ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ, 2024ರಲ್ಲಿ ಟಾಟಾ ಹ್ಯಾರಿಯರ್ EV ಬಿಡುಗಡೆ!

By Suvarna News  |  First Published Jul 3, 2023, 3:11 PM IST

ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಗರಿಷ್ಠ ಪಾಲು ಹೊಂದಿದೆ. ಇದೀಗ ಸಂಪೂರ್ಣ ಆಕ್ರಮಿಸಿಕೊಳ್ಳಲು ಟಾಟಾ ಸಜ್ಜಾಗಿದೆ. ಟಾಟಾ ಮೋಟಾರ್ಸ್ ಇದೀಗ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರು ಟೀಸರ್ ಬಿಡುಗಡೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಮೈಲೇಜ್ ರೇಂಜ್ ಸೇರಿದಂತೆ ಹಲವು ವಿಶೇಷತೆಗಳು ಈ  ಕಾರಿನಲ್ಲಿದೆ.
 


ಮುಂಬೈ(ಜು.03) ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಟಾಟಾ ಮೋಟಾರ್ಸ್ ಭಾರತದಲ್ಲಿ ಅಗ್ರ ಸ್ಥಾನ ಪಡೆದಿದೆ. ಟಿಯಾಗೋ, ಟಿಗೋರ್, ನೆಕ್ಸಾನ್, ನೆಕ್ಸಾನ್ ಮ್ಯಾಕ್ಸ್ ಸೇರಿದಂತೆ ಸಾಲು ಸಾಲು ಎಲೆಕ್ಟ್ರಿಕ್ ಕಾರುಗಳ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಟಾಟಾ ಮೋಟಾರ್ಸ್ ಇದೀಗ ಮತ್ತೊಂದು ಕ್ರಾಂತಿಗೆ ಮುಂದಾಗಿದೆ. ಟಾಟಾ ಹ್ಯಾರಿಯರ್ ಇದೀಗ ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಗೆ ತಯಾರಾಗಿದೆ. ನೂತನ ಹ್ಯಾರಿಯರ್ ಇವಿ ಕಾರಿನ ಟೀಸರ್ ಬಿಡುಗಡೆಯಾಗಿದೆ. ಅತ್ಯಾಧುನಿಕ ಡಿಸೈನ್, ಆಕರ್ಷಕ ನೋಟ, ತಂತ್ರಜ್ಞಾನ ಸೇರಿದಂತೆ ಹಲುವ ವಿಶೇಷತೆಗಳು ಈ ಕಾರಿನಲ್ಲಿದೆ. ಟಾಟಾ ಮೋಟಾರ್ಸ್ ಇದೀಗ ಹ್ಯಾರಿಯರ್ ಇವಿ ಅದಿಕೃತ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಮೊದಲ ನೋಟದಲ್ಲೇ ಕಣ್ಣು ಕುಕ್ಕುವ ವಿನ್ಯಾಸ ಹ್ಯಾರಿಯರ್ ಇವಿ ಕೂತಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಹ್ಯಾರಿಯರ್ ಇವಿ ಕಾನ್ಸೆಪ್ಟ್ ಕಾರನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿತ್ತು. ಇದೀಗ ಟೀಸರ್ ಬಿಡುಗಡೆಯಾಗಿದೆ. ಟಾಟಾ ಮೋಟಾರ್ಸ್ ಪ್ರಕಾರ 2024ರ ಆರಂಭದಲ್ಲೇ ನೂತನ ಹ್ಯಾರಿಯರ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಸ್ಪ್ಲಿಡ್ ಹೆಡ್‌ಲೈಟ್ ಡಿಸೈನ್, ಅಗಲ ಹಾಗೂ ಮುಂಭಾಗ ಆವರಿಸಿಕೊಳ್ಳುವ ರನ್ನಿಂಗ್ ಎಲ್‌ಇಡಿ ಬಾರ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಹ್ಯಾರಿಯರ್ ಇವಿ ಕಾರು 400 ರಿಂದ 500 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಸುಲಭ ಚಾರ್ಜಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ತಂತ್ರಜ್ಞಾನಗಳು ಈ ಕಾರಿನಲ್ಲಿದೆ. 

