CGA Recruitment 2022: 590 ಸಹಾಯಕ ಖಾತೆ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

By Suvarna News  |  First Published Feb 10, 2022, 6:56 PM IST

ಕಂಟ್ರೋಲರ್ ಆಫ್​ ಜನರಲ್ ಅಕೌಂಟ್ಸ್  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು  ಅಧಿಸೂಚನೆ ಹೊರಡಿಸಿದೆ.  ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆ ಬಿಡುಗಡೆಯಾದ 45 ದಿನಗಳೊಳಗೆ  ಆಫ್ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.


ನವದೆಹಲಿ: ಕಂಟ್ರೋಲರ್ ಆಫ್​ ಜನರಲ್ ಅಕೌಂಟ್ಸ್ (Controller General of Accounts)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು  ಅಧಿಸೂಚನೆ ಹೊರಡಿಸಿದೆ.  ಒಟ್ಟು 590 ಸಹಾಯಕ ಖಾತೆ ಅಧಿಕಾರಿ (Assistant Accounts Officer) ಹುದ್ದೆಗಳು ಖಾಲಿ ಇದ್ದು,  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.  ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆ ಬಿಡುಗಡೆಯಾದ 45 ದಿನಗಳೊಳಗೆ  ಆಫ್ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ನೇಮಕಾತಿ ಅಧಿಸೂಚನೆಯನ್ನು ಜನವರಿ 22 ರಿಂದ ಜನವರಿ 28ರವರೆಗೆ ಬಿಡುಗಡೆ ಮಾಡಿದೆ. 45 ದಿನಗಳ ಲೆಕ್ಕಾಚಾರ ಪ್ರಕಾರ ಮಾರ್ಚ್ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ.  ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ https://cga.nic.in/ ಗೆ ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಕಂಟ್ರೋಲರ್ ಆಫ್​ ಜನರಲ್ ಅಕೌಂಟ್ಸ್​  ನಲ್ಲಿ ಖಾಲಿ ಇರುವ ಸಹಾಯಕ ಖಾತೆ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಸಿವಿಲ್​/SAS ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 

Tap to resize

Latest Videos

undefined

ವಯೋಮಿತಿ: ಕಂಟ್ರೋಲರ್ ಆಫ್​ ಜನರಲ್ ಅಕೌಂಟ್ಸ್​  ನಲ್ಲಿ ಖಾಲಿ ಇರುವ ಸಹಾಯಕ ಖಾತೆ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಯಸ್ಸು  56 ವರ್ಷ ಮೀರಿರಬಾರದು. ಎಸ್​ಸಿ/ಎಸ್​ಟಿ, ಒಬಿಸಿ ಅಭ್ಯರ್ಥಿಗಳಿಗೆ   ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ.

KARNATAKA KHADI RECRUITMENT EXAM: ಮಾ.12ಕ್ಕೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸ್ಪರ್ಧಾತ್ಮಕ ಪರೀಕ್ಷೆ

ವೇತನ: ಕಂಟ್ರೋಲರ್ ಆಫ್​ ಜನರಲ್ ಅಕೌಂಟ್ಸ್​  ನಲ್ಲಿ ಖಾಲಿ ಇರುವ ಸಹಾಯಕ ಖಾತೆ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 7ನೇ ವೇತನ ಆಯೋಗದ 8/9ನೇ ಲೆವೆಲ್ ವೇತನ ದೊರೆಯಲಿದೆ.

ಆಯ್ಕೆ ಪ್ರಕ್ರಿಯೆ: ಕಂಟ್ರೋಲರ್ ಆಫ್​ ಜನರಲ್ ಅಕೌಂಟ್ಸ್​  ನಲ್ಲಿ ಖಾಲಿ ಇರುವ ಸಹಾಯಕ ಖಾತೆ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ: ಅಭ್ಯರ್ಥಿಗಳು ಅಂಚೆ ಅಥವಾ, ಈ-ಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಸೀನಿಯರ್ ಅಕೌಂಟ್ಸ್ ಆಫೀಸರ್ (HR-3)
O/o ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್
ಎಕ್ಸ್​ಪೆಂಡಿಚರ್ ಡಿಪಾರ್ಟ್​​ಮೆಂಟ್
ಹಣಕಾಸು ಸಚಿವಾಲಯ
ಕೊಠಡಿ ಸಂಖ್ಯೆ. 210, 2 ನೇ ಮಹಡಿ
ಮಹಾಲೇಖಾ ನಿಯಂತ್ರಕ್ ಭವನ, ಬ್ಲಾಕ್ E
GPO ಕಾಂಪ್ಲೆಕ್ಸ್, INA
ದೆಹಲಿ - 110023.

BDA Recruitment 2022: ಕಾನೂನು ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಡಿಎ

ಮಾ.12ಕ್ಕೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸ್ಪರ್ಧಾತ್ಮಕ ಪರೀಕ್ಷೆ: ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ (karnataka state khadi and village industries board) ಖಾಲಿ ಇರುವ  ವಿವಿಧ  ಒಟ್ಟು 29 ಹುದ್ದೆಗಳಿಗೆ  ಪಿಯು, ಪದವಿ ಪಾಸಾದ ಅಭ್ಯರ್ಥಿಗಳಿಂದ 2021 ರ ಅಂತ್ಯದಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು.  ಇದೀಗ ಈ ಹುದ್ದೆಗಳ ಆಯ್ಕೆಗಾಗಿ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ ನಿಗದಿಪಡಿಸಿರುವುದನ್ನು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (khadi and village industries board) ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ https://khadi.karnataka.gov.in/ ಗೆ ಭೇಟಿ ನೀಡಲು ಕೋರಲಾಗಿದೆ.

ಖಾಲಿ ಇರುವ ಹುದ್ದೆಗಳನ್ನು ಉಳಿಕ ಮೂಲ ವೃಂದದ ಹುದ್ದೆ ಗ್ರೂಪ್ -ಸಿ 14, ಹೈದರಾಬಾದ್ ಕರ್ನಾಟಕ ಸ್ಥಳೀಯ ವೃಂದದ ಗ್ರೂಪ್-ಬಿ ಹುದ್ದೆ 2 ಹಾಗೂ ಗ್ರೂಪ್-ಸಿ 13 ಹುದ್ದೆಗಳು ಸೇರಿ 29 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ (online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಗ್ರೂಪ್-ಬಿ ಹುದ್ದೆಗೆ ದಿನಾಂಕ ಮಾರ್ಚ್ 12, 2022ರಂದು ಬೆಳಿಗ್ಗೆ 9 ಗಂಟೆಯಿಂದ 11.15ರವರೆಗೆ ಹಾಗೂ ಗ್ರೂಪ್-ಸಿ ಹುದ್ದೆಗಳಿಗೆ ಅದೇ ದಿನ ಮಧ್ಯಾಹ್ನ 3 ಗಂಟೆಯಿಂದ 5.15ರವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ಗೆ ಭೇಟಿ ನೀಡಲು ಮನವಿ ಮಾಡಿಕೊಂಡಿದೆ.

click me!