Volkswagen Electric Car: ಭಾರತೀಯರಿಗೂ ವೋಕ್ಸ್ ವ್ಯಾಗನ್ ಎಲೆಕ್ಟ್ರಿಕ್ ಕಾರ್ ಅನುಭೂತಿ... ಯಾವ ವರ್ಷ!

Published : Mar 09, 2022, 07:48 PM IST
Volkswagen Electric Car:  ಭಾರತೀಯರಿಗೂ ವೋಕ್ಸ್ ವ್ಯಾಗನ್ ಎಲೆಕ್ಟ್ರಿಕ್ ಕಾರ್ ಅನುಭೂತಿ... ಯಾವ ವರ್ಷ!

ಸಾರಾಂಶ

ವೋಕ್ಸ್‌ವ್ಯಾಗನ್‌ ಇಂಡಿಯಾ 2025ರ ವೇಳೆಗೆ ಭಾರತದಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ

ವೋಕ್ಸ್ವ್ಯಾಗನ್ ಇಂಡಿಯಾ (Volkswagen India) 2025ರ ವೇಳೆಗೆ ಭಾರತದಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಜರ್ಮನ್ ಕಾರು ತಯಾರಕ ಕಂಪನಿ ಭಾರತದಲ್ಲಿ ಇವಿ (EV) ಕಾರುಗಳನ್ನು ಪರಿಚಯಿಸಲು ಮತ್ತು ದೇಶದಲ್ಲಿ ಗ್ರಾಹಕರನ್ನು ತಲುಪಲು ಉತ್ಸುಕವಾಗಿದೆ. 
ವೋಕ್ಸ್ವ್ಯಾಗನ್ ಇಂಡಿಯಾದ ಬ್ರ್ಯಾಂಡ್ ನಿರ್ದೇಶಕ ಆಶಿಶ್ ಗುಪ್ತಾ, ಆರಂಭದಲ್ಲಿ ಬ್ಯಾಟರಿ ಎಲೆಕ್ಟ್ರಿಕ್ ಮಾದರಿಗಳನ್ನು ಆಮದು ಮಾಡಿ, ಮಾರುಕಟ್ಟೆ ಪ್ರತಿಕ್ರಿಯೆಯನ್ನು ಗಮನಿಸಲು ಕಂಪನಿ ನಿರ್ಧರಿಸಿದೆ ಎಂದಿದ್ದಾರೆ.

ವೋಕ್ಸ್ವ್ಯಾಗನ್ ಮಿಡ್-ಸೈಜ್ ಸೆಡಾನ್ ವರ್ಟಸ್ (Virtus) ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಜಾಗತಿಕವಾಗಿ ಬ್ರ್ಯಾಂಡ್ ಪರಿವರ್ತನೆಯಾಗುತ್ತಿರುವುದನ್ನು ಗಮನಿಸಿದಾಗ, ಭಾರತ ಕೂಡ ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳತ್ತ ಸಂಪೂರ್ಣವಾಗಿ ಮುಖಮಾಡಲಿದೆ ಎಂಬುದು ತಿಳಿದು ಬರುತ್ತದೆ. ಆದ್ದರಿಂದ ನಾವು ಈಗಲೇ ಇವಿ ವಾಹನಗಳ ಬಿಡುಗಡೆಗೆ ಸಿದ್ಧತೆ ಆರಂಭಿಸಿದ್ದೇವೆ” ಎಂದರು. 

ಎಂಜಿ ಮೋಟಾರ್ ಇಂಡಿಯಾ 2022 ಝೆಡ್ ಎಸ್ ಇವಿ ಬಿಡುಗಡೆ: ದರ 21.99 ಲಕ್ಷ ರೂ.

