ಚಳಿಗಾಲ (Winter) ಬಂದರೆ ಸಾಕು, ಬೆಳಗ್ಗೆ ಬೈಕ್ (Bike) ಅಥವಾ ಕಾರ್ (Car) ಸ್ಟಾರ್ಟ್ ಮಾಡುವುದೇ ದೊಡ್ಡ ಸಮಸ್ಯೆ ಎನಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಬೆಳಗಿನ ಅವಧಿಯಲ್ಲಿ ವಾಹನ ಸರಾಗವಾಗಿ ಸ್ಟಾರ್ ಆಗುವುದೇ ಇಲ್ಲ. ಹಾಗಾಗಿ, ವಾತಾವರಣದಲ್ಲಿ ಹೆಚ್ಚಿರುವ ತೇವಾಂಶವು ಇದಕ್ಕೆ ಕಾರಣವಾಗಿರುತ್ತೆ. ಆದರೆ, ಕೆಲವು ಸಲಹೆಗಳನ್ನು ಪಾಲಿಸಿದರೆ, ಈ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು.
ಚಳಿಗಾಲ (Winter)ದಲ್ಲಿ ಕಾರು (Car) ಸ್ಟಾರ್ಟಿಂಗ್ ಬಹುತೇಕ ತೊಂದರೆಯಾಗುತ್ತದೆ. ಚಳಿಗಾಲದ ಮುಂಜಾನೆಗಳಲ್ಲಿ ಕಾರ್ ಆರಂಭಿಸುವುದೆಂದರೆ ಕೊಂಚ ತ್ರಾಸದಾಯಕವೇ ಸರಿ. ಇದಕ್ಕೆ ಕಾರಣ ಏನೆಂದರೆ, ಚಳಿಗಾಲದಲ್ಲಿ ಮಂಜಿನಿಂದಾಗಿ, ಎಂಜಿನ್ ಮತ್ತು ಸ್ಪಾರ್ಕ್ ಪ್ಲಗ್‌ನಲ್ಲಿ ತೇವಾಂಶವು ಉಂಟಾಗುತ್ತದೆ. ಪರಿಣಾಮ ಕಾರ್ ಎಂಜಿನ್ ತಕ್ಷಣಕ್ಕೆ ಸ್ಟಾರ್ಟ್ ಆಗುವುದಿಲ್ಲ. ಈ ಕಾರಣದಿಂದಾಗಿ, ಎಂಜಿನ್ ಬಿಸಿಯಾಗಲು ಸಮಯ ತೆಗೆದುಕೊಳ್ಳುತ್ತದೆ. ಈ ಸಮಸ್ಯೆಯನ್ನು ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಕಾಣಬಹುದು. ಕೆಲವು ವಿಷಯಗಳು, ಸಂಗತಿಗಳ ಬಗ್ಗೆ ಗಮನ ಹರಿಸಿದರೆ ಚಳಿಗಾಲದಲ್ಲೂ ಕಾರನ್ನು ಈಜೀಯಾಗಿ ಆರಂಭಿಸಬುಹದು.
