BSNL ಮರುಜೀವಕ್ಕೆ ಯತ್ನ, 75000 ಸಿಬ್ಬಂದಿ ವಿಆರ್‌ಎಸ್‌ ಆಯ್ಕೆ!

By Web DeskFirst Published Nov 15, 2019, 10:17 AM IST
Highlights

ಬಿಎಸ್‌ಎನ್‌ಎಲ್‌ನ 75000 ಸಿಬ್ಬಂದಿ ವಿಆರ್‌ಎಸ್‌ ಆಯ್ಕೆ| ಕಂಪನಿಯ 1.50 ಲಕ್ಷ ಸಿಬ್ಬಂದಿಯ ಪೈಕಿ 50 ವರ್ಷ ದಾಟಿದ 1 ಲಕ್ಷ ಸಿಬ್ಬಂದಿ ವಿಆರ್‌ಎಸ್‌ ಪಡೆಯುವ ಅರ್ಹತೆ 

ನವದೆಹಲಿ[ನ.15]: ನಷ್ಟದ ಸುಳಿಯಲ್ಲಿರುವ ಬಿಎಸ್‌ಎನ್‌ಎಲ್‌ ಸಂಸ್ಥೆಗೆ ಮರುಜೀವ ನೀಡುವ ಸಲುವಾಗ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿ ಮಾಡಿರುವ ಸ್ವಯಂ ನಿವೃತ್ತಿ ಯೋಜನೆಯನ್ನು(ವಿಆರ್‌ಎಸ್‌) 75 ಸಾವಿರ ಸಿಬ್ಬಂದಿ ಆಯ್ದುಕೊಂಡಿದ್ದಾರೆ ಎಂದು ಕಂಪನಿಯ ನಿರ್ದೇಶಕ, ಕಾರ್ಯಕಾರಿ ನಿರ್ವಾಹಕರಾದ ಪಿ.ಕೆ. ಪುರುವರ್‌ ತಿಳಿಸಿದ್ದಾರೆ.

ಕಂಪನಿಯ 1.50 ಲಕ್ಷ ಸಿಬ್ಬಂದಿಯ ಪೈಕಿ 50 ವರ್ಷ ದಾಟಿದ 1 ಲಕ್ಷ ಸಿಬ್ಬಂದಿ ವಿಆರ್‌ಎಸ್‌ ಪಡೆಯುವ ಅರ್ಹತೆ ಹೊಂದಿದ್ದಾರೆ. ಇದರಲ್ಲಿ ಈಗಾಗಲೇ 75 ಸಾವಿರ ಜನ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ.

BSNL ನಿಂದ VRS ಯೋಜನೆ ಜಾರಿ : ಏನಿದು VRS?

ಅಲ್ಲದೇ, ಡಿ.3ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಂದ ಇನ್ನಷ್ಟುಸಿಬ್ಬಂದಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ವಿಆರ್‌ಎಸ್‌ ಪಡೆಯುತ್ತಿರುವುದರಿಂದ ಸಿಬ್ಬಂದಿಗೆ ಪಾವತಿಸುವ ವೇತನದಲ್ಲಿ ಕಂಪನಿಗೆ ಕೋಟ್ಯಂತರ ರು. ಉಳಿಕೆಯಾಗಿದೆ ಎನ್ನಲಾಗಿದೆ.

ಇಷ್ಟು ಪ್ರಮಾಣದಲ್ಲಿ ಸಿಬ್ಬಂದಿ ನಿವೃತ್ತಿ ಬಳಿಕ ಉಂಟಾಗುವ ಸಮಸ್ಯೆಯನ್ನು ಎದುರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

20 ಸಾವಿರ ಕೋಟಿ ಕೊಡದ ಬಿಎಸ್ಸೆನ್ನೆಲ್‌ಗೆ ‘ದಿವಾಳಿ’ ಸಂಕಷ್ಟ

click me!