ವೋಕ್ಸ್ವ್ಯಾಗನ್ ಈಗಾಗಲೇ ವಿಶ್ವಾದ್ಯಂತ ಹಲವು ಇವಿ ಪೋರ್ಟ್ಫೋಲಿಯೋಗಳನ್ನು ಹೊಂದಿದೆ. ಈ ವಿಭಾಗದಲ್ಲಿ ಹಲವುವಿಧಗಳಿವೆ. ಅದರಲ್ಲಿ ಒಂದು, ಭಾರತೀಯ ಮಾರುಕಟ್ಟೆಗೆ ಕೆಲ ಮಾದರಿಗಳನ್ನು ಪರಿಚಯಿಸುವುದು. ಇದು ಆಮದು ಮಾಡಿಕೊಂಡು, ಇಲ್ಲಿನ ಪ್ರತಿಕ್ರಿಯೆ ಪರಿಶೀಲಿಸುವುದನ್ನು ಒಳಗೊಂಡಿದೆ ಎಂದರು.
ಭಾರಿ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ಪ್ರಶ್ನೆಗೆ ಉತ್ತರಿಸಿದ ಅವರು, ಅದಕ್ಕಿನ್ನೂ ಸಾಕಷ್ಟು ಸಮಯವಿದೆ. ಇದು 2025-26ರ ದ್ವಿತಿಯಾರ್ಧದಲ್ಲಿ ಸಾಧ್ಯವಾಗಬಹುದು ಎಂದಿದ್ದಾರೆ.

ವೋಕ್ಸ್ ವ್ಯಾಗನ್ ಯೂರೋಪ್, ಚೀನಾ ಮತ್ತು ಅಮೆರಿಕದಲ್ಲಿ ಐಡಿ.3 ಮತ್ತು ಐಡಿ.4 ಕಾರುಗಳನ್ನು ಬಿಡುಗಡೆಗೊಳಿಸಿದೆ. ಐಡಿ.4 ಕಾರು ಕಳೆದ ವರ್ಷದ ಏಪ್ರಿಲ್ನಲ್ಲಿ ಬಿಡುಗಡೆಗೊಳಿಸಿದೆ. ಇದೇ ತಿಂಗಳಲ್ಲಿ ವೋಕ್ಸ್ ವ್ಯಾಗನ್ ಐಡಿ.ಬಝ್ ಎಂಬ ಎಲೆಕ್ಟ್ರಿಕ್ ವ್ಯಾನ್ ಬಿಡುಗಡೆಗೊಳಿಸಲು ಕೂಡ ಸಿದ್ಧತೆ ನಡೆಸಿದೆ. 

ಈ ಹಿಂದೆ ಕೂಡ ವೋಕ್ಸ್ವ್ಯಾಗನ್, ಭಾರತದಲ್ಲಿ ಇವಿ ಪರಿಚಯಿಸಲು ಸರಿಯಾದ ಸಮಯವನ್ನು ಕಾದು ನೋಡುವುದಾಗಿ ತಿಳಿಸಿದೆ. ದೇಶದಲ್ಲಿ ಇವಿ ವಾತಾವರಣವನ್ನು ಪರಿಶೀಲಿಸಿ, ಇವಿ ಕಾರುಗಳ ಬಿಡುಗಡೆ ವಿಶ್ವಾಸಾರ್ಹ ವ್ಯವಹಾರದ ಹಂತ ತಲುಪಿದ ನಂತರವಷ್ಟೇ ಇವಿ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ಅದು ಘೋಷಿಸಿದೆ.
ಜಾಗತಿಕ ಮಟ್ಟದಲ್ಲಿ ಟೆಸ್ಲಾಗೆ ಪ್ರತಿಸ್ಪರ್ಧಿಯಾಗಿ ವೋಕ್ಸ್ವ್ಯಾಗನ್ ಇವಿ ಕಾರುಗಳನ್ನು ಪರಿಚಯಿಸಲು ಕಂಪನಿ ಶ್ರಮಿಸುತ್ತಿದೆ. ಇತ್ತೀಚೆಗಷ್ಟೇ ಕಂಪನಿ, ಜರ್ಮನಿಗೆ ಸೀಮಿತವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವುದಾಗಿ ಕೂಡ ಘೋಷಿಸಿದೆ.

