Car of the Year award:ಹುಂಡೈನ IONIQ 5 ಕಾರಿಗೆ 2022 'ವರ್ಷದ ಜರ್ಮನ್ ಕಾರು ಪ್ರಶಸ್ತಿ!

By Suvarna News  |  First Published Nov 30, 2021, 3:52 PM IST

ದಕ್ಷಿಣ ಕೊರಿಯಾ ಮೂಲದ ಹುಂಡೈ ವಾಹನ ಉತ್ಪಾದನೆಯಲ್ಲಿ ಅಗ್ರಗಣ್ಯ ಕಂಪನಿಯಾಗಿದೆ. ಭಾರತವು ಸೇರಿದಂತೆ ಜಗತ್ತಿನಾದ್ಯಂತ  ಹಲವು ಮಾರುಕಟ್ಟೆಗಳಲ್ಲಿ ಪ್ರಭಾವಿಯಾಗಿದೆ. ಕಂಪನಿಯ IONIQ 5 ಕಾರ್ 2022ರ  ಜರ್ಮನ್ ಕಾರ್ ಎಂದು ಗುರುತಿಸಲಾಗಿದೆ. ನ್ಯೂ ಎನರ್ಜಿ ವಿಭಾಗದಲ್ಲಿ ಈ ಕಾರಿಗೆ ಪ್ರಶಸ್ತಿ ಬಂದಿದೆ. ಹಲವು ಆಯ್ಕೆಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಈ ಕಾರ್‌ ಭಾರತದ ರಸ್ತೆಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದೆ.


ಇತ್ತೀಚೆಗೆ ಚೆನ್ನೈನ ರಸ್ತೆಗಳಲ್ಲಿ ಮತ್ತು ಗುರುಗ್ರಾಮ್‌ನಲ್ಲಿರುವ ದಕ್ಷಿಣ ಕೊರಿಯಾದ ಕಂಪನಿಯ ಹೊಸ ಕಚೇರಿಯಲ್ಲಿ ಕಂಡುಬಂದ ಹುಂಡೈನ IONIQ 5 ಅನ್ನು 2022 ರ 'ವರ್ಷದ ಜರ್ಮನ್ ಕಾರು' ಎಂದು ಹೆಸರಿಸಲಾಗಿದೆ. ಹುಂಡೈ ಕಂಪನಿಯು ಭಾರತದಲ್ಲೂ ಅತಿ ಹೆಚ್ಚಿನ ಕಾರುಗಳನ್ನು ಮಾರಾಟ ಮಾಡುವ ಕಂಪನಿಯಾಗಿದೆ. GCOTY ಪ್ರಶಸ್ತಿಗಾಗಿ  ಕಾಂಪ್ಯಾಕ್ಟ್, ಪ್ರೀಮಿಯಂ, ಐಷಾರಾಮಿ, ಪರ್ಫಾರ್ಮೆನ್ಸ್ ಮತ್ತು ನ್ಯೂ ಎನರ್ಜಿ  ಹೀಗೆ ಐದು ವಿಭಾಗಗಳಲ್ಲಿ ವರ್ಷದ ಅಗ್ರ ಕಾರು ಮಾದರಿ ಬಿಡುಗಡೆಗಳು ಪರಸ್ಪರ ಸ್ಪರ್ಧಿಸುತ್ತಿವೆ. 20 ಆಟೋಮೋಟಿವ್ ಜರ್ನಲಿಸ್ಟ್‌ಗಳನ್ನು ಒಳಗೊಂಡಿರುವ ಅಂತರಾಷ್ಟ್ರೀಯ ತೀರ್ಪುಗಾರರು ತಂಡವು ಪ್ರತಿ ಕಾರನ್ನು ಹಾಗೂ ಫೀಚರ್‌ಗಳು, ಪ್ರಸ್ತುತತೆ ಮತ್ತು ಭವಿಷ್ಯದ ಕಾರ್ಯಸಾಧ್ಯತೆಯ ವಿಷಯದಲ್ಲಿ ಪರೀಕ್ಷಿಸಿದ್ದಾರೆ ಮತ್ತು ಮೌಲ್ಯಮಾಪನ ಮಾಡಿದ ಬಳಿಕ ಪ್ರಶಸ್ತಿಗೆ ಕಾರನ್ನು ಆಯ್ಕೆ ಮಾಡಿದ್ದಾರೆ. ಎಲ್ಲರೀತಿಯಲ್ಲಿ ಸೈ ಎನಿಸಿಕೊಂಡ IONIQ 5 "ನ್ಯೂ ಎನರ್ಜಿ" ವಿಭಾಗದಲ್ಲಿ  ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯನ್ನು ಪ್ರದಾನ ಮಾಡಿದ ಜರ್ಮನ್ ಕಾರ್ ಆಫ್ ದಿ ಇಯರ್' ಪ್ರಶಸ್ತಿಯ ಪ್ರಾರಂಭಿಕ ಮತ್ತು ತೀರ್ಪುಗಾರರ ಸದಸ್ಯರಾದ ಜೆನ್ಸ್ ಮೈನರ್ಸ್, ಹ್ಯುಂಡೈ IONIQ 5 ಒಂದು ಅಸಾಧಾರಣ ಎಲೆಕ್ಟ್ರಿಕ್ ಕಾರು ಮಾತ್ರವಲ್ಲದೆ ಈ ವರ್ಷದ ಉನ್ನತ ಮಾದರಿಯಾಗಿದೆ ಎಂದು ಹೇಳಿದರು.

