ಮಾರುತಿ ಸುಜುಕಿ ಇನ್‌ವಿಕ್ಟೋ ನಾಳೆ ಬಿಡುಗಡೆ, ಇದು ಟೊಯೋಟಾ ಇನ್ನೋವಾ ಕ್ರಾಸ್ ಬ್ಯಾಡ್ಜ್ ಕಾರು!

By Suvarna News  |  First Published Jul 4, 2023, 11:43 AM IST

ಮಾರುತಿ ಸುಜುಕಿ ಹಾಗೂ ಟೋಯೋಟಾ ಕಂಪನಿಗಳು ತಮ್ಮ ತಮ್ಮ ಕಾರುಗಳನ್ನು ಕ್ರಾಸ್‌ಬ್ಯಾಡ್ಜ್ ಮೂಲಕ ಬಿಡುಗಡೆ ಮಾಡಿದೆ. ಈಗಾಗಲೇ ಮಾರುತಿಯ ಬಲೆನೋ ಕಾರನ್ನು ಟೋಯೋಟಾ ಗ್ಲಾಂಜಾ ಕಾರಾಗಿ ಬಿಡುಗಡೆ ಮಾಡಿದೆ. ಇದೀಗ ಮಾರುತಿ ಸುಜುಕಿ, ಟೋಯೋಟಾ ಇನ್ನೋವಾ ಕಾರನ್ನು ಇನ್‌ವಿಕ್ಟೋ ಕಾರಾಗಿ ನಾಳೆ ಬಿಡುಗಡೆ ಮಾಡುತ್ತಿದೆ.


ನವದೆಹಲಿ(ಜು.04) ಮಾರುತಿ ಸುಜುಕಿ ಇದೀಗ 7 ಸೀಟರ್ ಕಾರು ಇನ್‌ವಿಕ್ಟೋ ಬಿಡುಗಡೆ ಮಾಡುತ್ತಿದೆ. ಇದು ಟೋಯೋಟಾ ಇನ್ನೋವಾ ಕಾರನ್ನೇ ಕ್ರಾಸ್‌ಬ್ಯಾಡ್ಜ್ ಮೂಲಕ ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಕಾರಿನ ಟೀಸರ್ ಬಿಡುಗಡೆ ಮಾಡಿದೆ. ಆದರೆ ಕಾರಿನ ಡಿಸೈನ್, ಇಂಟೀರಿಯರ್ ಸೇರಿದಂತೆ ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ. MPV ವಿಭಾಗದಲ್ಲಿ ಮಾರುತಿ ಸುಜುಕಿ ಇನ್‌ವಿಕ್ಟೋ ಮೂಲಕ ಹೊಸ ಕ್ರಾಂತಿ ಸೃಷ್ಟಿಸುವ ಸಾದ್ಯತೆ ದಟ್ಟವಾಗಿದೆ. ಸದ್ಯ ಮಾರುತಿ ಸುಜುಕಿ ಬ್ರ್ಯಾಂಡ್ ಎರ್ಟಿಗಾ, XL6 ಕಾರುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇದೀಗ ಇನ್ನೋವಾ ಮಾದರಿಯಲ್ಲೇ 7 ಸೀಟರ್ ಕಾರನ್ನು ಮಾರುತಿ ಬಿಡುಗಡೆ ಮಾಡುತ್ತಿದೆ.

ವಿನ್ಯಾಸದ ವಿಚಾರದಲ್ಲಿ ಕೆಲ ಬದಲಾವಣೆಗಳಿವೆ. ಟೋಯೋಟಾ ಇನ್ನೋವಾ ಕಾರಿಗೂ, ಇದೀಗ ಬಿಡುಗಡೆಯಾಗುತ್ತಿರುವ ಮಾರುತಿ ಸುಜುಕಿ ಇನ್‌ವಿಕ್ಟೋ ಕಾರಿಗೆ ಸಣ್ಣ ಬದಲಾವಣೆ ಇರಲಿದೆ. ಮಾರುತಿಯ ನೂತನ ಕಾರುಗಳಲ್ಲಿರುವ ಹೊರಿಜಾಂಟಲ್ ಕ್ರೋಮ್ ಸ್ಲಾಟ್ಸ್ ಮೂಲಕ ಮುಂಭಾಗ ಬಂಪರ್ ಹಾಗೂ ವಿನ್ಯಾಸ ಬದಲಾಗಲಿದೆ. ಡೈಮಂಡ್ ಕಲ್ ಆಲಾಯ್ ವೀಲ್ ಸೇರಿದಂತೆ ಇನ್ನೋವದಲ್ಲಿ ಇರದೇ ಇರುವ ಫೀಚರ್ಸ್ ಕೂಡ ಇನ್‌ವಿಕ್ಟೋದಲ್ಲಿ ಇರಲಿದೆ.