Tap to resize

Latest Videos

undefined

ನಾಲ್ಕೇ ತಿಂಗಳಲ್ಲಿ ದಾಖಲೆ ಬರೆದ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು!

ಟಾಟಾ ಹ್ಯಾರಿಯರ್ ಇವಿ ಬೆಲೆಯ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಭಾರತದ ಪ್ರೀಮಿಯಂ ಹ್ಯಾರಿಯರ್ ವಿಭಾಗದಲ್ಲಿ ಕೈಗೆಟುಕುವ ದರದಲ್ಲಿ ಕಾರು ಲಭ್ಯವಾಗಲಿದೆ. ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಕಾರು ಆಕರ್ಷಕ ಬಣ್ಣದಲ್ಲಿ ಲಭ್ಯವಾಗಲಿದೆ. 

ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಅಗ್ರಗಣ್ಯನಾಗಿದೆ. ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಇತ್ತೀಚೆಗೆ ಟಾಟಾ ಟಿಯಾಗೋ ಇವಿ ಬಿಡುಗಡೆ ಮಾಡಿದೆ. 8.45 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ. ಇನ್ನು ಟಿಗೋರ್ ಎಲೆಕ್ಟ್ರಿಕ್ ಕಾರು, ನೆಕ್ಸಾನ್ ಇವಿ, ನೆಕ್ಸಾನ್ ಮ್ಯಾಕ್ಸ್ ಕಾರುಗಳು ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. 

ಕೈಗೆಟುಕವ ದರ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಹೊಸ ಬೆಲೆ ಪ್ರಕಟ, ಇಲ್ಲಿದೆ ಸಂಪೂರ್ಣ ಪಟ್ಟಿ!

ಇತ್ತೀಚೆಗೆ ಟಾಟಾ ಮೋಟಾರ್ಸ್ ಹ್ಯಾರಿಯರ್ ಅಪ್‌ಗ್ರೇಡ್ ವರ್ಶನ್ ಬಿಡುಗಡೆ ಮಾಡಿದೆ. ಟಾಟಾ ಮೋಟಾರ್ಸ್‌ ಇಂಡಿಯಾ ಎಕ್ಸ್‌ಟಿಎ ಪ್ಲಸ್‌ ಆವೃತ್ತಿಯ ಹ್ಯಾರಿಯರ್‌ ಮತ್ತು ಸಫಾರಿ ಎಸ್‌ಯುವಿಗಳನ್ನು ಬಿಡುಗಡೆ ಮಾಡಿದೆ. 6 ಸ್ಪೀಡ್‌ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಶನ್‌, ಪನೋರಮಿಕ್‌ ಸನ್‌ರೂಫ್‌ ವಿನ್ಯಾಸಗಳಲ್ಲಿ ಈ ಕಾರುಗಳು ಬಿಡುಗಡೆಯಾಗಿವೆ. 2.0 ಡೀಸೆಲ್‌ ಇಂಜಿನ್‌ ಇರುವ ಈ ಕಾರು ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌, ಆರ್‌17 ಅಲಾಯ್‌ ವೀಲ್ಸ್‌ ಇತ್ಯಾದಿ ಫೀಚರ್‌ಗಳನ್ನು ಹೊಂದಿದೆ. ಮ್ಯೂಸಿಕ್‌ ಎನ್‌ಜಾಯ್‌ ಮಾಡುವವರಿಗೆ ಒಟ್ಟು 8 ಸ್ಪೀಕರ್‌ಗಳಿವೆ. ಟಚ್‌ಸ್ಕ್ರೀನ್‌ ಇನ್‌ಫೋಟೈನ್‌ಮೆಂಟ್‌ ಸಿಸ್ಟಮ್‌ ಇದೆ. ಆಟೊಮ್ಯಾಟಿಕ್‌ ಆಗಿ ಟೆಂಪರೇಚರ್‌ ಕಂಟ್ರೋಲ್‌ ಆಗುತ್ತೆ. ರೈನ್‌ ಸೆನ್ಸಿಂಗ್‌ ಕ್ಲೋಶರ್‌ ಇರುವ ಕಾರಣ ಮಂಜು, ಮಳೆಯಲ್ಲೂ ಡ್ರೈವ್‌ ಎನ್‌ಜಾಯ್‌ ಮಾಡಬಹುದು.
 

click me!