ಪದವೀಧರರಿಗೆ ವಿವಿಧ ಉದ್ಯೋಗವಕಾಶಗಳು: ಅರ್ಜಿ ಹಾಕಿ

By Suvarna News  |  First Published Dec 20, 2020, 5:15 PM IST

ಏರ್​ಪೋರ್ಟ್​ ಅಥಾರಿಟಿ ಆಫ್​ ಇಂಡಿಯಾ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಿಡಿಸಿದೆ. ಈ ಬಗ್ಗೆ ಇನ್ನುಷ್ಟು ಮಾಹಿತಿ ಈ ಕೆಳಗಿನಂತಿದೆ.


ಬೆಂಗಳೂರು, (ಡಿ.20): ಏರ್​ಪೋರ್ಟ್​ ಅಥಾರಿಟಿ ಆಫ್​ ಇಂಡಿಯಾ (ಎಎಐ)ನಲ್ಲಿ ಖಾಲಿ ಇರುವ ವಿವಿಧ ಒಟ್ಟು 368  ಹುದ್ದೆಗಳಿಗೆ  ಅರ್ಜಿ ಆಹ್ವಾನಿಸಲಾಗಿದೆ. 

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ದಿನಾಂಕ 14.1.2021ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

Latest Videos

undefined

ಹುದ್ದೆಗಳು
* ಮ್ಯಾನೇಜರ್ ಫೈರ್ ಸರ್ವಿಸ್ - 11
* ಮ್ಯಾನೇಜರ್ ಟೆಕ್ನಿಕಲ್ - 2
* ಜೂನಿಯರ್ ಎಕ್ಸಿಕ್ಯೂಟೀವ್ (ಏರ್​ಟ್ರಾಫಿಕ್ ಕಂಟ್ರೋಲರ್) - 264
* ಜೂನಿಯರ್ ಎಕ್ಸಿಕ್ಯೂಟೀವ್ (ಏರ್​ಪೋರ್ಟ್​ ಆಪರೇಷನ್ಸ್) - 83
* ಜೂನಿಯರ್ ಎಕ್ಸಿಕ್ಯೂಟೀವ್ (ಟೆಕ್ನಿಕಲ್) - 8

ವಿದ್ಯಾರ್ಹತೆ: ಫೈರ್, ಮೆಕ್ಯಾನಿಕಲ್, ಆಟೋಮೊಬೈಲ್ ಇಂಜಿನಿಯರಿಂಗ್‍ನಲ್ಲಿ ಬಿಇ, ಬಿ.ಟೆಕ್ ಪದವಿ, ಫಿಜಿಕ್ಸ್, ಮ್ಯಾಥಮೆಟಿಕ್ಸ್‍ನಲ್ಲಿ ಬಿಎಸ್‍ಸಿ ಪದವಿ, ಎಂಬಿಎ.

ವಯೋಮಿತಿ: 30.11.2020ಕ್ಕೆ ಅನುಗುಣವಾಗಿ ಮ್ಯಾನೇಜರ್ ಹುದ್ದೆಗೆ ಗರಿಷ್ಠ 32 ವರ್ಷ, ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಗರಿಷ್ಠ 27 ವರ್ಷ. ಸರ್ಕಾರದ ನಿಯಮದನ್ವಯ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ, ಎಸ್ಸಿ, ಎಸ್‍ಟಿ ಅಭ್ಯರ್ಥಿಗಳಿಗೆ 5, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3ವರ್ಷ ಹಾಗೂ ಎಎಐನ ಸಿಬ್ಬಂದಿಗೆ 10 ವರ್ಷ ವಯೋ ಸಡಿಲಿಕೆ ಇದೆ.

ವೇತನ ಶ್ರೇಣಿ: ಮ್ಯಾನೇಜರ್ ಹುದ್ದೆಗೆ ಮಾಸಿಕ 60 ಸಾವಿರ ರೂ. ಹಾಗೂ ಜೂನಿಯರ್ ಎಕ್ಸಿಕ್ಯೂಟೀವ್ ಹುದ್ದೆಗೆ ಮಾಸಿಕ 40,000 ರೂ. ವೇತನ ಜತೆ ಎಎಐ ನಿಯಮದಂತೆ ಡಿಎ, ಬಾಡಿಗೆ ಮನೆ ಭತ್ಯೆ, ವೈದ್ಯಕೀಯ ಭತ್ಯೆ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು. 

ಅರ್ಜಿ ಶುಲ್ಕ: ST, SC ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 170 ರೂ., ಇತರ ಅಭ್ಯರ್ಥಿಗಳು 1000 ರೂ. ನಿಗದಿಪಡಿಸಲಾಗಿದ್ದು, ಎಎಐನಲ್ಲಿ ಅಪ್ರೆಂಟೀಸ್ ತರಬೇತಿ ಪಡೆದ ಅಂಗವಿಕಲ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದೆ. 

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುತ್ತದೆ. ಆನ್‍ಲೈನ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ, ಸಂದರ್ಶನ, ದೈಹಿಕ ಪರೀಕ್ಷೆ, ಎಂಡ್ಯೂರನ್ಸ್, ಚಾಲನಾ, ಧ್ವನಿ ಪರೀಕ್ಷೆಗಳನ್ನು ನಡೆಸಲಾಗುವುದು.

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!