Tap to resize

Latest Videos

undefined

ಮಾರುತಿಯಿಂದ ಮತ್ತೊಂದು ಬಂಪರ್ ಕೊಡುಗೆ, 4.80 ಲಕ್ಷ ರೂಗೆ ಟೂರ್ H1 ಕಾರು ಬಿಡುಗಡೆ!

ಹಿಂಭಾಗದಲ್ಲಿ ಹೊಸ ಟೈಲ್ ಎಲ್‌ಇಡಿ ಲೈಟ್ ಆಕರ್ಷಕಣೆಯನ್ನು ಹೆಚ್ಚಿಸಲಿದೆ. ಹಿಂಭಾಗದಲ್ಲಿ ಈ ಬದಲಾವಣೆ ಹೊರತು ಪಡಿಸಿದರೆ ಇನ್ನುಳಿದಂತೆ ಇನ್ನೋವಾ ಕಾರಿಗೂ ಇನ್‌ವಿಕ್ಟೋಗೂ ಹೆಚ್ಚಿನ ಬದಲಾವಣೆ ಇಲ್ಲ. ಇನ್ನು ಟೋಯೋಟಾ ಲೋಗೋ ಬದಲು ಮಾರುತಿ ಸುಜುಕಿ ಲೋಗೋ ಬರಲಿದೆ. ಇನ್ನು ಒಂದು ವೇರಿಯೆಂಟ್‌ನಲ್ಲಿ ಮಾತ್ರ ಈ ಕಾರು ಲಭ್ಯವಿದೆ. ಆಲ್ಫಾ ಪ್ಲಸ್ ವೇರಿಯೆಂಟ್‌ನಲ್ಲಿ ನೂತನ ಮಾರುತಿ ಸುಜುಕಿ ಇನ್‌ವಿಕ್ಟೋ ಕಾರು ಲಭ್ಯವಿದೆ.

ಪನೋರಮಿಕ್ ಸನ್‌ರೂಫ್, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆ್ಯಪಲ್ ಕಾರ್‌ಪ್ಲೇ ಹಾಗೂ ಆ್ಯಂಡ್ರಾಯ್ಡ್ ಕನೆಕ್ಟಿವಿಟಿ, 360 ಡಿಗ್ರಿ ಕ್ಯಾಮಾರ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. 2.0 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಹೈಬ್ರಿಡ್ ಆಯ್ಕೆಯೂ ಲಭ್ಯವಿದೆ. ನೂತನ ಕಾರಿನ ಬೆಲೆ 18.55 ಲಕ್ಷ ರೂಪಾಯಿಂದ 29.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.

ಕೈಗೆಟುಕುವ ಬೆಲೆಯಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ SUV ಕಾರು ಬಿಡುಗಡೆ!

ಹಲವು ವಿಶೇಷತೆ, ಸಾಕಷ್ಟು ಕತೂಹಲದೊಂದಿಗೆ ಮಾರುತಿ ಸುಜುಕಿ ಹಾಗೂ ಟೊಯೊಟಾ ಕಂಪನಿಗಳು ಸಹಭಾಗಿತ್ವದ 7 ಸೀಟರ್‌ನ ಹೈಬ್ರಿಡ್‌ ಎಂವಿಪಿ ಜುಲೈ 5ರಂದು ಭಾರದಲ್ಲಿ ಬಿಡುಗಡೆಯಾಗುತ್ತಿದೆ. ಇದು ಟೊಯೊಟಾ ಹೈಕ್ರಾಸ್‌ ಮಾದರಿಯನ್ನು ಹೊಂದಿರಲಿದೆ ಎಂದು ಕಂಪನಿ ಹೇಳಿದೆ. ಈ ಕಾರು ಹೈಕ್ರಾಸ್‌ ಮಾದರಿಯಲ್ಲಿ ಒಂದಷ್ಟುಬದಲಾವಣೆಗಳನ್ನು ಹೊಂದರಲಿದೆ. ಮಾರುತಿ ಸುಜುಕಿಯ ಕಾರಿನಲ್ಲಿ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್‌ ಸೀಟನ್ನು ಆಯ್ಕೆಯಾಗಿ ನೀಡುವ ಸಾಧ್ಯತೆ ಇದೆ. ಅಲ್ಲದೇ ಮುಂಬದಿಯ ಗ್ರಿಲ್‌, ಅಲಾಯ್‌ ವೀಲ್‌ಗಳ ರಚನೆಯನ್ನು ಬದಲಾಗಲಿದೆ.   

click me!