ಕೊರೋನಾ ಭೀತಿ ಇರೋ ಟೈಮಲ್ಲಿ ವರ್ಕ್ ಫ್ರಮ್ ಹೋಮ್: ಇದನ್ನು ಪಾಲಿಸಿ
ಮನೆಯಲ್ಲಿದ್ದುಕೊಂಡು ಆರಾಮಾಗಿ ಟಿವಿ ನೋಡುತ್ತ ಕೆಲಸ ಮಾಡಬಹುದು ಅನ್ನುವ ಕಲ್ಪನೆ ಕೆಲವರಿಗೆ ಇದೆ. ಆದರೆ ಟಿವಿ ಅಥವಾ ನೆಟ್‌ಪ್ಲಿಕ್ಸ್ ನೋಡುತ್ತಾ ಕುಳಿತರೆ ಕೆಲಸ ಕೆಡುತ್ತದೆ. ಯಾರಿಗೆ ಯಾವುದು ಇಷ್ಟವೋ ಅದನ್ನು ಮಾಡುತ್ತಾರೆ. ಆದರೆ ಕೊರೋನಾ ವೈರಸ್‌ನ ಕಾಲದಲ್ಲಿ ಹಲವರಿಗೆ ಮನೆಯಿಂದಲೇ ಕೆಲಸ ಕಡ್ಡಾಯವಾಗಿದೆ. ಇಂಥ ಸಂದರ್ಭದಲ್ಲಿ ನಾವು ಪಾಲಿಸಬೇಕಾದ ಕೆಲವು ನೀತಿ ನಿಯಮಗಳಿವೆ.
ಕೆಲವರಿಗೆ ವರ್ಕ್ ಫ್ರಮ್ ಹೋಮ್ ಸುಲಭ ಅನಿಸಬಹುದು. ಕೆಲವರಿಗೆ ಅದು ಕಿರಿಕಿರಿ, ಆಫೀಸೇ ಬೆಸ್ಟ್ ಅನ್ನಿಸಲೂಬಹುದು. ಮನೆಯಲ್ಲಾದರೆ ತುಂಬ ಮಂದಿ ಇದ್ದರೆ. ಅಳುವ ಮಗು, ಕಿರಿಕಿರಿ ಮಾಡುವ ನಾಯಿ, ಇವೆಲ್ಲ ಇದ್ದರೆ ಕೆಲಸಕ್ಕೆ ಭಂಗ ಉಂಟಾಗುತ್ತದೆ. ಆಫೀಸಿನಲ್ಲಿ ಸಹೋದ್ಯೋಗಿಗಳ ಜತೆ ಮಾತಾಡುತ್ತಾ ಮಾಡುವ ಕೆಲಸ ಸಲೀಸಾಗಿ ಸಾಗುತ್ತದೆ. ಆದರೆ ಮನೆಯಲ್ಲಿ ಹಾಗಲ್ಲ. ಮನೆಯಲ್ಲಿದ್ದುಕೊಂಡು ಆರಾಮಾಗಿ ಟಿವಿ ನೋಡುತ್ತ ಕೆಲಸ ಮಾಡಬಹುದು ಅನ್ನುವ ಕಲ್ಪನೆ ಕೆಲವರಿಗೆ ಇದೆ. ಆದರೆ ಟಿವಿ ಅಥವಾ ನೆಟ್‌ಪ್ಲಿಕ್ಸ್ ನೋಡುತ್ತಾ ಕುಳಿತರೆ ಕೆಲಸ ಕೆಡುತ್ತದೆ. ಯಾರಿಗೆ ಯಾವುದು ಇಷ್ಟವೋ ಅದನ್ನು ಮಾಡುತ್ತಾರೆ. ಆದರೆ ಕೊರೋನಾ ವೈರಸ್‌ನ ಕಾಲದಲ್ಲಿ ಹಲವರಿಗೆ ಮನೆಯಿಂದಲೇ ಕೆಲಸ ಕಡ್ಡಾಯವಾಗಿದೆ. ಇಂಥ ಸಂದರ್ಭದಲ್ಲಿ ನಾವು ಪಾಲಿಸಬೇಕಾದ ಕೆಲವು ನೀತಿ ನಿಯಮಗಳಿವೆ.
