40 ಕಿಮೀ ಮೈಲೇಜ್ ನೀಡಲಿವೆ ಮಾರುತಿಯ ಎರಡು ಫೇಸ್‌ಲಿಫ್ಟ್‌ ಕಾರು

By Suvarna News  |  First Published Nov 23, 2022, 7:26 PM IST

ಮಾರುತಿ ಸುಜುಕಿ 2024 ರಲ್ಲಿ ಹೊಸ ತಲೆಮಾರಿನ ಸ್ವಿಫ್ಟ್  (Swift) ಹ್ಯಾಚ್ಬ್ಯಾಕ್ ಮತ್ತು ಡಿಜೈರ್ (Dezire) ಕಾಂಪ್ಯಾಕ್ಟ್ ಸೆಡಾನ್ ಅನ್ನು ಹೊರತರಲಿದೆ. ಇವುಗಳಲ್ಲಿಕಾರು ತಯಾರಕರು ಬಲವಾದ ಹೈಬ್ರಿಡ್ ತಂತ್ರಜ್ಞಾನ ಮತ್ತು ಮೈಲೇಜ್ ನೀಡುವ ಗುರಿ ಹೊಂದಿದ್ದಾರೆ.


ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ (Maruti Suzuki), ಆರಂಭಿಕ ಹಂತದ ಹ್ಯಾಚ್ಬ್ಯಾಕ್ (hatchback) ವಿಭಾಗದಲ್ಲಿ ಶೇ.90 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಕಳೆದ ಕೆಲ ವರ್ಷಗಳಲ್ಲಿ ಎಸ್ಯುವಿ (SUV)ಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಹೊರತಾಗಿಯೂ ಇದರ ಸಣ್ಣ ಕಾರುಗಳು ಮಾರುಕಟ್ಟೆಯಲ್ಲಿ ಬೇಡಿಕೆ ಉಳಿಸಿಕೊಂಡಿವೆ.
ಎಸ್ಯುವಿಗಳ ಬೇಡಿಕೆ ಹೆಚ್ಚಳ ಸಣ್ಣ ಕಾರುಗಳ ಮಾರುಕಟ್ಟೆಗೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ  ಎಂದು ಕಂಪನಿ ವಿಶ್ವಾಸ ಹೊಂದಿದೆ. ಕಂಪನಿಯು ಈ ವರ್ಷ ಹೊಸ ತಲೆಮಾರಿನ ಸೆಲೆರಿಯೊ (Celerio) ಮತ್ತು ಆಲ್ಟೊ ಕೆ10 (Alto K10) ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಈ ವರ್ಷ ಹಾಗೂ ಮುಂದಿನ ವರ್ಷದಲ್ಲಿ ಕೂಡ ಹೊಸ ಕಾರುಗಳ ಬಿಡುಗಡೆಗೆ ಸಜ್ಜಾಗಿರುವ ಮಾರುತಿ ಸುಜುಕಿ, 2024 ರಲ್ಲಿ ಹೊಸ ತಲೆಮಾರಿನ ಸ್ವಿಫ್ಟ್  (Swift) ಹ್ಯಾಚ್ಬ್ಯಾಕ್ ಮತ್ತು ಡಿಜೈರ್ (Dzire) ಕಾಂಪ್ಯಾಕ್ಟ್ ಸೆಡಾನ್ ಅನ್ನು ಹೊರತರಲಿದೆ. ಇವುಗಳಲ್ಲಿ, ಕಾರು ತಯಾರಕರು ಬಲವಾದ ಹೈಬ್ರಿಡ್ ತಂತ್ರಜ್ಞಾನ ಮತ್ತು ಮೈಲೇಜ್ ನೀಡುವ ಗುರಿ ಹೊಂದಿದ್ದಾರೆ.
2024 ರ ಮಾರುತಿ ಸ್ವಿಫ್ಟ್ ಮತ್ತು ಡಿಜೈರ್ ಅನ್ನು ಹೊಸ 1.2 ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಟೊಯೋಟಾದ  (Toyota) ಪ್ರಬಲ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ ಎಂದು ವರದಿಯಾಗಿದೆ., ಮಾರುತಿ ಗ್ರ್ಯಾಂಡ್ ವಿಟಾರಾ ಬಲವಾದ ಹೈಬ್ರಿಡ್ ತಂತ್ರಜ್ಞಾನವನ್ನು ನೀಡುವ ಬ್ರ್ಯಾಂಡ್ನ ಮೊದಲ ಮಾದರಿಯಾಗಿದೆ. 