ವಾಹನವನ್ನು ಗ್ಯಾರೇಜ್‌ನಲ್ಲಿ ನಿಲ್ಲಿಸಿ
ಅಸಲಿಗೆ, ಕಡಿಮೆ ತಾಪಮಾನ ಮತ್ತು ಗಾಳಿಯಲ್ಲಿ ತೇವಾಂಶದ ಕಾರಣದಿಗಳಿಂದಾಗಿ ಬ್ಯಾಟರಿಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಸೆಲ್ಫ್ ಸ್ಟಾರ್ಟಿಂಗ್ (Self-Starting) ವಾಹನಗಳು ಜಂಪ್-ಸ್ಟಾರ್ಟ್ (Jump Start) ಇಲ್ಲದೆ ಬೆಳಿಗ್ಗೆ ಪ್ರಾರಂಭವಾಗುವುದಿಲ್ಲ. ಇದಕ್ಕೆ ಸರಳ ಪರಿಹಾರ ಏನೆಂದರೆ, ಕಾರ(Car)ನ್ನು ಸಂಪೂರ್ಣವಾಗಿ ಮುಚ್ಚಿಡುವುದು, ಅಂದರೆ ಕವರ್ ಮಾಡುವುದು. ಗ್ಯಾರೇಜ್‌ಗೆ ತಂಪು ಗಾಳಿ ಬರುವುದನ್ನು ತಡೆಯಿರಿ. ಗ್ಯಾರೆಜಿನಿಂದ ಕಾರನ್ನು ಹೊರ ತೆಗೆಯುವ ಕೆಲವು ನಿಮಿಷದ ಮುಂಚೆ ಗ್ಯಾರೇಜ್‌ನ ಲೈಟ್ (Light) ಆನ್ ಮಾಡಿ ಇಡಿ. ಲೈಟ್ ಬೆಳಕಿನ ಶಾಖದಿಂದ ಕೊಂಚ ಮಟ್ಟಿಗೆ ಗ್ಯಾರೇಜ್‌ನಲ್ಲಿ ತೇವಾಂಶ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಮತ್ತೊಂದೆಡೆ, ಹಳೆಯ ಬ್ಯಾಟರಿಗಳು ಆಗಾಗ್ಗೆ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂಬುದನ್ನು ಮರೆಯ ಬಾರದು. ಅಲ್ಲದೆ, ನೀವು ಸರಿಯಾದ ಸಮಯದಲ್ಲಿ ಬ್ಯಾಟರಿಯನ್ನು ಬದಲಾಯಿಸಿದರೆ, ಈ ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬಹುದು.
undefined
Auto Arrivals: ನೆಕ್ಸ್ಟ್ ಜೆನ್ ಟಾಟಾ ಟಿಯಾಗೋ ಸೇರಿ 10 ಹೊಸ ವಾಹನಗಳು!
Break ಮತ್ತು Suspension ಸುಸ್ಥಿತಿಯಲ್ಲಿಟ್ಟುಕೊಳ್ಳಿ
ಚಳಿಗಾಲದಲ್ಲಿ ಕಾರಿನ ಬ್ರೇಕ್ (Break) ಮತ್ತು ಸಸ್ಪೆನ್ಷನ್ (Susupension)ಗಳನ್ನು ಆಗಾಗ ಪರಿಶೀಲಿಸುವುದು ಬಹಳ ಮುಖ್ಯ ಎನಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಮಂಜು (Fog) ಸಾಮಾನ್ಯ. ಈ ವೇಳೆ ಕಾರು ಒಡಿಸುವಾಗ ಮಂಜಿನಿಂದಾಗಿ ಮುಂಭಾಗದಿಂದ ಬರುವ ವಾಹನಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕ್ಷಣಾರ್ಧದಲ್ಲಿ ಬ್ರೇಕ್ ಅನ್ನು ಅನ್ವಯಿಸುವ ಅಗತ್ಯ ಬೀಳಬಹುದು. ಇದಕ್ಕಾಗಿ, ಚಳಿಗಾಲವು ಬಂದ ತಕ್ಷಣ, ಬ್ರೇಕ್‌ಗಳನ್ನು ಸರಿಪಡಿಸಿಕೊಳ್ಳುವುದು ಉತ್ತಮ ನಡೆ ಎನಿಸಿಕೊಳ್ಳುತ್ತದೆ. ಅದೇ ಸಮಯದಲ್ಲಿ, ಇಬ್ಬನಿಯು ರಸ್ತೆಗಳು ಜಾರುವಂತೆ ಮಾಡುತ್ತದೆ ಎಂಬುದನ್ನು ಮರೆಯಬಾರದು. ಹಾಗಾಗಿ ನಿಮ್ಮ ಸುರಕ್ಷತೆಗಾಗಿ ಬ್ರೇಕ್‌ಗಳು ಮತ್ತು ಸಸ್ಪೆನ್ಷನ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಮನೆಯಿಂದ ಹೊರಡುವ ಮೊದಲು ನಿಮ್ಮ ವಾಹನದ ಬ್ರೇಕಿಂಗ್ ಸಿಸ್ಟಮ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಿ.