- ಕಚೇರಿಯ ಟೈಮಿಂಗ್ಸ್ ಅನ್ನೇ ಮನೆಯಲ್ಲೂ ಪಾಲಿಸುವುದು ಒಳ್ಳೆಯದು. ಕಚೇರಿಗೆ ಹೋಗುವ, ಬರುವ ಸಮಯ ಹೇಗೂ ನಿಮ್ಮಲ್ಲಿ ಉಳಿಯುತ್ತದೆ. ಆ ಸಮಯವನ್ನು ಕ್ರಿಯೇಟವ್ ಕೆಲಸಕ್ಕೆ ಬಳಸಬಹುದು. ಆದರೆ ಆಫೀಸ್ ಸಮಯವನ್ನು ಮನೆಯಲ್ಲೂ ಹಾಗೇ ಮೇಂಟೇನ್ ಮಾಡಬೇಕು. ಇದರಿಂದ ನಿಮ್ಮ ಬಾಸ್‌ಗೆ ನೀವು ಸುಲಭವಾಗಿ ಲಭ್ಯವಾಗಬಹುದು. ಅವರಿಗೆ ನೀವು ವಿಡಿಯೋ ಕಾಲ್ ಅಥವಾ ಫೋನ್ ಕರೆಗೆ ಲಭ್ಯವಾಗಬೇಕಿದ್ದರೆ ಸದಾ ಸಿದ್ಧರಾಗಿರಬೇಕು. ನಿಮ್ಮ ಮನೆಯಲ್ಲಿರುವವರಿಗೆ, ನಿಮ್ಮ ಸಂಗಾತಿಗೆ ಈ ಸಮಯಾಸಮಯದ ಬಗ್ಗೆ ಅರಿವು ಮೂಡಿಸಿ.
- ಮನೆಯ ಒಂದು ಭಾಗ ಅಥವಾ ಮೂಲೆಯನ್ನು ನಿಮ್ಮ ಕಚೇರಿ ಸ್ಥಳವಾಗಿ ಪರಿವರ್ತಿಸಿ. ಅಲ್ಲಿಗೆ ಮನೆಯ ಇನ್ಯಾರೂ ಬಂದು ತೊಂದರೆ ಕೊಡದಂತಿರಲಿ. ಮಗು, ನಾಯಿ, ಬೆಕ್ಕು, ಯಾವುದಕ್ಕೂ ಅಲ್ಲಿ ಅವಕಾಶ ಕೊಡಬೇಡಿ. ಕೂತು ಕೆಲಸ ಮಾಡಲು ಸೂಕ್ತ ವಾತಾವರಣ, ಒಳ್ಳೆಯ ಕುರ್ಚಿ, ಮೇಜು ಅಥವಾ ಸೋಫಾ, ಸಾಧ್ಯವಾದರೆ ಸ್ವಲ್ಪ ಹಸಿರು ಅಲ್ಲಿರಲಿ.
- ಮನೆಯ ದಿರಸಿನಲ್ಲಿ ನೀವು ಕೆಲಸ ಮಾಡುತ್ತಿದ್ದರೆ ಯಾರಿಗೂ ಗೊತ್ತಾಗುವುದಿಲ್ಲ ಯಾರೂ ಆಕ್ಷೇಪಿಸುವುದಿಲ್ಲ. ನೀವೂ ಕಂಫರ್ಟ್ ಆಗಿರುತ್ತೀರಿ. ಆದರೆ ವಿಡಿಯೋ ಕಾನ್ಫರೆನ್ಸ್ ಇದ್ದಾಗ ಮಾತ್ರ ಅದು ನಡೆಯುವುದಿಲ್ಲ. ಆಗ ನೀವು ಕಚೇರಿಗೆ ಸಿದ್ಧರಾದಂತೆ ಸಿದ್ಧರಾಗಬೇಕಾಗುತ್ತದೆ. ನಿಮ್ಮ ಮೈ ಮೇಲ್ಭಾಗ ಮಾತ್ರ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕಾಣುವಂತಿದ್ದರೆ ಕೆಳಗೆ ಪೈಜಾಮ ಧರಿಸಿದ್ದರೂ ಸಾಕು. ಆದರೆ ಕೆಲವರಿಗೆ ಆಫೀಸಿಗೆ ಹೊರಟಂತೆ ಸರ್ವಾಂಗ ಸುದರವಾಗಿ ಹೊರಟು ನಿಂತು ಕೆಲಸಕ್ಕೆ ಕೂತರೇ ಮೂಡ್ ಬರೋದು. ಹಾಗಿದ್ದವರಿಗೆ ಪೂರ್ತಿ ಆಫೀಸು ದಿರಿಸೇ ಸೂಕ್ತ.
