ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಚ್‍ಎಲ್‍ಎಲ್ ಲೈಫ್‌ಕೇರ್ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಬೆಂಗಳೂರು, (ಡಿ.11): ಬೆಳಗಾವಿ ಜಿಲ್ಲೆಯಲ್ಲಿರುವ ಎಚ್‍ಎಲ್‍ಎಲ್‍ನ ಶಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಎಚ್‍ಎಲ್‍ಎಲ್ ಪ್ರಸ್ತುತ ಸ್ಥಿರ ಒಪ್ಪಂದ, ತರಬೇತಿ ಮತ್ತು ಅಭಿವೃದ್ಧಿ ಸ್ಕೀಮ್ ಹಾಗೂ ಅಪ್ರೆಂಟೀಸ್‍ಷಿಪ್ ಕಾನೂನು ಅನ್ವಯ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ 24.12.2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
undefined
ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ವಿವರ
1. ಸ್ಥಿರ ಅವಧಿಯ ಒಪ್ಪಂದದಡಿ
* ಎಕ್ಸಿಕ್ಯೂಟೀವ್ ಅಥವಾ ಡೆಪ್ಯುಟಿ ಮ್ಯಾನೇಜರ್ (ಫಾರ್ಮುಲೇಷನ್ ಆಯಂಡ್ ಡೆವೆಲಪ್ಮೆಂಟ್, ರೆಗ್ಯುಲೇಟರಿ ಅಫೇರ್ಸ್, ಮೆಕ್ಯಾನಿಕಲ್) -
* ಕಮರ್ಷಿಯಲ್ ಅಸಿಸ್ಟೆಂಟ್ - 1
2. ತರಬೇತಿ ಮತ್ತು ಅಭಿವೃದ್ಧಿ ಸ್ಕೀಮ್ ಅಡಿಯಲ್ಲಿ
* ಫಾರ್ಮಾಸಿಸ್ಟ್ ಟ್ರೇನಿ - 1
* ಗ್ರಾಜುಯೇಟ್ ಟ್ರೇನಿ - 1
* ಐಟಿಐ ಟ್ರೇನಿ- 1
* ಎಸ್ಸೆಸ್ಸೆಲ್ಸಿ ಟ್ರೇನಿ - 1
3. ಅಪ್ರೆಂಟೀಸ್‍ಷಿಪ್ ಟ್ರೇನಿ
* ಗ್ರಾಜುಯೇಟ್ ಇಂಜಿನಿಯರಿಂಗ್ ಅಪ್ರೆಂಟೀಸ್‍ಷಿಪ್ ಟ್ರೈನಿ - 2
* ಡಿಪ್ಲೋಮಾ ಅಪ್ರೆಂಟೀಸ್‍ಷಿಪ್ ಟ್ರೇನಿ - 2
* ಟ್ರೇಡ್ ಅಪ್ರೆಂಟೀಸ್‍ಷಿಪ್ ಟ್ರೇನಿ - 12
ವಿದ್ಯಾರ್ಹತೆ: SSLC, ಡಿಪ್ಲೋಮಾ, ಐಟಿಐ (ಫಿಟ್ಟರ್/ಎಲೆಕ್ಟ್ರಿಷಿಯನ್), ಮೆಕ್ಯಾನಿಕಲ್ ಇಂಜಿನಿಯರಿಂಗ್, ಬಿಇ (ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ), ಬಿ.ಕಾಂ., ಬಿಎಸ್ಸಿ (ಕೆಮಿಸ್ಟ್ರಿ), ಎಂ.ಫಾರ್ಮ್.
ವಯೋಮಿತಿ: ಹುದ್ದೆಗೆ ಅನುಗುಣವಾಗಿ ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ.
ವೇತನ ಹಾಗೂ ಸ್ಟೈಪೆಂಡ್: ಟ್ರೇನಿಗಳ ವಿಭಾಗಕ್ಕೆ ಅನುಗುಣವಾಗಿ ಮಾಸಿಕ 7,500 ರೂ.ನಿಂದ 12,000 ರೂ. ವರೆಗೆ ಸ್ಟೈಪೆಂಡ್ ಇದೆ. ಉಳಿದ ಹುದ್ದೆಗಳಿಗೆ ಅನುಗುಣವಾಗಿ 10,000 ರೂನಿಂದ 40,000 ರೂ. ವೇತನ ಜತೆಗೆ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ: ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಅಥವಾ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನ ವೇಳೆಯಲ್ಲಿ ಅಭ್ಯರ್ಥಿಗಳು ಹಿಂದಿಯಲ್ಲಿ ಉತ್ತರಿಸಲು ಸಿದ್ಧರಿರಬೇಕು.
ಅರ್ಜಿ ಸಲ್ಲಿಕೆ ವಿಳಾಸ: GENERAL MANAGER (OPERATIONS) AND UNIT CHIEF, HLL LIFECARE LIMITED, KANAGALA - 591 225., HUKKERI (TALUKA), BELAGAVI (DISTRICT). KARNATAKA (STATE).
ಅಧಿಸೂಚನೆಗೆ ಈ ಲಿಂಕ್ ಕ್ಲಿಕ್ ಮಾಡಿ: https://bit.ly/3lWKaUH, ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ : http://www.lifecarehll.com