ಭಾರತೀಯ ಕರಾವಳಿ ಭದ್ರತಾಪಡೆ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಒಟ್ಟು 11 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್14 ಕೊನೆಯ ದಿನಾಂಕವಾಗಿದೆ.
ಬೆಂಗಳೂರು(ಮಾ.3): ಭಾರತೀಯ ಕರಾವಳಿ ಭದ್ರತಾಪಡೆ (Indian Coast Guard - ICG) ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಸ್ಟೋರ್ಸ್ ಫೋರ್‌ಮ್ಯಾನ್, ಜನರಲ್ ಸೆಂಟ್ರಲ್ ಸರ್ವಿಸ್ ಸೇರಿ ಗ್ರೂಪ್ ‘ಬಿ’ ವಿಭಾಗಕ್ಕೆ ಒಟ್ಟು 11 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್14 ಕೊನೆಯ ದಿನಾಂಕವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ joinindiancoastguard.gov.in ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 11 ಹುದ್ದೆಗಳ ವರ್ಗಾನುಸಾರ ಹಂಚಿಕೆ ಹೀಗಿದೆ:
UR - 3
EWS - 1
OBC - 3
SC - 3
ST - 1
undefined
ಶೈಕ್ಷಣಿಕ ವಿದ್ಯಾರ್ಹತೆ: ಭಾರತೀಯ ಕರಾವಳಿ ಭದ್ರತಾಪಡೆಯಲ್ಲಿ ಖಾಲಿ ಇರುವ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗೆ ಅನುಗುಣವಾಗಿ ಸ್ನಾತಕೋತ್ತರ ಪದವಿ ಅಥವಾ ಅರ್ಥಶಾಸ್ತ್ರ, ವಾಣಿಜ್ಯ, ವೃತ್ತಿಪರ ಅಧ್ಯಯನಗಳು, ಸಾರ್ವಜನಿಕ ಆಡಳಿತ ವಿಷಯ ಅಥವಾ ಮಾನ್ಯತೆ ಪಡೆದ ಡಿಪ್ಲೊಮಾ ಇನ್ ಮೆಟೀರಿಯಲ್ ಮ್ಯಾನೇಜ್ಮೆಂಟ್ ಕಲಿತಿರಬೇಕು.
KARNATAKA BANK RECRUITMENT 2022: ಮುಖ್ಯ ಹಣಕಾಸು ಅಧಿಕಾರಿ ಹುದ್ದೆಗೆ ಕರ್ನಾಟಕ ಬ್ಯಾಂಕ್ ನೇಮಕಾತಿ
ವಯೋಮಿತಿ: ಭಾರತೀಯ ಕರಾವಳಿ ಭದ್ರತಾಪಡೆಯಲ್ಲಿ ಖಾಲಿ ಇರುವ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 30 ವರ್ಷವಾಗಿರಬೇಕು.
ವೇತನ: ಭಾರತೀಯ ಕರಾವಳಿ ಭದ್ರತಾಪಡೆಯಲ್ಲಿ ಖಾಲಿ ಇರುವ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 35,400 ರೂ. ನಿಂದ 1,12,400 ರೂ.ವರೆಗೆ ವೇತನ ದೊರೆಯಲಿದೆ.
ಆಯ್ಕೆ ಪ್ರಕ್ರಿಯೆ: ಭಾರತೀಯ ಕರಾವಳಿ ಭದ್ರತಾಪಡೆಯಲ್ಲಿ ಖಾಲಿ ಇರುವ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆ, ಅರ್ಜಿ ಪರಿಶೀಲನೆ, ಮೂಲಕ ಆಯ್ಕೆ ಮಾಡಲಾಗುತ್ತದೆ.
Western Naval Command Recruitment 2022: ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಮುಂದಾದ WNC
ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಮುಂದಾದ WNC:
ಭಾರತೀಯ ನೌಕಾಸೇನೆಯ (indian navy) ವೆಸ್ಟರ್ನ್ ನೇವಲ್ ಕಮಾಂಡ್ (Western Naval Command ) ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಗ್ರೂಪ್ ಸಿ ವಿಭಾಗದ ಫಾರ್ಮಸಿಸ್ಟ್, ಫೈರ್‌ಮ್ಯಾನ್ ಸೇರಿ ಒಟ್ಟು 127 ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇಚ್ಚಿಸುವವರು ಏಪ್ರಿಲ್ 26ರ ಒಳಗೆ ಆಫ್ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು indiannavy.nic.in ವೆಬ್‌ತಾಣದಿಂದ ಡೌನ್ಲೋಡ್ ಮಾಡಿಕೊಳ್ಳಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಒಟ್ಟು 127 ಹುದ್ದೆಗಳ ಮಾಹಿತಿ ಇಂತಿದೆ.
ಫಾರ್ಮಸಿಸ್ಟ್ : 1 ಹುದ್ದೆಗಳು
ಫೈರ್‌ಮ್ಯಾನ್ : 120 ಹುದ್ದೆಗಳು
ಪೆಸ್ಟ್ ಕಂಟ್ರೋಲ್ ವರ್ಕರ್ : 6 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ: ವೆಸ್ಟರ್ನ್ ನೇವಲ್ ಕಮಾಂಡ್ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ ಎಸ್ಎಸ್ಎಲ್ಸಿ ಅಥವಾ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ವೆಸ್ಟರ್ನ್ ನೇವಲ್ ಕಮಾಂಡ್ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಗರಿಷ್ಠ 56 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಫ್ಲಾಗ್ ಆಫೀಸರ್
ಕಮಾಂಡಿಂಗ್-ಇನ್-ಚೀಫ್,
ಪ್ರಧಾನ ಕಛೇರಿ
ಪಶ್ಚಿಮ ನೌಕಾ ಕಮಾಂಡ್,
ಬಲ್ಲಾಡ್ ಪಿಯರ್,ಟೈಗರ್ ಗೇಟ್ ಹತ್ತಿರ
ಮುಂಬೈ 400001