CBI Recruitment 2022: ಕೇಂದ್ರೀಯ ತನಿಖಾ ದಳದಲ್ಲಿ ಖಾಲಿ ಇರುವ ಕನ್ಸಲ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

By Gowthami K  |  First Published Dec 6, 2022, 4:34 PM IST

CBI ನಲ್ಲಿ 01 ಕನ್ಸಲ್ಟೆಂಟ್ ಹುದ್ದೆ ಖಾಲಿ ಇದ್ದು, ಇದರ ಭರ್ತಿಗಾಗಿ  ಕೇಂದ್ರೀಯ ತನಿಖಾ ದಳವು ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಜನವರಿ  5, 2023ರೊಳಗೆ  ಅರ್ಜಿ ಸಲ್ಲಿಸಬಹುದು.


ನವದೆಹಲಿ (ಡಿ.6): ಕೇಂದ್ರೀಯ ತನಿಖಾ ದಳ (ಸಿಬಿಐ) ಪಶ್ಚಿಮ ಬಂಗಾಳದ ವಿವಿಧ ನ್ಯಾಯಾಲಯಗಳಲ್ಲಿನ ಪ್ರಕರಣಗಳಿಗೆ ಸಂಬಂಧಿಸಿದ ಕೆಲಸಕ್ಕೆ ಹಾಜರಾಗುವ ಸಲಹೆಗಾರರನ್ನು ನೇಮಿಸಿಕೊಳ್ಳಲು ಇನ್‌ಸ್ಪೆಕ್ಟರ್ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಹುಡುಕುತ್ತಿದೆ. ಅಧಿಕೃತ CBI ನೇಮಕಾತಿ 2022 ಅಧಿಸೂಚನೆಯ ಪ್ರಕಾರ, ಇದಕ್ಕೆ ಕೇವಲ 1 ಕನ್ಸಲ್ಟೆಂಟ್  ಹುದ್ದೆ ಮಾತ್ರ ಖಾಲಿ ಇದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 5ನೇ ಜನವರಿ 2023. ಈ ನೇಮಕಾತಿಗಾಗಿ ಕೇಂದ್ರ/ರಾಜ್ಯ ಪೊಲೀಸ್ ಪಡೆಗಳ ಇನ್‌ಸ್ಪೆಕ್ಟರ್ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ನಿವೃತ್ತ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣಗಳ ತನಿಖೆ ಮತ್ತು ಪ್ರಾಸಿಕ್ಯೂಷನ್‌ನಲ್ಲಿ 10 ವರ್ಷಗಳ ಅನುಭವವನ್ನು ಹೊಂದಿರುವವರು ಮೇಲೆ ತಿಳಿಸಿದ ಹುದ್ದೆಗೆ  ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ https://cbi.gov.in/ ಗೆ ಭೇಟಿ ನೀಡಬಹುದು.

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ಅಭ್ಯರ್ಥಿಗಳು ಸಂಪೂರ್ಣ ಸಮಯವನ್ನು ತೊಡಗಿಸಿಕೊಂಡಿರುತ್ತಾರೆ ಮತ್ತು ಬಾಡಿಗೆ ಅವಧಿಯಲ್ಲಿ ಅರೆಕಾಲಿಕ ಖಾಸಗಿ ಉದ್ಯೋಗವನ್ನು ಕೈಗೊಳ್ಳುವ ಹಕ್ಕನ್ನು ಹೊಂದಿರುವುದಿಲ್ಲ. ವಿಶೇಷ CBI ನ್ಯಾಯಾಲಯಗಳಲ್ಲಿ ಪೈರ್ವಿ ಅಧಿಕಾರಿಗಳ ಕರ್ತವ್ಯಗಳ ಕಾರ್ಯಕ್ಷಮತೆಯನ್ನು ಪರಿಗಣಿಸಬೇಕಾದ ಸಿಬಿಐನ ಹಿತಾಸಕ್ತಿಯಲ್ಲಿ ನೇಮಕಗೊಂಡ ಸಲಹೆಗಾರರನ್ನು HoZ/HB ಬಳಸಿಕೊಳ್ಳುತ್ತದೆ.

