕಾಶ

ಇಂಡಿಯಾ ಪೋಸ್ಟ್ ನೇಮಕಾತಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ಹೇಗೆ?

ಮೊದಲ ಹಂತ,  ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ತೆರಳಿ (indiapost.gov.in)

ಎರಡನೇ ಹಂತ, ವೆಸ್‌ಸೈಟ್‌ನ ಮೊದಲ ಪೇಜ್‌ನಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಬೇಕು

ಮೂರನೇ ಹಂತ, ಅಭ್ಯರ್ಥಿಗಳು ಅಂಚ ಇಲಾಖೆಯ ಯಾವ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚೀಸುತ್ತೀರಾ ಅನ್ನೋದನ್ನು ನಿರ್ಧರಿಸಿ, ಆಯ್ಕೆ ಮಾಡಬೇಕು

ನಾಲ್ಕನೇ ಹಂತ, ನೋಂದಾವಣೆ ಮಾಡಿಕೊಂಡು, ಮಾನದಂಡಗಳನ್ನು ಓದಿಕೊಳ್ಳಿ

ಐದನೇ ಹಂತ,  ಸೂಕ್ತ ಮಾಹಿತಿಗಳನ್ನು ತುಂಬಬೇಕು, ನೀಡಿರುವ ಅರ್ಜಿ ಭರ್ತಿ ಮಾಡಿ( ಮಾನದಂಡಗಳ ಕುರಿತು ಓದಿಕೊಳ್ಳಿ)

ಆರನೇ ಹಂತ, ಆಯಾ ಹುದ್ದೆಗಳ ಅರ್ಜಿ ಸಲ್ಲಿಕಿಗೆ ಬೇರೆ ಬೇರೆ ಶುಲ್ಕ ವಿಧಿಸಾಗಿದೆ. ಶುಲ್ಕ ಪಾವತಿಸಿ ಸಬ್‌ಮಿಟ್ ಮಾಡಿ

ಎಳನೇ ಹಂತ,  ನಿಮ್ಮ ಅರ್ಜಿ ಯಶಸ್ವಿಯಾದ ಬಳಿಕ, ರಿಸೆಪ್ಟ್ ಡೌನ್ಲೋಡ್ ಮಾಡಿ

ಸ್ವೀಕೃತ ಫಾರ್ಮ್ ಮುಂದಿನ ಎಲ್ಲಾ ವಿಚಾರಣೆಗೆ ಅಗತ್ಯವಾಗಿದೆ. ಹೀಗಾಗಿ ಸೇವ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ತೆಗೆದುಕೊಳ್ಳುವುದು ಉಚಿತವಾಗಿದೆ.

930 ವಿವಿಧ ಹುದ್ದೆಗಳ ನೇಮಕಾತಿ:ಸಂದರ್ಶನಕ್ಕೆ ಆಹ್ವಾನಿಸಿದ BBMP

 1.5 ಲಕ್ಷ ಅಂಚೆ ಕಚೇರಿಗೆ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆ
ದೇಶದಲ್ಲಿರುವ ಎಲ್ಲಾ 1.5 ಲಕ್ಷ ಅಂಚೆ ಕಚೇರಿಗಳನ್ನು ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವರ್ಷವೇ, ಅಂದರೆ 2022ರಲ್ಲೇ, ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಅಂಚೆ ಕಚೇರಿಗಳು ಬ್ಯಾಂಕುಗಳ ಜೊತೆ ಆಂತರಿಕ ಸಂಪರ್ಕ ಪಡೆಯಲಿವೆ. ಆಗ ಜನರು ಅಂಚೆ ಕಚೇರಿಯಿಂದ ಬ್ಯಾಂಕುಗಳಿಗೆ ಮತ್ತು ಬ್ಯಾಂಕುಗಳಿಂದ ಅಂಚೆ ಕಚೇರಿಗಳಿಗೆ ಹಣ ವರ್ಗಾಯಿಸುವುದು, ಅಂಚೆ ಕಚೇರಿಯ ಖಾತೆಗಳನ್ನು ಆನ್‌ಲೈನ್‌ ಮೂಲಕ ನಿರ್ವಹಣೆ ಮಾಡುವುದು ಸಾಧ್ಯವಾಗಲಿದೆ. ಸದ್ಯ ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಹಾಗೂ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ಖಾತೆ ಹೊಂದಿರುವವರು ಆ ಖಾತೆಗಳ ನಡುವೆ ಮಾತ್ರ ಆನ್‌ಲೈನ್‌ನಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಹಣ ವರ್ಗಾವಣೆ ಮಾಡಬಹುದು. ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯಡಿ ಅಂಚೆ ಕಚೇರಿಗಳನ್ನು ತಂದ ಮೇಲೆ ದೇಶದಲ್ಲಿರುವ ಎಲ್ಲಾ ವಾಣಿಜ್ಯ ಬ್ಯಾಂಕುಗಳ ಜೊತೆಗೂ ಅಂಚೆ ಕಚೇರಿಗಳಿಗೆ ಆಂತರಿಕ ಹಣ ವರ್ಗಾವಣೆ ಸೌಲಭ್ಯ ಲಭಿಸಲಿದೆ.

click me!