ಬೆಂಗಳೂರು(ಜೂ.04): ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಸರ್ಕಾರ ಮತ್ತು ರಾಜ್ಯ ಆರೋಗ್ಯ ಇಲಾಖೆಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ನೀಡುತ್ತಿದ್ದ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿದೆ. ಇದೀಗ ಟೊಯೋಟಾ ಕಿರ್ಲೋಸ್ಕರ್ ಇದೀಗ ಆಕ್ಸಿಜನ್ ಸಾಂದ್ರಕವನ್ನು ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರಿಗೆ ಹಸ್ತಾಂತರಿಸಿತು.
ಟೊಯೋಟಾ ಕಿರ್ಲೋಸ್ಕರ್ ಉದ್ಯೋಗಿಗಳಿಗೆ ಸ್ಥಳದಲ್ಲೇ ಕೋವಿಡ್ ಲಸಿಕೆ!.
undefined
ಎರಡನೇ ಅಲೆ ಕಾಣಿಸಿಕೊಂಡಾಗಿನಿಂದ ಈವರೆಗೆ, ಟಿಕೆಎಂ 50 ಆಮ್ಲಜನಕ ಸಾಂದ್ರಕಗಳನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ 80 ಘಟಕಗಳನ್ನು ಒದಗಿಸಲಿದೆ. . ರಾಮನಗರ ಜಿಲ್ಲೆಯ ಆರೋಗ್ಯ ಇಲಾಖೆಗೆ ಸಾರಿಗೆ ಸೌಲಭ್ಯವನ್ನು ಒದಗಿಸುವ ಮೂಲಕ ಲಸಿಕೆ ಅಭಿಯಾನ ಗರಿಷ್ಠ ಪ್ರಮಾಣದಲ್ಲಿ ಯಶಸ್ವಿಯಾಗುವುದಕ್ಕೆ ಕಂಪನಿಯು ತನ್ನ ಬೆಂಬಲವನ್ನು ವಿಸ್ತರಿಸುವುದಾಗಿ ಘೋಷಿಸಿದೆ.
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದರಲ್ಲಿ ಮತ್ತು ಸದಾ ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಕ್ರಮಗಳನ್ನು ಘೋಷಿಸುವಲ್ಲಿ ಸರ್ಕಾರ ಮತ್ತು ಸಂಬಂಧಿತ ಆರೋಗ್ಯ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಿಂದ ವಿಶೇಷವಾಗಿ ಕಾರ್ಪೊರೇಟ್ ಗಳಿಂದ ನಮಗೆ ದೊರೆತ ಬೆಂಬಲವು ವ್ಯಾಪಕವಾಗಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ನೆರವಾಯಿತು. ಸರ್ಕಾರದ ಪ್ರಯತ್ನಗಳಿಗೆ ಬಹಳ ಪ್ರೋತ್ಸಾಹದಾಯಕವಾಗಿತ್ತು ಎಂದು ಡಾ. ಕೆ. ಸುಧಾಕರ್ ಹೇಳಿದರು.
ಜಪಾನ್ನಲ್ಲಿ 12-15 ವರ್ಷದ ಮಕ್ಕಳಿಗೆ ಫೈಝರ್ ಲಸಿಕೆ!.
ವ್ಯಾಪ್ತಿಯಲ್ಲಿ ವಿವಿಧ ಸಮುದಾಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಟಿಕೆಎಂ ಯಾವಾಗಲೂ ಉತ್ತಮ ಬೆಂಬಲದ ಮೂಲವಾಗಿದೆ. ಹೀಗಾಗಿ ನಮ್ಮ ಕೇಂದ್ರೀಕೃತ ಪ್ರಯತ್ನಗಳಿಗೆ ಪೂರಕವಾಗಿದ್ದು, ಪ್ರಸ್ತುತ ಕೊಡುಗೆಯು ಸಾಂಕ್ರಾಮಿಕ ಮತ್ತು ಭವಿಷ್ಯದಲ್ಲಿ ತುರ್ತು ಚಿಕಿತ್ಸಾ ಅವಶ್ಯಕತೆಗಳನ್ನು ಪೋಷಿಸುತ್ತದೆ ಎಂದರು.
ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಟೊಯೋಟಾ ಜನರು ಮತ್ತು ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಬಿಕ್ಕಟ್ಟಿಗೆ ಪೂರ್ವಭಾವಿಯಾಗಿ ಸ್ಪಂದಿಸುತ್ತಿದೆ. ಈ ಅಗತ್ಯದ ಸಮಯದಲ್ಲಿ ಬಿಕ್ಕಟ್ಟನ್ನು ಶಮನಗೊಳಿ ಮುಂದೆ ಸಾಗಲು ನಮ್ಮ ಸ್ಥಳೀಯ ಸಮುದಾಯಗಳಿಗೆ ಬೆಂಬಲ ನೀಡುವುದು ಮತ್ತು ಅಗತ್ಯ ನೆರವು ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಜವಾಬ್ದಾರಿಯುತ ಕಾರ್ಪೊರೇಟ್ ಆಗಿ, ನಾವು ಉದಯೋನ್ಮುಖ ಅಗತ್ಯಗಳನ್ನು ವಿಶ್ಲೇಷಿಸುವುದನ್ನು ಮುಂದುವರಿಸುತ್ತೇವೆ ಮತ್ತು ಸಂಬಂಧಿತ ಸರ್ಕಾರಿ ಇಲಾಖೆಗಳಿಗೆ ಸಹಾಯ ಮಾಡಲು ಅಗತ್ಯ ಕ್ರಮಗಳನ್ನು ತರುತ್ತೇವೆ. ಸರ್ಕಾರ ಮತ್ತು ಸ್ಟೇಕ್ ಹೋಲ್ಡರ್ಸ್ ನ ಸ್ಥಿರ ಮತ್ತು ಸಮಗ್ರ ಪ್ರಯತ್ನಗಳೊಂದಿಗೆ, ಬಿಕ್ಕಟ್ಟು ಶೀಘ್ರದಲ್ಲೇ ಶಮನವಾಗಲಿದೆ ಎಂದು ನಾವು ಆಶಿಸುತ್ತೇವೆ ಎಂದು ಟಿಕೆಎಂನ ಕಾರ್ಪೊರೇಟ್ ವ್ಯವಹಾರಗಳು ಮತ್ತು ಆಡಳಿತದ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಹೇಳಿದರು.