ನಿರುದ್ಯೋಗಿಗಳಿಗೆ ಖುಷಿ ಸುದ್ದಿ, AIIMSನಲ್ಲಿ ಉದ್ಯೋಗವಕಾಶ, 2300 ಹುದ್ದೆಗಳ ಭರ್ತಿ

Published : Jul 15, 2025, 02:03 PM ISTUpdated : Jul 15, 2025, 02:18 PM IST
AIIMS Delhi. (File Photo/ANI)

ಸಾರಾಂಶ

ಕೇಂದ್ರ ಸರ್ಕಾರಿ ಕೆಲ್ಸ ಹುಡುಕ್ತಿರೋರಿಗೊಂದು ಖುಷಿ ಸುದ್ದಿ ಇದೆ. ಎಐಎಐಎಂಎಸ್ ಅಭ್ಯರ್ಥಿಗಳ ನೇಮಕಾತಿಗೆ ಮುಂದಾಗಿದೆ. ಒಟ್ಟೂ 2300 ಹುದ್ದೆಗಳ ಭರ್ತಿ ನಡೆಯಲಿದೆ. 

ನಿರುದ್ಯೋಗಿ (Unemployed )ಗಳಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. AIIMS ನವದೆಹಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸಾಮಾನ್ಯ ನೇಮಕಾತಿ ಪರೀಕ್ಷೆ 2025 (General Recruitment Exam 2025) ರ ಅಧಿಕೃತ ಅಧಿಸೂಚನೆಯನ್ನು ಎಐಎಐಎಂಎಸ್ ಬಿಡುಗಡೆ ಮಾಡಿದೆ. ಈ ನೇಮಕಾತಿಯ ಉದ್ದೇಶ ವಿವಿಧ AIIMS ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 2,300 ಕ್ಕೂ ಹೆಚ್ಚು ಗ್ರೂಪ್ A ಮತ್ತು B ಅಧ್ಯಾಪಕರಲ್ಲದ ಹುದ್ದೆಗಳಿಗೆ ಭರ್ತಿಯಾಗಿದೆ. ಈಗಾಗಲೇ ಅರ್ಜಿಯನ್ನು ವೆಬ್ ಸೈಟ್ ನಲ್ಲಿ ಬಿಡಲಾಗಿದೆ. ಅರ್ಹ ಅಭ್ಯರ್ಥಿಗಳು ಜುಲೈ 31, 2025 ರ ಒಳಗೆ ಅರ್ಜಿ ಸಲ್ಲಿಸಬಹುದು. ಎಐಐಎಂಎಸ್ ಅಧಿಕೃತ ವೆಬ್ಸೈಟ್ www.aiimsexams.ac.in ಮೂಲಕ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ – ವಯಸ್ಸಿನ ಮಿತಿ : AIIMS CRE ಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಪದವಿ/ಡಿಪ್ಲೊಮಾ/ಸ್ನಾತಕೋತ್ತರ ಪದವಿ ಹೊಂದಿರಬೇಕು. ವಿಷಯವಾರು ಅರ್ಹತಾ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು. ವೆಬ್ ಸೈಟ್ ನಲ್ಲಿ ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಹಾಗೂ ಅನುಭವದ ಬಗ್ಗೆ ಮಾಹಿತಿ ಲಭ್ಯವಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷಗಳ ನಡುವೆ ಇರಬೇಕು.