Tireಗಳ ಗಾಳಿಯ ಒತ್ತಡವನ್ನು ಪರೀಕ್ಷಿಸಿ
ಬೈಕ್ (Bike) ಇರಲಿ, ಕಾರೇ ಇರಲಿ, ಚಳಿಗಾಲದಲ್ಲಿ ಟೈರ್ ಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಎನಿಸಿಕೊಳ್ಳುತ್ತದೆ. ಟೈರ್‌ಗಳು ಸವೆದಿದ್ದರೆ, ಮಂಜು ಮುಸುಕಿದ ಸಮಯದಲ್ಲಿ ನಿಮ್ಮ ವಾಹನವು ರಸ್ತೆಯಿಂದ ಜಾರಿಬೀಳುವ ಅಪಾಯವೇ ಹೆಚ್ಚಾಗಿರುತ್ತದೆ. ಇಂಥ ಅಪಾಯದಿಂದ ಪಾರಾಗಲು ನಿಮ್ಮ ವಾಹನಗಳ ಸವೆದಿರುವ ಟೈರ್‌ಗಳನ್ನ ಸೂಕ್ತ ಕಾಲದಲ್ಲಿ ಬದಲಿಸುವುದು. ಹಾಗೆಯೇ, ಮನೆಯಿಂದ ಹೊರಡುವ ಮೊದಲು ಟೈರ್‌ನ ಗಾಳಿಯ ಒತ್ತಡವನ್ನು ಪರೀಕ್ಷಿಸಲು ಮರೆಯದಿರಿ. ಟೈರ್ ಟ್ಯೂಬ್ ಲೆಸ್ ಆಗಿದ್ದರೂ, ಕಂಪನಿಯ ಮಾರ್ಗಸೂಚಿಗಳ ಪ್ರಕಾರ ಗಾಳಿಯ ಒತ್ತಡವನ್ನು ಇರಿಸಿ.
award:ಹುಂಡೈನ IONIQ 5 ಕಾರಿಗೆ 2022 'ವರ್ಷದ ಜರ್ಮನ್ ಕಾರು ಪ್ರಶಸ್ತಿ!
ಕುಟುಂಬದೊಂದಿಗೆ ಆನಂದಿಸಿ
ನೀವು ಚಳಿಗಾಲದಲ್ಲಿ ಡ್ರೈವ್ ಮಾಡಲು ಅಥವಾ ಸವಾರಿಗಾಗಿ ಹೊರಗೆ ಹೋಗುತ್ತಿದ್ದರೆ, ಬೆಚ್ಚಗಿನ ಬಟ್ಟೆಗಳನ್ನು ಧರಿಸಿದ ನಂತರವೇ ಮನೆಯಿಂದ ಹೊರಡಿ. ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು. ಇದಲ್ಲದೆ, ತಂಪಾದ ಗಾಳಿಯು ನಿಮ್ಮ ಕಿವಿಗೆ ಪ್ರವೇಶಿಸದಂತೆ ಅಥವಾ ನಿಮ್ಮ ತಲೆಗೆ ಬಡಿಯದಂತೆ ವ್ಯವಸ್ಥೆ ಮಾಡಿಕೊಳ್ಳಿ. ಕೈ ಕೈಗವಸುಗಳನ್ನು ಬಳಸಿ. ನೀವು ಕಾರಿನಲ್ಲಿ ಹೋಗುತ್ತಿದ್ದರೆ, ಕಿಟಕಿಗಳನ್ನು ಮುಚ್ಚಿಕೊಳ್ಳಿ ಮತ್ತು ವೈಪರ್‌ಗಳನ್ನು ಚಾಲನೆಯಲ್ಲಿ ಇರಿಸಿ ಇದರಿಂದ ಮುಂಭಾಗದ ವಿಂಡ್‌ಸ್ಕ್ರೀನ್ ಸ್ವಚ್ಛವಾಗಿರುತ್ತದೆ. ಚಳಿಗಾಲದಲ್ಲಿ ಸಾಕ್ಸ್ ಧರಿಸಿ ವಾಹನ ಚಾಲನೆ ಮಾಡುವುದರಿಂದ ನಿಮ್ಮ ವೈಯಕ್ತಿಕ ಅನುಕೂಲ ಫೀಲ್ ಹೆಚ್ಚಾಗುತ್ತದೆ ಎನ್ನಬಹುದು.