Latest Videos

undefined

ವಿದ್ಯಾರ್ಹತೆ: ಕೇಂದ್ರೀಯ ತನಿಖಾ ದಳದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಿರುವ ಆಸಕ್ತ  ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು.

ವಯೋಮಿತಿ: ಕೇಂದ್ರೀಯ ತನಿಖಾ ದಳದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಿರುವ ಆಸಕ್ತ  ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯ ಪ್ರಕಾರ, ಗರಿಷ್ಠ ವಯಸ್ಸಿನ 64 ವರ್ಷಗಳ ಮಿತಿಯನ್ನು ಹೊಂದಿರಬೇಕು.

ವೇತನ ವಿವರ: ಕೇಂದ್ರೀಯ ತನಿಖಾ ದಳದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಿರುವ ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯ ಪ್ರಕಾರ, ಈ ನೇಮಕಾತಿಗಾಗಿ ಮಾಸಿಕ ಏಕೀಕೃತ ವೇತನವು ರೂ 40000 ಆಗಿರುತ್ತದೆ.

ಉದ್ಯೋಗ ಸ್ಥಳ: ಕೇಂದ್ರೀಯ ತನಿಖಾ ದಳದಲ್ಲಿ ಖಾಲಿ ಇರುವ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಚೆನ್ನೈ ನಲ್ಲಿ ಉದ್ಯೋಗ ಮಾಡುವ ಅವಕಾಶವಿರಲಿದೆ.

ಬೀದರ್ ನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಅಗ್ನಿಪಥ ರ್‍ಯಾಲಿ, ಆಕಾಂಕ್ಷಿಗಳ ನೋಂದಣಿ ದಾಖಲೆ 

ಕೊಪ್ಪಳದಲ್ಲಿ   ಡಿಸೆಂಬರ್ 13 ರಂದು ಬೃಹತ್ ಉದ್ಯೋಗ ಮೇಳ:
ಕೊಪ್ಪಳದಲ್ಲಿ   ಡಿಸೆಂಬರ್ 13 ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಪ್ರಾಣೇಶ್ ಈ ಮಾಹಿತಿ ನೀಡಿದ್ದು,  ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಈ ಉದ್ಯೋಗ ಮೇಳ ನಡೆಯುತ್ತಿದೆ. ಡಿಸೆಂಬರ್ 13 ರಂದು ಬೆಳಿಗ್ಗೆ 10 ರಿಂದ 05 ಗಂಟೆಯವರೆಗೆ  ಕೊಪ್ಪಳದ  ತಾಲೂಕು ಕ್ರೀಡಾಂಗಣದಲ್ಲಿ ಈ ಉದ್ಯೋಗ ಮೇಳ ನಡೆಯಲಿದ್ದು,  ಕೈಗಾರಿಕೆ, ಕೃಷಿ, ಫಾರ್ಮಾ, ಹೆಲ್ತ್ ಸೆಕ್ಟರ್, ಬ್ಯಾಕಿಂಗ್, ಹಣಕಾಸು ವಿಷಯಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಸುಮಾರು 25 ರಿಂದ 30 ಕಂಪನಿಗಳು  ಈ ಮೇಳದಲ್ಲಿ ಭಾಗವಹಿಸಲಿದೆ.

NMPT Recruitment 2022: ನವ ಮಂಗಳೂರು ಬಂದರಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿರುವ ಆಸಕ್ತ ಅಭ್ಯರ್ಥಿಗಳು  ಈ ಉದ್ಯೋಗ ಮೇಳದಲ್ಲಿ ಸೂಕ್ತ ದಾಖಲೆಗಳೊಂದಿಗೆ ಭಾಗವಹಿಸಬಹುದು. ಆಸಕ್ತರು ಈ ಗೂಗಲ್ ಲಿಂಕ್ ಮುಖಾಂತರ ಹೆಸರು ನೋಂದಾಯಿಸಲು ಕೋರಲಾಗಿದೆ. https://docs.google.com/forms/d/e/1FAIpQLSeqmoeWqI_oi2khKcskoayche0SxPkJqqdIwySNaL0XtzI2aQ/viewform?vc=0&c=0&w=1&flr=0

click me!