ಕೊರೋನಾ ಡಿಪ್ರೆಶನ್ ನಿಮಗೂ ಬರಬಹುದು ಹುಷಾರು!
- ಮಕ್ಕಳೂ ಮನೆಯಲ್ಲಿದ್ದರೆ ವರ್ಕ್ ಫ್ರಮ್ ಹೋಮ್ ಅನ್ನುವುದು ಸ್ವಲ್ಪ ಕಠಿಣವೇ. ಅವರ ನಿರೀಕ್ಷೆಗಳೂ ಬೇರೇನೋ ಇರುತ್ತವೆ. ಅಪ್ಪ ಅಥವಾ ಅಮ್ಮ ಮನೆಯಲ್ಲಿರುವಾಗ ತನ್ನೊಡನೆ ಆಡಲಿ ಎಂದೇ ಎಲ್ಲ ಮಕ್ಕಳೂ ಬಯಸುತ್ತಾರೆ. ಮನೆಯಿಂದ ಕೆಲಸ ಅಂದರೆ ಅವರಿಗೆ ಅರ್ಥ ಆಗುವುದಿಲ್ಲ. ಆದರೆ ಇದನ್ನು ಅರ್ಥ ಮಾಡಿಸಿ, ಅವರು ಸೈಲೆಂಟಾಗಿ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ನಿಮ್ಮ ಜವಾಬ್ದಾರಿ. ಅವರಿಗೆ ಬೇರೆ ಕ್ರಿಯೇಟಿವ್ ಕೆಲಸಗಳನ್ನು ಹಚ್ಚಿ. ಮನೆಯಲ್ಲಿ ನಾಯಿಯಂಥ ಪೆಟ್‌ಗಳಿದ್ದರೆ, ಅವು ಗಲಾಟೆ ಮಾಡದಂತೆಯೂ ನೋಡಿಕೊಳ್ಳಬೇಕು.
- ಮನೆಯಿಂದ ಕೆಲಸ ಮಾಡುವಾಗ ನಿಮ್ಮ ಏಕಾಗ್ರತೆಯನ್ನು ಕೆಡಿಸಲೆಂದೇ ಕೆಲವು ಸಂಗತಿಗಳು ಜರುಗುತ್ತವೆ. ಪಕ್ಕದ ಮನೆಯವರು ಬಂದು ಮಾತಾಡಲು ಕರೆಯುವುದು, ಇನ್ಯಾರ ಜತೆಗೋ ಕಿರಿಕಿರಿ, ಮನೆಗೆ ಸಾಮಾನು ತರಬೇಕು ಎಂಬ ವರಾತ, ನೆಟ್‌ಫ್ಲಿಕ್ಸ್‌ನಲ್ಲಿ ಕರೆಯುವ ಹೊಸ ಸಿನಿಮಾ, ಟಿವಿಯಲ್ಲಿ ಸೀರಿಯಲ್ ನೋಡುವ ಉತ್ಸಾಹ, ಹಳೇ ಪುಸ್ತಕ ಓದಿ ಮುಗಿಸೋಣ ಅನ್ನಸೋದು- ಇವೆಲ್ಲ ಇರ್ತವೆ. ಇದನ್ನೆಲ್ಲ ಮೀರಿ ನಿಲ್ಲದಿದ್ದರೆ ಮನೆಯಿಂದ ಕಚೇರಿ ಕೆಲಸ ಸಾಧ್ಯವಿಲ್ಲ.
ಕೊರೋನಾ ವೈರಸ್ ಗಲಾಟೆಯಲ್ಲಿ ಹಸ್ತಮೈಥುನ ಮಾಡೋರ ಸಂಖ್ಯೆ ಹೆಚ್ಚಾಗಿದೆಯಾ?
- ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ನೀವು ಮನೆಯಲ್ಲಿ ಒಂಟಿಯಾಗಿದ್ದರೆ ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಫ್ಯಾಮಿಲಿ ಇದ್ದರೆ ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡುವವರು ಒಬ್ಬಿಬ್ಬರಾದರೂ ಇರುತ್ತಾರೆ. ಕಚೇರಿಯಲ್ಲೂ ನಿಮ್ಮ ಆರೋಗ್ಯ ಕೆಟ್ಟರೆ ಗಮನಿಸುತ್ತಾರೆ. ಮನೆಯಲ್ಲಿದ್ದಾಗ ಹೆಚ್ಚು ಜಂಕ್ ಫುಡ್ ಸೇವಿಸದೆ, ಆರೋಗ್ಕಕಾರಿ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ.