ಅಂಚೆ ಇಲಾಖೆಯಲ್ಲಿ 3,679 ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna NewsFirst Published Feb 16, 2021, 7:28 PM IST
Highlights

 ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವವರಿಗೆ ಒಳ್ಳೆ ಅವಕಾಶ ಒದಗಿಬಂದಿದೆ . ಒಟ್ಟೂ 3,679 ಹುದ್ದೆಗಳಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

ನವದೆಹಲಿ, (ಫೆ.16): ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ 3,679 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಂಧ್ರಪ್ರದೇಶದಲ್ಲಿ 2,296 ಹುದ್ದೆ, ತೆಲಂಗಾಣದಲ್ಲಿ 1,150, ದೆಹಲಿಯಲ್ಲಿ 233 ಹಾಗೂ ಮುಂಬೈನಲ್ಲಿ 12 ಗ್ರಾಮೀಣ ಡಾಕ್‌ ಸೇವಕ್‌ (ಜಿಡಿಎಸ್‌)  ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ: ಕನಿಷ್ಠ 10 ಮತ್ತು 12ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.

ವಯೋಮಿತಿ: 2021ರ ಜನವರಿ 27ಕ್ಕೆ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ವಯಸ್ಸಾಇರಬೇಕು. OBCಗೆ 3 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗರ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ವೇತನ ಶ್ರೇಣಿ: ತಿಂಗಳಿಗೆ 10 ಸಾವಿರದಿಂದ 14,500 ರೂಪಾಯಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ: 100 ರೂಪಾಯಿ ಶುಲ್ಕವನ್ನು ಆನ್‌ಮೂಲಕ ಪಾವತಿ ಮಾಡಬೇಕು. ಮಹಿಳೆಯರು ಮತ್ತು ಅಂಗವಿಕಲರಿಗೆ ಯಾವುದೇ ಶುಲ್ಕ ಇಲ್ಲ.

ಕೊನೆಯ ದಿನಾಂಕ: ಫೆಬ್ರುವರಿ 26

ಅರ್ಜಿ ಸಲ್ಲಿಕೆ: ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

click me!