ಭಾರತದಲ್ಲಿ ಓಟ ನಿಲ್ಲಿಸಿದ ಟೊಯೋಟಾ ಇಟಿಯೋಸ್, 10 ವರ್ಷಗಳ ಪಯಣಕ್ಕೆ ಬಿತ್ತು ಬ್ರೇಕ್!

Suvarna News   | Asianet News
Published : Apr 06, 2020, 03:32 PM IST
ಭಾರತದಲ್ಲಿ ಓಟ ನಿಲ್ಲಿಸಿದ ಟೊಯೋಟಾ ಇಟಿಯೋಸ್, 10 ವರ್ಷಗಳ ಪಯಣಕ್ಕೆ ಬಿತ್ತು ಬ್ರೇಕ್!

ಸಾರಾಂಶ

ಟೊಯೋಟಾ ಕಂಪನಿಯ ಇಟಿಯೋಸ್ ಕಾರು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ.  ಆರಾಮದಾಯಕ ಪ್ರಯಾಣಕ್ಕೆ ಹೇಳಿಮಾಡಿಸಿದ ಕಾರು. ಬೆಂಗಳೂರಿನಲ್ಲಿ ಕ್ಯಾಬ್ ಬುಕ್ ಮಾಡಿದರೆ ಇಟಿಯೋಸ್ ಕಾರು ನಿಮ್ಮ ಮುಂದೆ ಬಂದು ನಿಲ್ಲುತ್ತೆ. ಕಮರ್ಷಿಯಲ್ ವಾಹನವಾಗಿಯೂ ಇಟಿಯೋಸ್ ಹೆಚ್ಚು ಜನಪ್ರಿಯ. ಇದೀಗ ಭಾರತದಲ್ಲಿ ಇಟಿಯೋಸ್ ಕಾರು ಸ್ಥಗಿತಗೊಂಡಿದೆ.

ಬೆಂಗಳೂರು(ಏ.06) ಜಪಾನ್ ಆಟೋಮೇಕರ್ ಟೊಯೋಟಾ ಕಂಪನಿಯ ಇಟಿಯೋಸ್ ಕಾರು ಭಾರತದಲ್ಲಿ ಓಟ ನಿಲ್ಲಿಸಿದೆ. ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಉತ್ಪಾದನಾ ಘಟಕದಲ್ಲಿ ಕಳೆದ ತಿಂಗಳು ಅಂತಿಮ ಇಟಿಯೋಸ್ ಕಾರು ಉತ್ಪಾದನೆಗೊಂಡಿತು. ಮಾರ್ಚ್ ಆರಂಭದಲ್ಲೇ ಇಟಿಯೋಸ್ ಕಾರು ನಿರ್ಮಾಣ ಸ್ಥಗಿತಗೊಳಿಸಲಾಗಿದೆ. 

ಲಾಕ್‌ಡೌನ್‌ನಲ್ಲಿ ಕಾರು ಮೇಂಟೇನ್ ಸೀಕ್ರೆಟ್ ಕೊಟ್ಟ ಅಟೋ ಕಂಪನಿಗಳು

2010ರಲ್ಲಿ ಭಾರತದಲ್ಲಿ ಇಟಿಯೋಸ್ ಸೆಡಾನ್ ಕಾರು ಬಿಡುಗಡೆ ಮಾಡಲಾಗಿದೆ. ಇದರ ಬೆನ್ನಲ್ಲೇ 2011ರಲ್ಲಿ ಇಟಿಯೋಸ್ ಲಿವಾ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆ ಮಾಡಿತ್ತು. ಬಳಿಕ ಕೆಲ ಅಪ್‌ಗ್ರೇಡ್‌ಗಳೊಂದಿಗೆ ಇಟಿಯೋಸ್ ಭಾರತದ ರಸ್ತೆಗಳಲ್ಲಿ ಯಶಸ್ವಿ ಪಯಣ ನಡೆಸಿತ್ತು. 10 ವರ್ಷಗಳಲ್ಲಿ 4.48 ಲಕ್ಷ ಇಟಿಯೋಸ್ ಕಾರು ಮಾರಾಟವಾಗಿದೆ. ಇನ್ನು 1.31 ಲಕ್ಷ ಕಾರುಗಳನ್ನು ರಫ್ತು ಮಾಡಲಾಗಿದೆ.

ಲಾಕ್‌ಡೌನ್ ನಡುವೆ ನೂತನ ಹ್ಯುಂಡೈ ವರ್ನಾ ಫೇಸ್‌ಲಿಫ್ಟ್ ಕಾರು ಬಿಡುಗಡೆ!

ಇಟಿಯೋಸ್ ಕಾರಿನೊಂದಿಗೆ ಕೊಂಚ ಲಕ್ಸುರಿ ಕಾರು ಎಂದೇ ಗುರುತಿಸಿಕೊಂಡಿದ್ದ ಟೊಯೋಟಾ ಅಲ್ಟಿಸ್ ಕಾರು ಕೂಡ ಸ್ಥಗಿತಗೊಂಡಿದೆ. 2003ರಿಂದ 2020ರ ಮಾರ್ಚ್ ವರೆಗೆ ಟೊಯೋಟಾ ಅಲ್ಟೀಸ್ 1.16 ಲಕ್ಷ ಕಾರುಗಳು ಮಾರಾಟವಾಗಿದೆ. ಟೊಯೋಟಾ ಇಟಿಯೋಸ್ ಸೆಡಾನ್, ಲಿವಾ ಹ್ಯಾಚ್‌ಬ್ಯಾಕ್ ಹಾಗೂ ಕೊರೋಲಾ ಅಲ್ಟೀಸ್ ಕಾರಿಗೆ ಬದಲಾಗಿ ಟೊಯೋಟಾ ಶೀಘ್ರದಲ್ಲೇ ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ.

BS6 ನಿಮಯಕ್ಕೆ ಇಟಿಯೋಸ್, ಅಲ್ಟೀಸ್ ಕಾರುಗಳನ್ನು ಪರಿವರ್ತಿಸಿಲ್ಲ. ನಿಯಮದ ಪ್ರಕಾರ BS4 ಕಾರುಗಳು ಏಪ್ರಿಲ್ 1, 2020ರಿಂದ ಮಾರಾಟ ಮಾಡುವಂತಿಲ್ಲ. 
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