ಪರೀಕ್ಷೆ ವಿಧಾನ : AIIMS, CRE 2025 ಪರೀಕ್ಷೆಯನ್ನು ಆಗಸ್ಟ್ 25 ಮತ್ತು 26 ರಂದು ನಿಗದಿಪಡಿಸಲಾಗಿದೆ. ಇದಕ್ಕಾಗಿ, ಅಡ್ಮಿಟ್ ಕಾರ್ಡ್ ಆಯಾ ಹುದ್ದೆ / ಗುಂಪಿನ ಪರೀಕ್ಷಾ ದಿನಾಂಕಕ್ಕಿಂತ 3 ದಿನಗಳ ಮೊದಲು ಅಪ್ಲೋಡ್ ಮಾಡಲಾಗುತ್ತದೆ. ಅಡ್ಮಿಟ್ ಕಾರ್ಡ್ ಬಿಡುಗಡೆ ಮಾಡುವ 7 ದಿನಗಳ ಮೊದಲು, ನೀವು ಯಾವ ಊರಿನಲ್ಲಿ ಪರೀಕ್ಷೆ ಬರೆಯಬಹುದು ಎಂಬ ಮಾಹಿತಿ ನೀಡಲಾಗುತ್ತೆ. ಆನ್ಲೈನ್ ಅರ್ಜಿಯನ್ನು ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಮತ್ತು ಇತರ ಪ್ರಮುಖ ವಿವರಗಳನ್ನು ಸರಿಯಾಗಿ ಪರಿಶೀಲಿಸಬೇಕು.

ಆಯ್ಕೆ ಹೇಗೆ? : ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕ ನಡೆಯುತ್ತದೆ. ನಂತ್ರ ದಾಖಲೆ ಪರಿಶೀಲನೆ ಮತ್ತು ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಟ್ಟು 400 ಅಂಕಗಳಿಗೆ ನಡೆಯುತ್ತದೆ. ತಪ್ಪು ಉತ್ತರಗಳಿಗೆ 0.25 ಅಂಕ ಕಡಿತ ಮಾಡಲಾಗುವುದು.

ಪರೀಕ್ಷೆಗೆ ಅರ್ಜಿ ಸಲ್ಲಿಕೆ ಹೇಗೆ? :

• ಮೊದಲು ನೀವು AIIMS aiimsexams.ac.in ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.

• ಅಲ್ಲಿ ನೇಮಕಾತಿ (recruitment) ಯ ಮೇಲೆ ಕ್ಲಿಕ್ ಮಾಡಿ. ಆಗ ಹೊಸ ವಿಂಡೋ ತೆರೆಯುತ್ತದೆ.

• ಇಲ್ಲಿ ಸಾಮಾನ್ಯ ನೇಮಕಾತಿ ಪರೀಕ್ಷೆಯ (Common Recruitment Examination) ಮೇಲೆ ಕ್ಲಿಕ್ ಮಾಡಿ.

• ಇಲ್ಲಿ ನಿಮಗೆ ಹುದ್ದೆಯ ಎಲ್ಲ ಮಾಹಿತಿ ಸಿಗುತ್ತದೆ.

• ಅದರ ಮಾಹಿತಿ ಪಡೆದ ನಂಥೃ ಹೊಸ ಖಾತೆಯನ್ನು ರಚಿಸಿ ಮತ್ತು ಕೇಳಲಾದ ಕ್ಷೇತ್ರಗಳಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಿ.

• ನೋಂದಣಿ ನಂತ್ರ ಆನ್ಲೈನ್ನಲ್ಲಿ ರಚಿಸಲಾದ ಸಹಿ ಜೊತೆ ಲಾಗಿನ್ ಮಾಡಿ.

• ನಿಮ್ಮ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಿ.

• ಅರ್ಜಿಯನ್ನು ಪ್ರಿಂಟ್ ತೆಗೆದು ನಿಮ್ಮ ಬಳಿ ಇಟ್ಕೊಳ್ಳಿ.

 

PREV
Read more Articles on
click me!

Recommended Stories

ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ ಗ್ರಾಚ್ಯುಟಿ, 40 ಕೋಟಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ
ಹುಷಾರಿಲ್ಲ ಅಂದ್ರೆ MLA, MP ಕೂಡ ರಜೆ ತೆಗೆದ್ಕೊಳ್ಬೇಕಾ? ಹಿಂಗಿದೆ ರೂಲ್ಸ್