ವೋಕ್ಸ್ವ್ಯಾಗನ್ ಇಂಡಿಯಾ ಇಂದು ತನ್ನ ಗ್ಲೋಬಲ್ ಸೆಡಾನ್ (Global Sedan) ವೋಕ್ಸ್ವ್ಯಾಗನ್ ವೈರ್ಟಸ್ (Volkswagen Virtus) ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಮೇ ತಿಂಗಳಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

ಇಂಡಿಯಾ 2.0 ಪ್ರಾಜೆಕ್ಟ್ನಡಿ  ವೋಕ್ಸ್ವ್ಯಾಗನ್ ವೈರ್ಟಸ್ ಎರಡನೇ ಉತ್ಪನ್ನವಾಗಿದ್ದು, ಶೇ. 95ರಷ್ಟು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಎಂಕ್ಯುಬಿ ಎಒ ಇನ್ ಪ್ಲಾಟ್ಫಾರಂನಡಿ (MQB EO in Platform) ತಯಾರಿಸಲಾಗಿದೆ. ಈ ಪ್ಲಾಟ್ಫಾರಂನ ಫ್ಲೆಕ್ಸಿಬಿಲಿಟಿಯಿಂದಾಗಿ ಹೊಸ ವೈರ್ಟಸ್ ಈ ವಿಭಾಗದಲ್ಲಿಯೇ ಅತಿ ಉದ್ದನೆಯ ಕಾರಾಗಿದ್ದು  4,561 ಎಂಎಂ ಉದ್ದ ಇದೆ. ವಿಶಾಲವಾದ ಕ್ಯಾಬಿನ್ ಮತ್ತು  521 ಲೀಟರ್ ಬೂಟ್ಸ್ಪೇಸ್  ಹೊಂದಿದೆ.

ಹೊಸ ವೈರ್ಟಸ್ ವೈಲ್ಡ್ ಚೆರ್ರಿ ರೆಡ್, ಕಾರ್ಬನ್ ಸ್ಟೀಲ್ ಗ್ರೇ, ರಿಫ್ಲೆಕ್ಸ್ ಸಿಲ್ವರ್, ಕುರ್ಕುಮಾ ಯೆಲ್ಲೋ, ಕ್ಯಾಂಡಿ ವೈಟ್ ಮತ್ತು ರೈಸಿಂಗ್ ಬ್ಲೂ ಬಣ್ಣಗಳಲ್ಲಿ ಇದು ದೊರೆಯಲಿದೆ. ಇದರಲ್ಲಿ 6 ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ಸಿ), ಮಲ್ಟಿ ಕೊಲಿಷನ್ ಬ್ರೇಕ್, ಹಿಲ್ ಹೋಲ್ಡ್ ಕಂಟ್ರೊಲ್, ಎಲ್ಡಿಆರ್ಎಲ್ ಎಲ್ಇಡಿ ಹೆಡ್ಲ್ಯಾಂಪ್, ಐಎಸ್ಒಫಿಕ್ಸ್, ಹಿಂಬದಿಯಲ್ಲಿ ಮೂರು ಹೆಡ್ರೆಸ್ಟ್ಗಳಿವೆ.

ವೋಕ್ಸ್ವ್ಯಾಗನ್ ವೈರ್ಟಸ್ನ ಜಾಗರಿಕ ಪ್ರೀಮಿಯರ್ನೊಂದಿಗೆ ಪ್ರೀಬುಕಿಂಗ್ ಆರಂಭವಾಗಿದ್ದು, ಗ್ರಾಹಕರು ಭಾರತದಲ್ಲಿರುವ 151 ಸೇಲ್ಸ್ ಟಚ್ಪಾಯಿಂಟ್ಗಳಲ್ಲಿ ಮತ್ತು ವೋಕ್ಸ್ವ್ಯಾಗನ್ ಇಂಡಿಯಾದ ವೆಬ್ಸೈಟ್ನಲ್ಲಿ ಆನ್ಲೈನ್ ಬುಕಿಂಗ್ ಮಾಡಬಹುದು.

PREV
Read more Articles on
click me!

Recommended Stories

ಇದು ಬರೀ ಡಿಸೆಂಬರ್‌ ಅಲ್ಲ, ಕಾರ್‌ ಡಿಸ್ಕೌಂಟ್‌ ಡಿಸೆಂಬರ್‌; ಈ ಐದು ಕಾರ್‌ಗಳಿಗೆ ಇದೆ ಭರ್ಜರಿ ಆಫರ್‌!
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