Latest Videos

undefined

ಮಾಧ್ಯಮ ವರದಿಯ ಪ್ರಕಾರ, ಹೊಸ ಸ್ವಿಫ್ಟ್ ಮತ್ತು ಡಿಜೈರ್ 35-40kmpl ಮೈಲೇಜ್  ನೀಡಲಿದೆ. ಇದು ನಿಜವಾದಲ್ಲಿ, ಈ ಎರಡೂ ಮಾದರಿಗಳು ದೇಶದ ಅತ್ಯಂತ ಇಂಧನ ದಕ್ಷತೆಯ ವಾಹನಗಳಾಗಲಿವೆ. ಈ ಹೊಸ ತಂತ್ರಜ್ಞಾನ, ಸೌಲಭ್ಯಗಳೊಂದಿಗೆ, ಹೊಸ ಸ್ವಿಫ್ಟ್ ಮತ್ತು ಡಿಜೈರ್ ಮುಂಬರುವ ಕಾರ್ಪೊರೇಟ್ ಸರಾಸರಿ ಇಂಧನ ಆರ್ಥಿಕತೆಯ (CAFÉ II) ಮಾನದಂಡಗಳನ್ನು ಪೂರೈಸುತ್ತದೆ.

ಇದನ್ನೂ ಓದಿ: 34 ಕಿ.ಮೀ ಮೈಲೇಜ್, ಕೈಗೆಟುಕುವ ದರದಲ್ಲಿ ಮಾರುತಿ ಅಲ್ಟೋ ಕೆ10 CNG ಕಾರು ಬಿಡುಗಡೆ!

ಪ್ರಸ್ತುತ, ಮಾರುತಿ ಸ್ವಿಫ್ಟ್ ಮತ್ತು ಡಿಜೈರ್ 1.2L, 4-ಸಿಲಿಂಡರ್ K12N ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ನೊಂದಿಗೆ ಲಭ್ಯವಿದೆ. ಮೋಟಾರ್ 90 ಬಿಎಚ್ಪಿ (bhp) ಮತ್ತು 113(ಎನ್ಎಂ)Nm ಟಾರ್ಕ್ನ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ (AMT) ಗೇರ್ಬಾಕ್ಸ್ನೊಂದಿಗೆ ಕೂಡ ಬರಲಿದೆ. ಮಾನ್ಯುಯಲ್ ಆವೃತ್ತಿಯು 23.30 ಕಿಮೀ (kmpl) ಮೈಲೇಜ್ ನೀಡುತ್ತದೆ ಮತ್ತು ಆಟೊಮೆಟಿಕ್ ವೇರಿಯಂಟ್ 21.12 ಕಿಮೀ (kmpl) ಮೈಲೇಜ್ನ ಭರವಸೆ ನೀಡುತ್ತದೆ. ಎರಡೂ ಮಾದರಿಗಳು ಸಿಎನ್ಜಿ ಇಂಧನ ಆಯ್ಕೆಯೊಂದಿಗೆ ಲಭ್ಯವಿದೆ.

ಇನ್ನು ಬೆಲೆಯ ವಿಷಯಕ್ಕೆ ಬಂದರೆ, 2024ರ ಮಾರುತಿ ಸ್ವಿಫ್ಟ್ ಮತ್ತು ಡಿಜೈರ್ ಸ್ಟ್ರಾಂಗ್ ಹೈಬ್ರಿಡ್ ಆವೃತ್ತಿಗಳು ತಮ್ಮ ಸ್ಟ್ಯಾಂಡರ್ಡ್ ಪೆಟ್ರೋಲ್ ವಾಹಗಳಿಗಿಂತ ಸುಮಾರು 1 ಲಕ್ಷ ರೂ.ಗಳಿಂದ 1.50 ಲಕ್ಷ ರೂ. ಹೆಚ್ಚಿನ ಬೆಲೆಯೊಂದಿಗೆ ಬರಲಿವೆ. ಸ್ವಿಫ್ಟ್ ಮತ್ತು ಡಿಜೈರ್ ಪ್ರಸ್ತುತ ಕ್ರಮವಾಗಿ 5.92 ಲಕ್ಷ  ರೂ.ಗಳಿಂದ 8.85 ಲಕ್ಷ ರೂ. ಮತ್ತು 6.24 ಲಕ್ಷ ರೂ.ಗಳಿಂದ 9.18 ಲಕ್ಷ ರೂ.ಗಳಷ್ಟಿದೆ. ಇದು ಐದು ಆಸನಗಳ ಕಾರಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರುತಿ ಸ್ವಿಫ್ಟ್ 11 ವೇರಿಯಂಟ್ಗಳಲ್ಲಿ ಲಭ್ಯವಿದೆ.  ಸ್ವಿಫ್ಟ್ನ ಮೂಲ ಮಾದರಿಯಾದ ಎಲ್ಎಕ್ಸ್ಐ (LXI) ಮತ್ತು ಮಾರುತಿ ಸ್ವಿಫ್ಟ್ ಝೆಡ್ಎಕ್ಸ್ಐ (ZXI) ಪ್ಲಸ್  ಡಿಟಿ ಎಎಂಟಿ (DT AMT) 8.85 ಲಕ್ಷ ರೂ ಬೆಲೆಯಲ್ಲಿ ಬರುತ್ತದೆ. 

click me!