ಚಾಲನೆಯ ಆನಂದ, ವಿನ್ಯಾಸ ಮತ್ತು ದಕ್ಷತೆಯ ಎಲೆಕ್ಟ್ರಿಕ್ ಕಾರಿನ ವಿಶಿಷ್ಟ ಸಂಯೋಜನೆಯನ್ನು ಶ್ಲಾಘಿಸಿದ ಜೆನ್ಸ್, ಈ ಅಂಶಗಳು ಎಲ್ಲಾ ಮಾನದಂಡಗಳಲ್ಲಿ ಸರಾಸರಿಗಿಂತ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡಿದೆ ಎಂದು ಹೇಳಿದರು. IONIQ 5 ರ ಕಾರ್ಯಾಚರಣಾ ಪರಿಕಲ್ಪನೆ ಮತ್ತು ಬ್ಯಾಟರಿ ತಂತ್ರಜ್ಞಾನವು ಹೊಸದಾಗಿದೆ ಎಂದು ಹೇಳುತ್ತಾ, IONIQ 5 ಖಂಡಿತವಾಗಿಯೂ ಜಾಗತಿಕ ಆಕರ್ಷಣೆಯನ್ನು ಹೊಂದಿದೆ ಎಂದು ಜೆನ್ಸ್ ಒತ್ತಿಹೇಳಿದರು.

Latest Videos

Auto News: ಹೊಸ 2022 SX4 S Cross ಅನಾವರಣ, ರಗಡ್ ಲುಕ್, ಸಖತ್ ಸ್ಟೈಲಿಶ್! 

ಹ್ಯುಂಡೈನ IONIQ ಸರಣಿ ಬ್ರ್ಯಾಂಡ್‌ನಲ್ಲಿ ಮೊದಲ ಮಾದರಿಯಾಗಿರುವ IONIQ 5, ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳಿಗೆ ಮೀಸಲಾಗಿರುವ ಹುಂಡೈ ಮೋಟಾರ್ ಗ್ರೂಪ್‌ನ ಎಲೆಕ್ಟ್ರಿಕ್ ಗ್ಲೋಬಲ್ ಮಾಡ್ಯುಲರ್ ಪ್ಲಾಟ್‌ಫಾರ್ಮ್ (E-GMP) ನಲ್ಲಿ ನಿರ್ಮಿಸಲಾಗಿದೆ. ಖರೀದಿದಾರರು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳ ನಡುವೆ ಆಯ್ಕೆ ಮಾಡಬಹುದು --58 kWh ಅಥವಾ 72.6 kWh ಮತ್ತು ಆಲ್-ವೀಲ್ ಅಥವಾ ಹಿಂಬದಿ-ವ್ಹೀಲ್ ಡ್ರೈವ್ ಆಪ್ಷನ್‌ಗಳಲ್ಲಿ ಖರೀದಿಸಬಹುದಾಗಿದೆ. ಹಿಂಬದಿ-ಚಕ್ರ-ಡ್ರೈವ್ ಮತ್ತು 72.6-kWh ಆವೃತ್ತಿಯಲ್ಲಿ ಒಂದೇ ಚಾರ್ಜ್‌ನಲ್ಲಿ 481 ಕಿಲೋಮೀಟರ್‌ಗಳ ಗರಿಷ್ಠ ಚಾಲನಾ ವ್ಯಾಪ್ತಿಯನ್ನು ಸಾಧಿಸುವ ಸಾಮರ್ಥ್ಯವನ್ನು ಈ ಕಾರ್ ಹೊಂದಿದೆ.

ಹುಂಡೈ IONIQ 5 ಅನ್ನು ಫ್ಯೂಚರಿಸ್ಟಿಕ್ ಎಲೆಕ್ಟ್ರಿಕ್ ಕ್ರಾಸ್ಒವರ್ SUV ಕಾರ್ ಆಗಿ ಅಭಿವೃದ್ಧಿಪಡಿಸಲಾಗಿದೆ. IONIQ 5 ರ ಮುಂಭಾಗದಲ್ಲಿ ಹೆಚ್ಚಿನ LED ಹೆಡ್‌ಲೈಟ್‌ಗಳು ಮತ್ತು ಕ್ವಾಡ್ DRL ಗಳನ್ನು ನೀಡಲಾಗಿದೆ. ಕ್ಯಾಬಿನ್‌ನಲ್ಲಿ ಎರಡು ದೊಡ್ಡ ಡಿಸ್‌ಪ್ಲೇ ಗಳನ್ನು ನೀಡಲಾಗಿದೆ, ಇದರಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಅನ್ನು ಒದಗಿಸಲಾಗಿದೆ. ಹ್ಯುಂಡೈ ಬೋಸ್ ಸೌಂಡ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಏಳು ಏರ್‌ಬ್ಯಾಗ್‌ಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ. 

Auto Arrivals: ನೆಕ್ಸ್ಟ್ ಜೆನ್ ಟಾಟಾ ಟಿಯಾಗೋ ಸೇರಿ 10 ಹೊಸ ವಾಹನಗಳು!

IONIQ 5 ಭಾರತದಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದೆ.   ಭಾರತೀಯ ಮಾರುಕಟ್ಟೆಯಲ್ಲಿ ಈ ಎಲ್ಲ ಎಲೆಕ್ಟ್ರಿಕ್ ಕಾರುಗಳು ಯಾವಾಗ ಬಿಡುಗಡೆಯಾಗಲಿವೆ ಎಂಬುದನ್ನು ಹುಂಡೈ ಇನ್ನೂ ಖಚಿತಪಡಿಸಿಲ್ಲ. 

click me!